ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವರ್ಷದಲ್ಲಿ ಹಲವಾರು ಮಹಾಪುರುಷರ ಜಯಂತಿಗಳು ನಡೆಯುತ್ತಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈ ಎಲ್ಲ ಕಾರ್ಯಕ್ರಮಗಳ ಜಾಹೀರಾತಿನ ಒಟ್ಟು ಮೊತ್ತ ಎಷ್ಟು ಕೋಟಿ ಎಂದು ಲೆಕ್ಕ ಹಾಕಿದಾಗ ಅಷ್ಟು ಹಣದಲ್ಲಿ ಅದೆಷ್ಟೋ ರಚನಾತ್ಮಕವಾದ ಕಾರ್ಯವನ್ನು ಮಾಡಲು ಸಾಧ್ಯವಿದೆ.
ಎಲ್ಲ ಕಾರ್ಯಕ್ರಮಗಳು ಒಂದೇ ರೀತಿಯಲ್ಲಿ ಇರುತ್ತವೆ. ಕೆಲವು ಮಹಾಪುರುಷರ ಜಯಂತಿಯ ಸಂದರ್ಭದಲ್ಲಿ ಅದ್ದೂರಿ ಇರುತ್ತದೆ. ಸಭಾಂಗಣದಲ್ಲಿ ಪ್ರೇಕ್ಷಕರು ತುಂಬಿರುತ್ತಾರೆ. ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತದೆ. ಆದರೆ ಕೆಲವು ಮಹಾಪುರುಷರ ಜಯಂತಿಯ ಕಾರ್ಯಕ್ರಮಗಳಲ್ಲಿ ಸಭಾಂಗಣದಲ್ಲಿ ಜನರ ಕೊರತೆ ಎದ್ದು ಕಾಣುತ್ತಿರುತ್ತದೆ. ಕಾರ್ಯಕ್ರಮದಲ್ಲೂ ಉತ್ಸಾಹವಿರುವುದಿಲ್ಲ. ಕಾರ್ಯಕ್ರಮವನ್ನು ನಡೆಸಬೇಕು ಎನ್ನುವ ಒಂದೇ ಕಾರಣಕ್ಕೆ ಸಮಾರಂಭವನ್ನು ಆಯೋಜನೆ ಮಾಡುತ್ತಾರೆ.
ಕೆಲವು ಸಾಧಕರ ಜಯಂತಿಯ ಸಮಾರಂಭದ ವರದಿಗಳು ದೊಡ್ಡದಾಗಿ ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿಗಳ ಕಾರ್ಯಕ್ರಮಗಳು ಪತ್ರಿಕೆ ಯಾವ ಮೂಲೆಯಲ್ಲೂ ಕಾಣುವುದಿಲ್ಲ.
ಪ್ರಬಲವಾದ ಸಂಘಟಿತ ಸಮಾಜದ ಮಹಾಪುರುಷರ ಜಯಂತಿಯ ಸಂದರ್ಭದಲ್ಲಿ ಇರುವಷ್ಟು ಸಂಭ್ರಮ ಮತ್ತು ಅದ್ದೂರಿತನ, ಸಣ್ಣಪುಟ್ಟ ಸಮಾಜದ ಅಷ್ಟೊಂದು ಪ್ರಬಲವಾದ ಸಂಘಟಿತರಲ್ಲದ ಸಮಾಜವನ್ನು ಪ್ರತಿನಿಧಿಸುವ ಮಹಾಪುರುಷರ ಜಯಂತಿಯ ಸಂದರ್ಭದಲ್ಲಿ ಕಾರ್ಯಕ್ರಮ ತುಂಬಾ ಸಪ್ಪೆಯಾಗಿ ಕಾಣುತ್ತದೆ.
ಕಾರ್ಯಕ್ರಮವನ್ನು ಆಯೋಜಿಸುವವರು ಕನಿಷ್ಠ ಒಬ್ಬ ವ್ಯಕ್ತಿಯಿಂದ ಆ ಮಹಾಪುರುಷರ ಸಾಧನೆ ಮತ್ತು ಬದುಕನ್ನ ಜನರಿಗೆ ಪರಿಚಯಿಸುವ ಕನಿಷ್ಠ 15 ನಿಮಿಷಗಳ ಕಾಲದ ಒಂದು ಉಪನ್ಯಾಸವನ್ನು ಸಹ ಎಷ್ಟೋ ಸಂದರ್ಭದಲ್ಲಿ ಏರ್ಪಡಿಸಿರುವುದಿಲ್ಲ. ಎಲ್ಲ ಸಮಾರಂಭಗಳು ಕೇವಲ ರಾಜಕೀಯ ವಿಚಾರಗಳಿಗೆ ಸೀಮಿತವಾಗಿರುತ್ತದೆ. ಬಹಳಷ್ಟು ಭಾಷಣಕಾರರಿಗೆ ಕಾರ್ಯಕ್ರಮದ ಸಾಧಕರ ಮಾಹಿತಿಯೂ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದು ಚಿಂತನೆಯನ್ನು ನಡೆಸಬೇಕಾಗಿದೆ. ಎಲ್ಲ ಸಾಧಕರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಯೇ ನಡೆಸಬೇಕು ಎಂಬ ಧೋರಣೆ ಏಕೆ? ಯಾವ ಸಾಧಕರು ಯಾವ ಕ್ಷೇತ್ರದಲ್ಲಿ ಸಾಧನೆಯನ್ನ ಮಾಡಿದ್ದಾರೆ ಮತ್ತು ಯಾವ ಜಿಲ್ಲೆಯಲ್ಲಿ ಅವರ ಸಂಬಂಧಿಸಿದ ವಿಚಾರಗಳನ್ನು ಮತ್ತು ವೃತ್ತಿಯನ್ನು ಅವಲಂಬಿಸಿರುವ ಜನರು ಇದ್ದಾರೆ ಅಂತಹ ಜಿಲ್ಲೆ ಮತ್ತು ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಇದರಿಂದ ಸಾಧಕರ ಅನುಯಾಯಿಗಳು ಮತ್ತು ಆರಾಧಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಎಲ್ಲಾ ಕಾರ್ಯಕ್ರಮದಲ್ಲೂ ನಗರದಲ್ಲಿ ಇಂದು ಕಾರ್ಯಕ್ರಮವನ್ನು ನೋಡಿ ಹಾಜರಾಗುವ ಜನರು ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಉಳಿದಂತೆ ಕನ್ನಡ ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಸಾಂಸ್ಕೃತಿಕ ತಂಡದ ಕಲಾವಿದರು, ಮಾತ್ರವೇ ಇರುತ್ತಾರೆ.
ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಮತ್ತು ಅಧಿಕಾರಿಗಳು ಈ ವಿಚಾರದಲ್ಲಿ ಗಂಭೀರವಾಗಿ ಆಲೋಚಿಸಬೇಕಾಗಿದೆ. ಇಲ್ಲದಿದ್ದರೆ ಬಹಳಷ್ಟು ಕಾರ್ಯಕ್ರಮಗಳು ಕೇವಲ ಇಲಾಖೆಯ ಹಣವನ್ನ ಖರ್ಚು ಮಾಡಲು ಮಾತ್ರವೇ ಕಾರ್ಯಕ್ರಮವನ್ನು ಮಾಡಿದಂತಾಗುತ್ತದೆ. ಇದರಿಂದ ಯಾವ ಸಂದೇಶವು ಯಾರಿಗೂ ಹೋಗುವುದಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು



