ಕನ್ನಡದ ಬಹುಪಾಲು ಚಿಂತನೆ ಮಾಡುವವರು, ವಿಮರ್ಶೆ ಮಾಡುವವರು, ಬರೆಯುವ ಯುವ ಸಮುದಾಯ ಚಳವಳಿಯಲ್ಲಿ ತೊಡಗಿದವರು, ಪತ್ರಕರ್ತರು ನಮ್ಮ ನಮ್ಮ ಸೇಫರ್ ಜೋನ್ ಗಳ ವ್ಯಾಪ್ತಿ ಪ್ರದೇಶದೊಳಗೆ ನಿಂತುಕೊಂಡು ಧ್ವನಿ ಎತ್ತರಿಸಿ ಮಾತನಾಡುತ್ತೇವೆಯೇ ವಿನಃ ಈ ವ್ಯಾಪ್ತಿ ಪ್ರದೇಶದ ಹೊರಗೆ ನಿಂತು ಧ್ವನಿ ಎತ್ತುವವರ..ಕಠಿಣ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ದಿಟ್ಟತನ ತೋರುವವರ ಸಂಖ್ಯೆ ತೀರಾ ವಿರಳ..ಹಾಗೆಯೆ ನಿರಂತರ ಸೇಫರ್ ಜೋನಲ್ಲಿ ಬದುಕಿದವರಿಗೆ ತತಕ್ಷಣಕ್ಕೆ ಈ ಜೋನ್ ಬಿಟ್ಟು ಹೊರಬರುವುದು ಕಷ್ಟವೆ. ಈ ಬಗೆಯ ಬದುಕೇ ಅನ್ಯಾಯ, ಅಸತ್ಯ,ಅಕ್ರಮಗಳ ವಿರೋಧಕ ಶಕ್ತಿಯನ್ನು ಕುಂದಿಸಿರುತ್ತದೆ. ವ್ಯತ್ಯಾಸವಿರುವುದು ಸೇಫರ್ ಜೋನಲ್ಲಿದ್ದೂ ಧ್ವನಿ ಎತ್ತದವರು ಮತ್ತು ಧ್ವನಿ ಎತ್ತುವವರ ಎತ್ತರದ ಹೆಚ್ಚು ಕಡಿಮೆಯ ಸಂಗತಿಗಳಷ್ಟೇ..
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ವಾಸ್ತವ ಹೀಗಿರುವಾಗ ಅವರಿಗೆ ಇವರ ಧ್ವನಿ ಕುಂದಿಸುವುದು ಬಹುದೊಡ್ಡ ಟಾಸ್ಕ್ ಅಲ್ಲವೇ ಅಲ್ಲ..ಯಕಶ್ಚಿತ್ ಈ ಸೇಫರ್ ಜೋನ್ ಎನ್ನುವ ಬೇಲಿಯನ್ನು ಮತ್ತಷ್ಟು ಎತ್ತರಿಸಿ ಬಿಗಿಗೊಳಿಸಿದರೆ ಸಾಕು..
ಎತ್ತರಿಸಿದ ಧ್ವನಿ ತಾನಾಗೆ ನಿಧಾನಕ್ಕೆ ಇಳಿಮುಖವಾಗಿ ಪಿಸುಮಾತಿಗೆ ತಿರುಗಿ ಕಡೆಯದಾಗಿ ಮೌನದ ಗೂಡು ಸೇರಿ ಒಳಗಿನಿಂದ ಬಾಗಿಲು ಬಂದ್ ಮಾಡಿಕೊಂಡು ಸಂಭ್ರಮಿಸದಿದ್ದರೂ ಆತಂಕ ದುಃಖದಲ್ಲೆ ಒಳಗಿರುತ್ತಾರೆ.
ಆಗವರು ಸಜ್ಜನರಾಗುತ್ತಾರೆ..
ಈ ಸಜ್ಜನರು ನಿಧಾನಕ್ಕೆ ದುರ್ಜನರ ದೌರ್ಜನ್ಯಕ್ಕೆ ಕುರುಡು, ಕಿವುಡು, ಮೂಗತನವನ್ನು ನಟಿಸುವುದರಲ್ಲಿ ಪ್ರಾವಿಣ್ಯತೆ ಪಡೆಯುತ್ತಾರೆ. ಈ ಪ್ರಾವಿಣ್ಯತೆಯ ಪರೀಕ್ಷೆಗೆ ಸ್ಪರ್ಧೆಗಳು ಏರ್ಪಡುತ್ತವೆ. ಇದರಲ್ಲಿ ಕೆಲವರಿಗೆ..ಬಹುಮಾನಗಳು ಬರುತ್ತವೆ. ಆಗ ಹೊಸ ಬಗೆಯ ಮೌಲ್ಯ ವ್ಯವಸ್ಥೆ ತಾನೇ ತಾನಾಗಿ ರೂಪುಗೊಳ್ಳುತ್ತಾ ಹೋಗುತ್ತದೆ. ನಾವೀಗ ಅಂತಹ ಮೌಲ್ಯವ್ಯವಸ್ಥೆಯ ನಾಗರೀಕರಾಗಿದ್ದೇವೆ.
ನಾನೂ ಕೂಡ ಪೂರ್ಣ ಪ್ರಮಾಣದಲ್ಲಿ ಸಜ್ಜನರ ಪರಿದಿಯನ್ನು ಮೀರಿದವನೇನಲ್ಲ..
- ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು



