ಧಾರವಾಡ: ಕನ್ನಡದ ಹೆಸರಾಂತ ಸಾಹಿತಿ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಹೆಸರಲ್ಲಿ ನಿಡುವ “ವಿಮರ್ಶಾ ಪ್ರಶಸ್ತಿಗೆ” ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಡಾ. ಗಿರಡ್ಡಿ ಗೋವಿಂದರಾಜ ಅವರ ಸ್ಮರಣಾರ್ಥ ಪ್ರತಿ ವರ್ಷ ಕನ್ನಡದ ಒಂದು ಸ್ವತಂತ್ರ ವಿಮರ್ಶಾ ಕೃತಿಗೆ ಧಾರವಾಡದ ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಪ್ರಸ್ತುತ ಪ್ರಶಸ್ತಿಯನ್ನು ೦೧-೦೧-೨೦೨೩ ರಿಂದ ೩೧-೧೨-೨೩ರ ವರೆಗೆ ಪ್ರಥಮ ಸಲ ಮುದ್ರಣಗೊಂಡಿರುವ ಕನ್ನಡದ ವಿಮರ್ಶಾ ಕೃತಿಗೆ ನೀಡಲಾಗುವುದು. ಪ್ರಶಸ್ತಿ ೨೫ ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಒಬ್ಬ ವಿಮರ್ಶಕರ ಒಂದು ಕೃತಿಯನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಗೆ ಕಳುಹಿಸುವ ಕೃತಿಯ ೪ ಪ್ರತಿಗಳನ್ನು ೩೦-೦೬-೨೦೨೪ (೩೦ ಜೂನ್, ೨೦೨೪) ರೊಳಗಾಗಿ ತಲುಪುವಂತೆ ಕಳುಹಿಸಬೇಕು.
ವಿಳಾಸ: ಅಧ್ಯಕ್ಷರು, ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಮನೋಹರ ಗ್ರಂಥಮಾಲಾ, ಸುಭಾಸ ರಸ್ತೆ, ಧಾರವಾಡ-೫೮೦೦೦೧
ಅವಧಿ ಮೀರಿ ತಲುಪುವ ಕೃತಿಗಳನ್ನು ಪ್ರಶಸ್ತಿಗೆ ಸ್ವೀಕರಿಸುವುದಿಲ್ಲ. ಸಂಗ್ರಹ, ಸಂಕಲನ, ಅನುವಾದ, ಪಿಎಚ್ಡಿ ಸಂಶೋಧನಾ ಪ್ರಬಂಧಗಳಂಥ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಪ್ರೋ. ಮಲ್ಲಿಕಾರ್ಜುನ ಹಿರೇಮಠ, ಅಧ್ಯಕ್ಷರು, ೯೯೪೫೬ ೦೭೧೪೪.




