ಬಿಜೆಪಿ ನಾಯಕರು ಸ್ಪಟಿಕದಷ್ಟು ಶುದ್ಧ!
ಅವರ ಸರ್ಕಾರಗಳು ಶೂನ್ಯ ಭ್ರಷ್ಟಾಚಾರದ ಆಡಳಿತದ ಪ್ರತೀಕ
ದೇಶದಲ್ಲಿ ಇರುವಂತಹ ಕರ್ನಾಟಕದ ರಾಜಕಾರಣಿಗಳು ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಸ್ಪಟಿಕದಷ್ಟು ಶುದ್ಧವಾಗಿದ್ದಾರೆ, ಯಾರು ಸಹ ಭ್ರಷ್ಟಾಚಾರವನ್ನು ಮಾಡಿಲ್ಲ, ಸ್ವಜನ ಪಕ್ಷಪಾತವನ್ನು ಮಾಡಿಲ್ಲ, ಅನ್ಯಾಯವನ್ನು ಮಾಡಿಲ್ಲ. ಅದೇ ರೀತಿಯಲ್ಲಿ ಇವರ ಪಕ್ಷವಿರುವ ಸರ್ಕಾರಗಳೆಲ್ಲವೂ ಸಹ ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ಕೊಡುವುದರ ಮೂಲಕ ಶೂನ್ಯ ಭ್ರಷ್ಟಾಚಾರದ ಸರ್ಕಾರಗಳ ಪ್ರತೀಕದಂತೆ ಶುದ್ಧವಾಗಿದೆ ಎನ್ನುವ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುತ್ತಾ, ಕಾಂಗ್ರೆಸ್ ಮತ್ತು ಇತರೆ ಪಕ್ಷದ ಸರ್ಕಾರಗಳು ಇರುವ ಕಡೆಯಲ್ಲಿ ಭ್ರಷ್ಟಾಚಾರಗಳು ತುಂಬಿದೆ, ಆಡಳಿತ ವ್ಯವಸ್ಥೆ ಕೆಟ್ಟಿದೆ ,ಅಲ್ಲಿನ ನಾಯಕರುಗಳೆಲ್ಲರೂ ಭ್ರಷ್ಟರು, ಎನ್ನುವ ರೀತಿಯಲ್ಲಿ ಅಭಿಪ್ರಾಯವನ್ನು ಮೂಡಿಸುತ್ತಾ ಇಡೀ ದೇಶದಲ್ಲಿ ಬಿಜೆಪಿ ಮಾತ್ರವೇ ಶುದ್ಧವಾದದ್ದು ಎನ್ನುವ ಭಾವನೆಯನ್ನು, ಜನರಲ್ಲಿ ಮೂಡಿಸುವಂತಹ ನಿರಂತರವಾದಂತಹ ಪ್ರಯತ್ನವೇ ಇವರ ಎಲ್ಲ ರಾಜಕಾರಣ ಮತ್ತು ತಂತ್ರಗಳ ಹಿಂದೆ ಇರುವ ಘನ ಉದ್ದೇಶ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಅನ್ಯ ರಾಜ್ಯಗಳಿಗೆ ಹೋಗುವುದು ಬೇಡ ಕರ್ನಾಟಕ ರಾಜ್ಯದಲ್ಲಿ 2006ರಿಂದ 2008ರ ವರೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರ ತದನಂತರ 2008ರಿಂದ 2013ರ ವರೆಗೆ ನಡೆದ ಯಡಿಯೂರಪ್ಪನವರ ಹಾಗೂ ಇತರೆ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರ ತದನಂತರ 2019 ರಿಂದ 2023 ರ ಅವಧಿಯಲ್ಲಿ ಇವರು ರಾಜ್ಯದಲ್ಲಿ ನಡೆಸಿದ ಸರ್ಕಾರದ ಕಾರ್ಯವೈಕರಿ ಮತ್ತು ಇಲ್ಲಿ ವಿವಿಧ ಮಂತ್ರಿಗಳು ಶಾಸಕರು ಸ್ವತಹ ಮುಖ್ಯಮಂತ್ರಿಗಳ ಮೇಲೆ ದಾಖಲಾದಂತಹ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ ,ಅಕ್ರಮದ ಪ್ರಕರಣಗಳ ದಾಖಲಾದ ಕೇಸುಗಳ ಪಟ್ಟಿ ಮತ್ತು ಇವುಗಳ ಹಿನ್ನೆಲೆಯಲ್ಲಿ ಎಷ್ಟು ಜನ ಸೆರೆಮನೆಗೆ ಹೋದರು ಎಷ್ಟು ಜನ ಜಾಮೀನಿನ ಮೇಲೆ ಇದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ಆರೋಪಿಗಳು ಎಂದು ತಾವೇ ಭಾಷಣಗಳನ್ನು ಮಾಡಿ ಅವರನ್ನು ಸೆರೆಮನೆ ಕಳುಹಿಸುವ ಕೆಲಸವನ್ನ ಮಾಡಿದವರು ಅವರುಗಳನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿ ಸತ್ಯ ಹರಿಶ್ಚಂದ್ರ ಎಂಬ ದೃಢೀಕರಣ ಪತ್ರವನ್ನು ಅವರಿಗೆ ನೀಡಿ ಅವರ ಜೊತೆಯಲ್ಲಿ ನಿಂತು ಪ್ರಚಾರ ಮಾಡುವ ನಿಮ್ಮ ನೈತಿಕತೆಯ ಬಗ್ಗೆಯೂ ರಾಷ್ಟ್ರದ ಜನತೆ ಗಮನಿಸಿದ್ದಾರೆ .
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ವಿಶೇಷವಾಗಿ ಮೋದಿ ರವರಿಗೆ ಪ್ರಬಲವಾದಂತಹ ಉತ್ತರವನ್ನು ಕೊಡುತ್ತಾ ಅವರ ತಪ್ಪುಗಳನ್ನು ಹುಡುಕುತ್ತಾ ಅವರ ಎಲ್ ಸರ್ಕಾರದ ಕೆಟ್ಟ ನೀತಿಗಳನ್ನು ಟೀಕಿಸುತ್ತಾ ಸಾರ್ವಜನಿಕವಾಗಿ ಅಭಿಪ್ರಾಯವನ್ನು ಮೂಡಿಸುತ್ತಿರುವ ರಾಷ್ಟ್ರದ ಕೆಲವು ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯನವರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ .ಈ ಹಿನ್ನೆಲೆಯಲ್ಲಿ ಅವರ ಮೇಲೆ ಆರೋಪಗಳನ್ನು ಮಾಡಿ ಅವರ ವ್ಯಕ್ತಿತ್ವಕ್ಕೆ ಕಳಂಕವನ್ನು ತಂದು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಅವರ ಧ್ವನಿಯನ್ನ ಅಡಗಿಸುವಂತಹ ನೀಚ ತಂತ್ರಗಾರಿಕೆ ಈಗ ನಡೆಯುತ್ತಿರುವಂತಹ ಬೆಳವಣಿಗೆಗಳು ಎಂಬ ಅರಿವಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ರವರನ್ನು ಅಲ್ಲಿನ ಆಡಳಿತ ವ್ಯವಸ್ಥೆಯ ಲೋಪ, ದೋಷಗಳ ನೆಪದಲ್ಲಿ ಅವರ ಧ್ವನಿಯನ್ನ ಅಡಗಿಸುವ ಕೆಲಸವಾಗುತ್ತಿದೆ, ಇದೇ ರೀತಿಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರಿಗೆ ಬಲೆಯನ್ನ ಹೆಣದಿದ್ದೀರಿ, ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ವಿರುದ್ಧವು ತಂತ್ರವನ್ನು ನಡೆಸುತ್ತಿದ್ದೀರಿ, ರಾಜ್ಯಪಾಲರ ಮೂಲಕ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶ ಪಶ್ಚಿಮ ಬಂಗಾಳ, ಮುಂತಾದಂತಹ ಎಲ್ಲಾ ರಾಜ್ಯಗಳ ಆಡಳಿತ ವ್ಯವಸ್ಥೆಯನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು ಒಟ್ಟಾರೆ ದೇಶದ ಜನರ ದೃಷ್ಟಿಯಲ್ಲಿ ವಿರೋಧ ಪಕ್ಷದ ಎಲ್ಲಾ ಸರಕಾರಗಳು ಭ್ರಷ್ಟರು ,ಅಯೋಗ್ಯರು, ಅಸಮರ್ಥರು, ಅಪ್ರಾಮಾಣಿಕರು ಎನ್ನುವಂತಹ ರೀತಿಯಲ್ಲಿ ಜನ ಅಭಿಪ್ರಾಯವನ್ನು ಮೂಡಿಸುವ ಕುಟಿಲ ನೀತಿಯ ಮೆಟ್ಟಿ ನಿಲ್ಲದಿದ್ದರೆ ಭಾರತದಲ್ಲಿನ ಪ್ರಜಾಪ್ರಭುತ್ವ ಮತದಾರ ಪ್ರಭುಗಳ ಕೈಲಿ ಇರುವುದಿಲ್ಲ, ಬದಲಿಗೆ ಸಿಬಿಐ, ಇಡಿ, ರಾಜ್ಯಪಾಲರು ಇವರುಗಳ ಅದೀನದಲ್ಲಿ ಒಳಗೊಳ್ಳುತ್ತದೆ. ಚುನಾವಣೆಗಳು ಜನ ಅಭಿಪ್ರಾಯ ಎಲ್ಲವೂ ಮಣ್ಣು ಸೇರುತ್ತದೆ
– ಕೆ ಎಸ್ ನಾಗರಾಜ್, ಬೆಂಗಳೂರು




