ಆರೋಗ್ಯಕರ ಹುರುಳಿಕಾಳು ರಸಂ ಮಾಡುವ ವಿಧಾನ

2 months ago

1ನೇ ಹಂತ: 50 ಗ್ರಾಂ ಹುರುಳಿ ಕಾಳು ಉರಿದು 4 ಗಂಟೆಗಳ ಕಾಲ ನೆನೆಸಿಡಿ. ಅನಂತರ 1 ಚಮಚ ದನಿಯಾ, 1 ಚಮಚ ಕಾಳುಮೆಣಸು, 1 ಚಮಚ ಜೀರಿಗೆ, ಕಾಲು ಚಮಚ ಮೆಂತ್ಯ ಕಾಳು, 5-6 ಒಣ ಮೆಣಸಿನಕಾಯಿ, 2 ಎಸಳು ಕರಿಬೇವು ಹಾಕಿ ಡ್ರೈ ರೋಸ್ಟ್‌ ಮಾಡಿ. ತಣ್ಣಗಾದ ನಂತರ 1 ಬೆಳ್ಳುಳ್ಳಿ ಸಿಪ್ಪೆ ತೆಗೆದುಹಾಕಿ ಪೌಡರ್‌ ಮಾಡಿಟ್ಟುಕೊಳ್ಳಿ.

2ನೇ ಹಂತ: ನಿಂಬೆ ಗಾತ್ರದ ಹುಣಿಸೆಹಣ್ಣನ್ನು ನೆನಸಿಡಿ, ನೆನೆ ಇಟ್ಟಿರುವ ಉರಿದ ಹುರುಳಿ ಕಾಳನ್ನು ಕುಕ್ಕರ್‌ ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಮೂರು ವಿಶಲ್‌ ಕೂಗಿಸಿ ಇಟ್ಟುಕೊಳ್ಳಿ. ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

3ನೇ ಹಂತ: ಒಗ್ಗರಣೆಗೆ ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕರಿಬೇವು, ಟೊಮ್ಯಾಟೋ, ಉಪ್ಪು, ಅರಿಶಿಣ ಪುಡಿ, ಸ್ವಲ್ಪ ಹಿಂಗು ಹಾಕಿ. ಟೊಮ್ಯಾಟೋ ಸ್ವಲ್ಪ ಮೆತ್ತಗಾದ ನಂತರ ನೀವು ಸಿದ್ಧಪಡಿಸಿ ಇಟ್ಟುಕೊಂಡಿರುವ ರಸಂ ಪೌಡರ್‌ ಅನ್ನು ಹಾಕಿ. ನಂತರ ಹುಣಿಸೆ ಹುಳಿ ಮತ್ತು ರುಬ್ಬಿಕೊಂಡಿರುವ ಹುರುಳಿ ಕಾಳಿನ ಮಿಶ್ರಣ ಹಾಕಿ 3-4 ನಿಮಿಷ ಬಿಸಿ ಮಾಡಿ. ಒಗ್ಗರಣೆಗೆ ಎಲ್ಲವನ್ನು ಹಾಕಿದ ನಂತರ ಕೊತ್ತುಂಬರಿ ಸೊಪ್ಪು ಹಾಕುವುದನ್ನು ಮರೆಯಬೇಡಿ.

4ನೇ ಹಂತ: ಅನ್ನ, ಮುದ್ದೆ ಜೊತೆಗೆ ಸವಿಯಲು ಬಿಸಿಬಿಸಿ ಹಬೆಯಾಡುವ ಹುರುಳಿಕಾಳು ರಸಂ ಸಿದ್ಧವಾಗಿರುತ್ತದೆ.

ಆಹಾರವೇ ಆರೋಗ್ಯ: ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಿರುವವರಿಗೆ, ಯುರಿನ್‌ ಇಂಪೆಕ್ಷನ್‌, ಮುಟ್ಟಿನ ಸಮಸ್ಯೆ ಇರುವವರಿಗೆ, ಕಿಡ್ನಿ ಸಮಸ್ಯೆ ಇರುವವರಿಗೆ, ಅಜೀರ್ಣ ಸಮಸ್ಯೆಯವರಿಗೆ ಹುರುಳಿಕಾಳು ರಸಂ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Leave a Reply