ಬೆಳಗಾವಿ: ಚಿಕ್ಕೋಡಿ ಪುರಸಭೆ ವತಿಯಿಂದ ಕಡ್ಡಾಯವಾಗಿ ಬಾಲ ಗಂಗಾಧರ ತಿಲಕ ಹಾಗೂ ವಿ.ಡಿ.ಸಾವರ್ಕರ ಅವರ ಭಾವಚಿತ್ರಗಳನ್ನು ಎಲ್ಲ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಇಡಬೇಕು ಎಂಬ ಅಲಿಖಿತ ನಿಯಮ ತೀವ್ರ ರಾಜಕೀಯ ಪ್ರಚಾರ ಪಡೆಯಿತ್ತಿದೆ.
ಇದನ್ನು ವಿರೋಧಿಸಿ ಚಿಕ್ಕೋಡಿಯ ಇಂದಿರಾ ನಗರದ ಶ್ರೀ ಸಿದ್ದಿವಿನಾಯಕ ಮಿತ್ರ ಮಂಡಳದಲ್ಲಿ ಎಲ್ಲಾ ಸಮುದಾಯದ ಯುವಕರು ಸೇರಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ನಿಜವಾಗಿಯೂ ಪ್ರಾಣ ಕೊಟ್ಟ ವೀರರ ಹಾಗೂ ಸಮಾಜಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾಪುರುಷರ ಹಾಗೂ ಸಾಮಾಜಿಕ ಸುಧಾರಕರ ಭಾವಚಿತ್ರಗಳನ್ನು ಇಟ್ಟು ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಗಣೇಶೋತ್ಸವ ವೇಳೆ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಶಿವಾಜಿ, ಶಾಹು ಮಹಾರಾಜ್, ಕಿತ್ತೂರು ರಾಣಿ ಚೆನ್ನಮ್ಮ, ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿ ಬಾ ಫುಲೆಯವರ ಭಾವಚಿತ್ರಗಳನ್ನು ಇರಿಸಲಾಯಿತು.
ಈ ಸಂದರ್ಭದಲ್ಲಿ ಜೀವನ ಮಾಂಜ್ರೇಕರ್, ಉದಯ ವಾಘಮಾರೆ ಸೇರಿದಂತೆ ಮಂಡಳದ ಅನೇಕ ಯುವಕರು ಉಪಸ್ಥಿತರಿದ್ದರು.




