ಕಾಂಗ್ರೆಸ್ ಗ್ಯಾರಂಟಿಗಳಿಗಾಗಿ ಬೆಲೆ ಹೆಚ್ಚಿಸಿದೆ ಎನ್ನುವುದಾದರೆ ಬಿಜೆಪಿ ತಮ್ಮ ಜೇಬು ತುಂಬಿಸಿಕೊಳ್ಳಲು ಬೆಲೆಗಳನ್ನು ಹೆಚ್ಚಿಸಿತ್ತೇ?
ಬಿಜೆಪಿಯ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿದಿನವೂ ಪೈಪೋಟಿಗೆ ಬಿದ್ದವರಂತೆ ಟೀಕಿಸುತ್ತಲೇ ಇದ್ದಾರೆ. ಹಾಲಿನ ದರವನ್ನು ಏರಿಕೆ ಮಾಡದಿದ್ದರೂ ಹಾಲಿನ ದರವನ್ನು ಏರಿಸಿದ್ದಾರೆ ಎಂದು ಹೇಳುತ್ತಲೇ ಪ್ರತಿಭಟನೆಗಳನ್ನ ನಡೆಸಿದ್ದಾರೆ. ಇವರು ಹೇಳುವ ಮಾತೇನೆಂದರೆ ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಲು ಬೆಲೆ ಏರಿಕೆಯನ್ನು ಮಾಡುತ್ತಿದ್ದಾರೆ ಎನ್ನುವ ನಿತ್ಯ ಮಂತ್ರವಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಒಂದೊಮ್ಮೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲವನ್ನ ಕ್ರೂಡೀಕರಿಸಲು ಬೆಲೆಗಳನ್ನು ಏರಿಸಿದ್ದಾರೆ ಎನ್ನುವುದನ್ನು ಒಪ್ಪುವುದಾದರೆ 2008ರಿಂದ 2013ರವರೆಗೆ ಮತ್ತು 2019ರಿಂದ 2023ರ ತನಕ ರಾಜ್ಯದಲ್ಲಿ ಇದ್ದಂತಹ ಬಿಜೆಪಿ ಸರ್ಕಾರ ಮಾನ್ಯ ಯಡಿಯೂರಪ್ಪನವರು, ಶ್ರೀ ಸದಾನಂದ ಗೌಡರು, ಶ್ರೀ ಜಗದೀಶ ಶೆಟ್ಟರು, ಮತ್ತು ಬಸವರಾಜ್ ಬೊಮ್ಮಾಯಿ, ಇವರುಗಳ ಸರ್ಕಾರದ ಅವಧಿಯಲ್ಲಿ ಹಾಲಿನ ದರ, ನೀರಿನ ದರ, ವಿದ್ಯುತ್ ದರ, ನೋಂದಣಿ ಶುಲ್ಕ, ಬಸ್ ದರ ಎಲ್ಲವೂ ಹಲವಾರು ಬಾರಿ ಏರಿಕೆಯಾಗಿದೆ. ಇವರ ಸರ್ಕಾರಗಳ ಅವಧಿಯಲ್ಲಿ ಈ ರೀತಿಯನ್ನು ಬೆಲೆಗಳನ್ನು ಏರಿಕೆಯನ್ನು ಮಾಡಿದ್ದು ಯಾವುದೇ ರೀತಿಯ ಜನಪರ ಯೋಜನೆಗಳ ಕಾರಣಕ್ಕಾಗಿ ಅಲ್ಲ ಮತ್ತು ಇವರ ಕಾಲದಲ್ಲಿ ಇಂತಹ ಯಾವ ಸಾಮಾಜಿಕ ಭದ್ರತೆಯ ಯೋಜನೆಗಳು ಅನುಷ್ಠಾನವಾಗಿರಲಿಲ್ಲ. ಆದರೂ ಸಹ ಸಂಪನ್ಮೂಲವನ್ನು ಕ್ರೂಢೀಕರಿಸಲು ಬೆಲೆಗಳನ್ನು ಏರಿಸಿದ್ದೀರಿ ಎನ್ನುವುದಾದರೆ ಅಂದು ನೀವು ನಿಮ್ಮ ಜೇಬುಗಳನ್ನ ತುಂಬಿಸಿಕೊಳ್ಳಲು ಬೆಲೆಗಳನ್ನು ಏರಿಸಿದ್ದೀರಿ ಎಂದು ಭಾವಿಸಬೇಕಾಗುತ್ತದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯು ಸೇರಿದಂತೆ ಅನೇಕ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದು ಮಂತ್ರಿ ಸ್ಥಾನವನ್ನು ಕಳೆದುಕೊಂಡು ಅನೇಕರು ಸೆರೆಮನೆ ವಾಸವನ್ನು ಅನುಭವಿಸಿದರು. ಭ್ರಷ್ಟಾಚಾರ ಮುಗಿಲು ಮುಟ್ಟಿದ ಕಾರಣದಿಂದ 2013ರಲ್ಲಿ ಮತ್ತು 2023ರಲ್ಲಿ, ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿರುವುದನ್ನು ಮರೆಯುವ ಹಾಗಿಲ್ಲ. ಹಾಗಿದ್ದರೂ ಸಹ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇನ್ನೂ ಒಂದು ವರ್ಷ ಪೂರೈಸುವ ಅವಧಿಯ ಒಳಗಾಗಿ ಸರ್ಕಾರದ ವಿರುದ್ಧ ಅನೇಕ ರೀತಿಯ ಆರೋಪಗಳನ್ನು ಮಾಡುತ್ತಾ ಉದ್ಯೋಗವನ್ನು ಕಂಡುಕೊಂಡಿರುವುದು ಬಿಜೆಪಿಯವರ ಧೋರಣೆಯಾಗಿದೆ.
ಗ್ಯಾರೆಂಟಿ ಯೋಜನೆಗಳಿಗಾಗಿ ಯಾವುದೇ ರೀತಿಯ ಬೆಲೆಗಳನ್ನು ಹೆಚ್ಚಿಸುವ ಅವಶ್ಯಕತೆ ಇಲ್ಲ. ಅದಕ್ಕೆ ಬೇಕಾದಂತಹ ಸಂಪನ್ಮೂಲವನ್ನು ಮುಂಗಡಪತ್ರದಲ್ಲಿ ಮೀಸಲಿಟ್ಟಿದ್ದಾರೆ. ಆದರೂ ಸಹ ವಿವಿಧ ಯೋಜನೆಗಳು ಅನುಷ್ಠಾನವಾಗಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಗಳು ಕಾಲಕಾಲಕ್ಕೆ ಒಂದಷ್ಟು ಬೆಲೆಗಳನ್ನು ಹೆಚ್ಚಿಸುವಂತೆ ಈ ಸರ್ಕಾರವು ಸಹ ಬೆಲೆಯನ್ನು ಕೆಲವು ವಿಭಾಗದಲ್ಲಿ ಹೆಚ್ಚಿಸಿದೆ. ಆದರೂ ಬಡವರು ಮತ್ತು ದುಡಿಯುವ ಜನರಿಗೆ ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟಗಳು ಎದುರಾಗುತ್ತಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಮೇಲೆ 5,40,000 ಕೋಟಿ ಸಾಲದ ಹೊರೆ ಇಟ್ಟು ಬಿಜೆಪಿ ಸರ್ಕಾರ ನಿರ್ಗಮಿಸಿದೆ. ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸದೆ, ಬಡವರಿಗಾಗಿ ಕಾರ್ಯಕ್ರಮವನ್ನು ರೂಪಿಸದೆ, ಬಿಜೆಪಿ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಯಾವ ಕಾರಣಕ್ಕೆ ಮಾಡಿದೆ ಎನ್ನುವುದನ್ನು ಬಹಿರಂಗಪಡಿಸಲಿ.
ಪ್ರತಿದಿನವೂ ಲೆಕ್ಕ ಪರಿಶೋಧನಾ ಇಲಾಖೆಯವರು ಲೆಕ್ಕ ಪರಿಶೋಧನೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಲ್ಲಿನ ಅನೇಕ ಹಣದ ದುರುಪಯೋಗದ ವಿಚಾರಗಳು ಬಹಿರಂಗವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ ಮುಂತಾದವುಗಳು ಜನರ ಹೆಸರಿನಲ್ಲಿ ನುಂಗಿ ನೀರು ಕುಡಿದಿರುವ ಹಣದ ಮೊತ್ತವು ಬಹಿರಂಗವಾಗುತ್ತಿದೆ. ಇವುಗಳನ್ನು ಮುಂದಿನ ದಿನದಲ್ಲಿ ಬಿಜೆಪಿಯ ನಾಯಕರು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೋ?
– ಕೆ ಎಸ್ ನಾಗರಾಜ್, ಬೆಂಗಳೂರು




