ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಯ 16ನೇ ಮುಂಗಡಪತ್ರವನ್ನು ಮಂಡಿಸಿರುವ ಸಂದರ್ಭದಲ್ಲಿ ಬಿಜೆಪಿಯ ವಿಕೃತ ಮನಸ್ಸಿನ ನಾಯಕರುಗಳು ಮುಂಗಡಪತ್ರವನ್ನು ತಮ್ಮ ಮನಸ್ಸಿನ ಭಾವನೆಯಂತೆ ವಿಶ್ಲೇಷಿಸಿರುವುದು ಅವರ ಮಾತುಗಳಲ್ಲಿ ಕಾಣಬಹುದಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಾಲ್ಕು ಲಕ್ಷ ಒಂಬತ್ತು ಸಾವಿರ ಕೋಟಿ ರೂಪಾಯಿಗಳ ಮುಂಗಡಪತ್ರದಲ್ಲಿ ಅಲ್ಪಸಂಖ್ಯಾತರಿಗೆ 4000 ಕೋಟಿ ರೂಪಾಯಿಗಳನ್ನು ವಿವಿಧ ಯೋಜನೆಗಳಿಗೆ ಘೋಷಣೆ ಮಾಡಿದ ಮಾತ್ರಕ್ಕೆ ಇದನ್ನು ಪಾಕಿಸ್ತಾನದ ಬಜೆಟ್, ಹಲಾಲ್ ಬಜೆಟ್, ಸಾಬರ ಬಜೆಟ್ ಎಂದು ಲಘುವಾಗಿ ಮಾತನಾಡುವ ಬಿಜೆಪಿ ನಾಯಕರಿಗೆ ಮುಂಗಡ ಪತ್ರದ ಅಷ್ಟೂ ಪುಟಗಳನ್ನು ಓದುವಷ್ಟು ಸಂಯಮವೂ ಇಲ್ಲ ಮತ್ತು ಸಹನೆಯೂ ಇಲ್ಲ. ಆದುದರಿಂದ ಮುಂಗಡಪತ್ರದ ನೂರಾರು ಪುಟಗಳಲ್ಲಿನ ಒಂದೆರಡು ಪುಟಗಳನ್ನ ಓದಿ ಅದನ್ನೇ ಮುಂಗಡಪತ್ರವೆಂದು ತಮ್ಮ ಸಂಕುಚಿತ ಭಾವನೆಯಿಂದ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳು ಮಾತನಾಡುವ ರೀತಿಯನ್ನು ಗಮನಿಸಿದಾಗ ನಿಜಕ್ಕೂ ಇವರಿಗೆ ಇಂತಹ ಸಣ್ಣ ಮಟ್ಟದ ಟೀಕೆಗಳನ್ನು ಬಿಟ್ಟರೆ ರಚನಾತ್ಮಕವಾಗಿ ಚರ್ಚೆ ಮಾಡುವಂತಹ ಮನಸ್ಥಿತಿಯೇ ಇಲ್ಲದಿರುವುದು ತಿಳಿದುಬರುತ್ತದೆ.
ಕರ್ನಾಟಕದ ಮುಂಗಡಪತ್ರವನ್ನು ಅನೇಕ ಆರ್ಥಿಕ ತಜ್ಞರು ಹಾಗೂ ಉದ್ಯಮಿಗಳು, ರೈತ ನಾಯಕರು, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅನುಭವಿಗಳೆಲ್ಲರೂ ದೂರದೃಷ್ಟಿತ್ವದ ಅಭಿವೃದ್ಧಿಗೆ ಪೂರಕವಾದ ಎಲ್ಲರನ್ನೂ ಒಳಗೊಂಡ ಮುಂಗಡಪತ್ರವೆಂದು ಮುಕ್ತವಾಗಿ ಪ್ರಶಂಸಿರುತ್ತಾರೆ. ಆದರೆ ಬಿಜೆಪಿಯ ನಾಯಕರಿಗೆ ಅದರಲ್ಲೂ ಕೇಂದ್ರದ ನಾಯಕರಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಬರುವುದಿಲ್ಲ.
ರಾಜ್ಯದ ಮುಂಗಡದ ಪತ್ರ ಇದರ ಬಗ್ಗೆ ಟೀಕೆ ಮಾಡುವ ಕೇಂದ್ರದ ಸಚಿವರೆ ಮೊದಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಹಣವನ್ನು ಮೊದಲು ತಂದುಕೊಡಲು ನಿಮ್ಮ ಧ್ವನಿಯನ್ನ ತೆಗೆಯಿರಿ. ಜೊತೆಗೆ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆಗಾಗಿ ಕಾದು ಕುಳಿತಿರುವ ಯೋಜನೆಗಳಿಗೆ ಅನುಮತಿಯನ್ನು ನೀಡಲು ನಿಮ್ಮ ನಾಯಕರುಗಳ ಮುಂದೆ ನಿಂತು ಮಾತನಾಡುವುದನ್ನು ಮೊದಲು ಕಲಿಯಿರಿ. ವ್ಯಂಗ್ಯದ, ಕೀಳು ಮಟ್ಟದ ಪದಗಳನ್ನು ಬಳಸಿ ಟೀಕಿಸುವ ನೀವು ಕರ್ನಾಟಕಕ್ಕೆ ನಿಮ್ಮ ಕೊಡುಗೆಗಳೇನು ಎಂಬುದನ್ನು ಒಂದು ಬಾರಿ ಪ್ರಶ್ನೆ ಮಾಡಿಕೊಳ್ಳಿ.
ಸಿದ್ದರಾಮಯ್ಯ ಅವರು ಮಂಡನೆ ಮಾಡಿರುವ ಬಜೆಟ್ ಐದು ಗ್ಯಾರಂಟಿಗಳನ್ನು ಪೂರೈಸುತ್ತದೆ. ಅಭಿವೃದ್ಧಿಗೂ ಹೆಚ್ಚಿನ ಗಮನವನ್ನು ಕೊಟ್ಟು ಅದಕ್ಕೆ ಬೇಕಾದಂತಹ ಸಂಪನ್ಮೂಲಗಳ ರೂಢೀಕರಣದ ದಾರಿಯನ್ನು ಹುಡುಕಿಕೊಂಡಿರುವ ರಾಜ್ಯದ ಮುಂಗಡಪತ್ರ ನಿಜಕ್ಕೂ ಜನಪರವಾದ ಸಮಾನತೆಯ ಸಂದೇಶವನ್ನು ಸಾರುವ ಮುಂಗಡಪತ್ರವಾಗಿದೆ.
ದೇಶದಲ್ಲಿಯೇ 16 ಬಾರಿ ಮುಂಗಡಪತ್ರವನ್ನ ಮಂಡಿಸಿದಂತಹ ದಾಖಲೆ ಸಿದ್ದರಾಮಯ್ಯನವರ ಹೆಸರಿನಲ್ಲಿ ನಿರ್ಮಾಣವಾಗಿದೆ. ಕೇವಲ ಮುಂಗಡಪತ್ರವನ್ನು ಮಂಡಿಸುವುದು ಅಷ್ಟೇ ಅಲ್ಲ, ಅವರ ಪ್ರತಿಯೊಂದು ಮುಂಗಡಪತ್ರವು ಆರ್ಥಿಕ ಶಿಸ್ತು ಮತ್ತು ಪ್ರಗತಿಗೆ ಪೂರಕವಾದ ವಿಚಾರಗಳನ್ನು ಒಳಗೊಂಡಿದೆ ಎನ್ನುವುದನ್ನು ಆರ್ಥಿಕ ತಜ್ಞರೇ ದೇಶದಲ್ಲಿ ಒಪ್ಪಿಕೊಂಡಿದ್ದಾರೆ. ವಿಶ್ವಸಂಸ್ಥೆಯಲ್ಲಿಯೇ ಕರ್ನಾಟಕದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಮಾದರಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಬಿಜೆಪಿಯವರು ಆಳವಾದ ಅಧ್ಯಯನ ಮಾಡದೆ, ಕೇವಲ ತಾವು ಸಾಕಿಕೊಂಡಿರುವ ಮಾಧ್ಯಮದವರ ಮುಂದೆ ಮಾತನಾಡಿ ಅದನ್ನೇ ಸತ್ಯವೆಂದು ರಾಜ್ಯದ ಜನರಿಗೆ ತಿಳಿಸುವಂತಹ ಪ್ರಯತ್ನವನ್ನ ನಡೆಸುತ್ತಿದ್ದೀರಿ. ನೀವು ಸಾಕಿರುವ ಮಾಧ್ಯಮದವರು ನಿಮ್ಮ ಮಾತುಗಳನ್ನ 24 ಗಂಟೆಯೂ ತುತ್ತೂರಿ ಊದಿ ಸಂಭ್ರಮಿಸಬಹುದು. ಆದರೆ ರಾಜ್ಯದ ಜನರು ಮುಂಗಡಪತ್ರದ ಫಲವನ್ನ ಅನುಭವಿಸುತ್ತಿರುವವರು ಯೋಜನೆಗಳ ಮೂಲಕ ಬದುಕನ್ನ ಕಟ್ಟಿಕೊಂಡಿರುವ ಕೋಟ್ಯಾಂತರ ಜನರು ಸರ್ಕಾರದ ಪರವಾಗಿದ್ದಾರೆ. ತುತ್ತೂರಿ ಊದುವ, ಯಾವುದೇ ಆರ್ಥಿಕತೆಯ ಜ್ಞಾನವು ಇಲ್ಲದ ಒಂದು ಪಕ್ಷದ ವಕ್ತಾರರಂತೆ ದ್ವೇಷದ ಅಸೂಯೆಯ ಬೀಜವನ್ನ ಬಿತ್ತುತ್ತಿರುವ ನೀವು ಸಾಕಿಕೊಂಡಿರುವ ಮಾಧ್ಯಮಗಳ ಮಾತುಗಳನ್ನು ಜನರು ಕುತಂತ್ರಿಗಳ ಮಾತುಗಳೆಂದು ತಿರಸ್ಕರಿಸುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




