ಪ್ಯಾಲೇಸ್ತಿನಿನಲ್ಲಿ ದುಷ್ಟರ ದಸರಾ

2 years ago

ಪ್ಯಾಲೇಸ್ತಿನಿನಲ್ಲಿ ದುಷ್ಟರ ದಸರಾ

ದಶಕಗಳಿಂದ
ಪ್ಯಾಲೇಸ್ತೀನಿನಲ್ಲಿ
ದಾಳಿಕೋರರ ದಸರಾ

ವರ್ಷವೊಪ್ಪತ್ತಿನಿಂದ
ಗಾಜದಲ್ಲಿ
ಇಸ್ರೇಲಿ ರಾಕೆಟ್ಟುಗಳ
ನಿತ್ಯ ದೀಪಾವಳಿ…

ಅಮೇರಿಕಾದ
ಬಾಂಬುಗಳು
ಯುರೋಪಿನ
ಸುಡುಬತ್ತಿ..

ದುಷ್ಟಕೂಟದ
ವಿಜಯ ದಶಮಿ ..

ಕಟ್ಟಡಗಳು ಉರುಳುವಾಗಲಂತೂ…
ಆಟಂ ಬಾಂಬಿನ ಗುಡುಗು…

ಜೊತೆಗೆ
ನಿಲ್ಲದ ಆಕ್ರಂದನಗಳ
ನಿರಂತರ ಸಂಗೀತ…

ಸುರುಸುರು ಬತ್ತಿಗೆ
ಹೆದರುವ ಕೋಮಲವಾದಿಳಿಗೂ..

ಬಾಂಬುಗಳ ದಸರಾ
ಎಂದರೆ
ಬೆರಗು ಅಭಿಮಾನ…
ಇಸ್ರೇಲ್ ಎಂದರೆ ಸುಮ್ಮಾನ…

ಆಹಾ
ದಸರಾ
ಎಷ್ಟು ರಂಗು ರಂಗು…

ಗಾಜದ ಕಡಲಿನಂತೆ
ಜಿಯೋನಿಸ್ಟರ
ಇರುಳೆಲ್ಲ ಕಡು ಕೆಂಪು
ಹಗಲೆಲ್ಲ ಕಡುಕಪ್ಪು

– ಶಿವಸುಂದರ್, 9448659774

Leave a Reply