ಬಿ.ಎಲ್. ರೈಸ್ ( 17-07-1837 – 10-07-1927)

2 years ago

ಬಿ.ಎಲ್. ರೈಸ್: ಜನನ: 17-07-1837 ಬೆಂಗಳೂರಿನಲ್ಲಿ. ತಂದೆ: ಬೆಂಜಮಿನ್ ಹೋಲ್ಡ್‌ ರೈಸ್. ಶಿಕ್ಷಣ: ಪ್ರಾಥಮಿಕ ವ್ಯಾಸಂಗ ಬೆಂಗಳೂರಿನಲ್ಲಿ, ಉನ್ನತ ವ್ಯಾಸಂಗ ಇಂಗ್ಲೆಂಡಿನಲ್ಲಿ. ವೃತ್ತಿ: ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರು. (1865) ಶಾಲಾ ಇನ್‌ಸ್ಪೆಕ್ಟರ್ ಅಧಿಕ ಕಾರ್ಯಭಾರ. ಪ್ರಾಚ್ಯವಸ್ತು, ಶಾಸನಗಳ ಸಂಗ್ರಹಾಸಕ್ತಿ (1873), ಮೈಸೂರು ಗೆಜೆಟಿಯರ್ ಸಂಯೋಜಕರು. (1874) ಶಿಕ್ಷಣ ಇಲಾಖೆ ನಿರ್ದೇಶಕರು. (1880) ಸಂಸ್ಕೃತ ಹಸ್ತಪ್ರತಿಗಳ ರಚನೆಗೆ ನೇಮಕ. (1882) ಹಂಟ‌ರ್ ಶಿಕ್ಷಣ ಸಮಿತಿ ಕಾರ್ಯದರ್ಶಿ. (1883) ಪೊಲೀಸ್ ಹಾಗೂ ವಿದ್ಯಾ ಇಲಾಖೆಗಳ ಕಾರ್ಯದರ್ಶಿ, (1884) ರಲ್ಲಿ ಸಿ.ಐ.ಇ. ಬಿರುದು. (1886) ಪ್ರಾಚ್ಯವಸ್ತು ಶೋಧನಾ ಇಲಾಖೆ ನಿರ್ದೇಶಕರು. (1887) ಮದರಾಸು ವಿ.ವಿ. ಫೆಲೊ. (1892) ಮೈಸೂರು ಗೆಜೆಟಿಯರ್‌ನ ಪುನರ್‌ಮುದ್ರಣ ಜವಾಬ್ದಾರಿ. 1906ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ, ಇಂಗ್ಲೆಂಡ್‌ಗೆ ವಾಪಸ್. ನಿಧನ: 10-07-1927

ಸಾಹಿತ್ಯ ಕೃಷಿ: ಮೈಸೂರು ಮತ್ತು ಕೊಡಗು ಪ್ರಾಂತ್ಯಗಳ ಗೆಜೆಟಿಯರ್ (1877), Mysore Inscriptions (1879), ಮೈಸೂರು ಮತ್ತು ಕೊಡಗು ಪ್ರಾಚೀನ ಹಸ್ತಪ್ರತಿಗಳ ಸೂಚಿ (1880), ಕರ್ನಾಟಕ ಭಾಷಾ ಭೂಷಣ (1884), ಎಪಿಗ್ರಾಫಿಯಾ ಕರ್ನಾಟಕ ಸಂಪುಟಗಳು, ಮೊದಲ ಸಂಪುಟ Coorg Inscriptions (1886), ಗ್ರಂಥ ಸಂಪಾದನೆ: ತಿರುನಗರಿ ರಾಮಾನುಜಯ್ಯಂಗಾರ್ಯರ ರಾಮಾಯಣ (1898), ಶಬ್ದಾನುಶಾಸನಂ (1890), ಪಂಪ ರಾಮಾಯಣ (1892), ವಿಕ್ರಮಾರ್ಜುನ ವಿಜಯ (1898), ಕವಿರಾಜ ಮಾರ್ಗ (1898), ಕಾವ್ಯಾವಲೋಕನ (1903), Mysore and Coorg from Inscriptions (1909). ಇಂಡಿಯನ್ ಆಂಟಿಕ್ವೆರಿ ಮುಂತಾದ ವಿದ್ವತ್ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

Leave a Reply