ಮೋದಿ ಚುನಾವಣೆಯಲ್ಲಿ ದಿಕ್ಕು ತಪ್ಪಿಸುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ

1 year ago

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಲ್ಲಿನ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಸೆರೆಮನೆಗೆ ಹೋದದ್ದು ಯಾವ ಪುಣ್ಯಕಾರ್ಯವನ್ನು ಮಾಡಿ ಎಂಬುದನ್ನ ಮೋದಿಯವರು ಮಹಾರಾಷ್ಟ್ರದ ಜನರಿಗೆ ತಿಳಿಸಿಕೊಡಲಿ‌.

ಕಳೆದ ಹತ್ತು ವರ್ಷದಿಂದಲೂ ಹೇಳಿದ್ದೇ ಹೇಳುವ ರೀತಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಬಂದಿರುತ್ತಾರೆ. ಈಗ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ರೀತಿಯ ಸಾಕ್ಷಿಗಳಿಲ್ಲದೆ ಇದ್ದರೂ ಮಹಾರಾಷ್ಟ್ರ ಚುನಾವಣೆಯಲ್ಲಿ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಜೊತೆಗೆ ಒಬ್ಬ ದೇಶದ ಗೌರವಾನ್ವಿತ ಪ್ರಧಾನಿಗಳಾಗಿ ಕರ್ನಾಟಕ ರಾಜ್ಯದ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ಭಾಷಣಗಳನ್ನು ಮಾಡುತ್ತಿರುವುದು ಗಮನಿಸಿದಾಗ ಪ್ರಧಾನ ಮಂತ್ರಿಗಳ ಮಾತಿನಲ್ಲಿ ಯಾವ ಹೊಸತನವೂ ಇಲ್ಲ ,ಕಳೆದ ಹತ್ತು ವರ್ಷದಿಂದ ಇದೇ ಮಾತುಗಳ ನಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರಗಳು ಮಾತ್ರವೇ ಭ್ರಷ್ಟಾಚಾರಿಗಳು ಬಿಜೆಪಿಯ ನಾಯಕರು ಸತ್ಯಹರಿಶ್ಚಂದ್ರರು, ಬಿಜೆಪಿಯ ಸರ್ಕಾರಗಳು ಅತ್ಯಂತ ಶುದ್ಧವಾದ  ಆಡಳಿತವನ್ನು ನೀಡಿದ ಮಹಾನ್ ಜನತೆ ಎನ್ನುವ ರೀತಿಯಲ್ಲಿ,   ಬಿಂಬಿಸುತ್ತಿದ್ದಾರೆ, ನಿಜಕ್ಕೂ ಕರ್ನಾಟಕ ರಾಜ್ಯದಲ್ಲಿ, 2008ರಿಂದ 2013 ಮತ್ತು 2019 ರಿಂದ 2023ರ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರುಗಳ ಮೇಲೆ ಭ್ರಷ್ಟಾಚಾರದ ಪಕ್ಷಪಾತದ, ಅಧಿಕಾರ ದುರುಪಯೋಗದ, ಆರೋಪಗಳು ಕೇಳಿ ಬಂದು ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ಹಲವಾರು ಮಂದಿ ರಾಜೀನಾಮೆಯನ್ನು ನೀಡಿದ್ದಾರೆ ಇಂದಿಗೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ,ಇವರೆಲ್ಲರೂ ಯಾವ ಪುಣ್ಯಕಾರ್ಯವನ್ನು ಮಾಡಿ ಸೆರೆಮನೆಗೆ ಹೋಗಿದ್ದರು ಎಂಬುದನ್ನ ಮಹಾರಾಷ್ಟ್ರದ ಜನರಿಗೆ ತಿಳಿಸಿಕೊಡಲಿ .

ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಸರ್ಕಾರವೆಂದರೆ ಬಿಜೆಪಿಯದು ಎನ್ನುವ ವಿಚಾರ ತನಿಖೆಯಿಂದ ಬಹಿರಂಗವಾಗಿದೆ. ಜನರು ಸಂಕಷ್ಟದಲ್ಲಿದ್ದ ಸಮಯದಲ್ಲಿ ಜನರ ನೆರವಿಗೆ ನಿಲ್ಲುವ ಸಲುವಾಗಿ  ವೈದ್ಯಕೀಯ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ಹಲವಾರು ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರವಾಗಿರುವುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ .

ಡಿ ನೋಟಿಫಿಕೇಶನ್ ಮಾಡಿ ಹಲವಾರು ಆರೋಪಗಳನ್ನು ಹೊತ್ತಿದ್ದಾರೆ ,ಚೆಕ್ ಮೂಲಕ ಲಂಚವನ್ನು ಪಡೆದವರು ಇವರುಗಳಾಗಿದ್ದಾರೆ. ಭ್ರಷ್ಟಾಚಾರದ ಕಾರಣಕ್ಕೆ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಒಬ್ಬರು ರಾಜೀನಾಮೆಯನ್ನು ಕೊಟ್ಟು ಸೆರೆಮನೆ ಹೋದ  ಉದಾಹರಣೆ ಇವರದು ಆಗಿರುತ್ತದೆ ,ಅನೇಕ ಮಂತ್ರಿಗಳು ಗಂಭೀರವಾದ ಕಾರಣಕ್ಕೆ ಅಧಿಕಾರವನ್ನು ಕಳೆದುಕೊಂಡರು, ಅನೇಕ ನಿಗಮಗಳಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಪ್ರಕರಣಗಳು ಈಗ ಬಹಿರಂಗವಾಗಿ ಬಿಜೆಪಿಯ ನಾಯಕರುಗಳು ಸಾಲು ಸಾಲಾಗಿ ಸೆರೆಮನೆಗೆ ಹೋಗುತ್ತಾ ಜಾಮೀನಿನ ಮೇಲೆ ಬರುತ್ತಿದ್ದಾರೆ.

ಪರಶುರಾಮನ ಪ್ರತಿಮೆಯ ನಿರ್ಮಾಣದಲ್ಲೂ ಭ್ರಷ್ಟಾಚಾರ ಮಾಡಿ ಪ್ರತಿಮೆಯೇ ಉರುಳಿ ಬಿದ್ದಂತಹ ಅತ್ಯಂತ ಬೇಸರದ ಸಂಗತಿಯೂ ಇವರ ಕೃಪೆಗಳಿಂದ ನಡೆದಿದೆ .

ಬಿಜೆಪಿಯ ನಾಯಕರುಗಳ ಭ್ರಷ್ಟಾಚಾರದಿಂದಾಗಿ ಕರ್ನಾಟಕ ರಾಜ್ಯದಲ್ಲಿ ದೇಶವೇ ಗಮನಹರಿಸುವಂತೆ ಮಾಡಿದಂತಹ ಮಹಾನ್ ನಾಯಕರುಗಳು, ಬಿಜೆಪಿಯ ಅನೇಕ ನಾಯಕರುಗಳು ಭ್ರಷ್ಟಾಚಾರವನ್ನು ಮಾಡಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ, 40% ಕಮಿಷನ್ ಎನ್ನುವ ಸುದ್ದಿ ದೇಶದೆಲ್ಲಲ್ಲ ಹರಡಿತು, ಬಿಟ್ ಕಾಯಿನ್ ಪ್ರಕರಣವಂತು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ, ಪಿಎಸ್ಐ ಗಳ ನೇಮಕಾತಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಈ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡಿರುವುದು, ಈ ರೀತಿಯಲ್ಲಿ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕವೇ ಇಲ್ಲ ಮಾನ್ಯ ಪ್ರಧಾನ ಮಂತ್ರಿಗಳು ಕರ್ನಾಟಕ ರಾಜ್ಯವನ್ನು ಸೇರಿದಂತೆ ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ, ಮಹಾರಾಷ್ಟ್ರದಲ್ಲಿ ಅನೇಕ ಹಗರಣಗಳು ಇವುಗಳ ಬಗ್ಗೆ ಮಾತನಾಡಿ ತಮ್ಮ ಪಕ್ಷದ ಸರ್ಕಾರಗಳ ಭ್ರಷ್ಟಾಚಾರದ ವಿವರವನ್ನು ಜನತೆಯ ಮುಂದೆ ಇಡಲಿ .

ಯಾವುದೇ ರಾಜ್ಯದಲ್ಲಿ ಚುನಾವಣೆಯಾದರೂ ಅಲ್ಲಿ ಬಿಜೆಪಿಯೇತರ ಸರ್ಕಾರಗಳು ಇದ್ದರೆ, ಆ ಸರ್ಕಾರಗಳ ಮೇಲೆ ಸುಳ್ಳು, ಸುಳ್ಳು ಆರೋಪಗಳನ್ನ ಮಾಡುವುದು ತನಿಖ ಸಂಸ್ಥೆಗಳನ್ನು ಬಳಸಿಕೊಂಡು ಹೆದರಿಸುವುದು, ಸುಳ್ಳು ಮೊಕದ್ದಮ್ಮೆಗಳನ್ನು ಹಾಕಿಸುವುದು, ಇವೆಲ್ಲವೂ ಕಳೆದ ಹತ್ತು ವರ್ಷದಿಂದ ನಡೆಯುತ್ತಾ ಬಂದಿರುವ ಘಟನೆಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಜಾಪ್ರಭುತ್ವ ವಿರೋಧಿ ಕೃತ್ಯದ ಮೂಲಕ ಅಸ್ತಿತ್ವಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರದ ಬಗ್ಗೆ ಜನತೆ ಭ್ರಮ ನಿರಷರಾಗಿದ್ದಾರೆ, ಅದರಲ್ಲೂ ಶಿವಾಜಿ ಪ್ರತಿಮೆ ಉರುಳಿ ಬಿದ್ದು ಅದರಲ್ಲಿ ವ್ಯಾಪಕ ಭ್ರಷ್ಟಾಚಾರವಾದ ಸುದ್ದಿ ಕೇಳಿದ ನಂತರ ಅಲ್ಲಿನ ಜನತೆ ಬಿಜೆಪಿಯನ್ನು ತಿರಸ್ಕರಿಸುವ ನಿರ್ಧಾರವನ್ನು ಮಾಡಿದ್ದಾರೆ. ಶಿವಸೇನೆಯ ವಿಭಜಿಸಿ, ಶರತ್ ಪವರ್ ಏನ್ಸಿಪಿಯನ್ನು  ವಿಭಜಿಸಿ ಮೋಸದ ಮೂಲಕ ಸರ್ಕಾರವನ್ನು ಮಾಡಿರುವ ಕಾರಣಕ್ಕೆ ಜನತೆ ಬೇಸತ್ತಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿ ಹಿಂದೆ ಎಂದು ನಡೆಯದಷ್ಟು ಭ್ರಷ್ಟಾಚಾರ, ಕಾನೂನಿನ ಅವ್ಯವಸ್ಥೆ, ಆಡಳಿತದಲ್ಲಿ ಅದಕ್ಷತೆ ,ಜನವಿರೋಧಿ ನಿಲುವುಗಳು ,ಇವುಗಳಿಂದ ಬಿಜೆಪಿಯನ್ನ ಮತ್ತು ಶಿವಸೇನೆಯನ್ನ ಅಲ್ಲಿನ ಜನತೆ ತಿರಸ್ಕರಿಸುವುದು ಶತಸಿದ್ಧವಾಗಿದ್ದು, ಜನರನ್ನ ದಿಕ್ಕು ತಪ್ಪಿಸುವ ಸಲುವಾಗಿ ಕರ್ನಾಟಕದ ವಿಚಾರವನ್ನು ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರದ ಜನರಿಗೂ ತಿಳಿದಿದೆ ಇವರ ಮಾತುಗಳೆಲ್ಲವೂ ಕಳೆದ ಹತ್ತು ವರ್ಷದಿಂದ ಕೇಳಿ ಕೇಳಿ ಕಿವಿಗಳು ತೂತಾಗಿದೆ ಎಂಬುದು .

ಆಪಾದನೆ ಮಾಡುವ ಮುನ್ನ ಸೂಕ್ತವಾದ ದಾಖಲೆಗಳನ್ನು ಕೊಡಬೇಕಾದದ್ದು ಪ್ರಧಾನ ಮಂತ್ರಿಗಳ ಕರ್ತವ್ಯವಾಗಿರುತ್ತದೆ. ಹಾಗೂ ಜವಾಬ್ದಾರಿಯುತ  ನಾಯಕತ್ವದ ಲಕ್ಷಣವು ಆಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply