ಎಫ್ ಫೋಲಿಯೋ 2023 – ಐಎನ್‌ಐಎಫ್‌ಡಿ ವಾರ್ಷಿಕ ಪದವಿ ಪ್ರದಾನ ಫ್ಯಾಷನ್ ಶೋ

3 years ago

ಬೆಂಗಳೂರು: ಎಫ್ ಫೋಲಿಯೋ 2023 – ಐಎನ್‌ಐಎಫ್‌ಡಿ, ಎಂ.ಜಿ. ರಸ್ತೆ ಬೆಂಗಳೂರಿನ ವಾರ್ಷಿಕ ಪದವಿ ಪ್ರದಾನ ಫ್ಯಾಷನ್ ಶೋ ವೇದಿಕೆಯಾಗಿದೆ.

ಇದು ತನ್ನಲ್ಲಿ ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಮತ್ತು ಪ್ರಗತ್ಯಾತ್ಮಕ ಉಡುಪುಗಳ ಶ್ರೇಣಿಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ.

ಹರಿವಿನ ನೆರಳು ಗೆರೆಗಳ ಚಿತ್ರಗಳ ಉಡುಪುಗಳಿಂದ ಹಿಡಿದು ಲೆದರ್ ಉಡುಪುಗಳವರೆಗೆ ವಿವಿಧ ಸಾರ ಸಂಗ್ರಹಗಳನ್ನು ಒಳಗೊಂಡ ಉಡುಪುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸುವುದರೊಂದಿಗೆ ಈ ಪದವಿ ಪ್ರದಾನ ಸಮಯದ ಫ್ಯಾಷನ್ ಶೋ ವೈಭವದ ಯಶಸ್ಸು ಕಂಡಿತು.

ಜ್ಯಾಮಿತಿಯ ಆಕಾರಗಳು, ವಿಶೇಷ ಆಕರ್ಷಣೆಯ ಮತ್ತು ಎದ್ದು ಕಾಣುವಂತಹ ಬಣ್ಣಗಳಿಂದ ಸ್ಫೂರ್ತಿ ಪಡೆದ ಅತ್ಯಾಕರ್ಷಣೆಯ ಅಭಿವ್ಯಕ್ತಿಗಳನ್ನು ವಿದ್ಯಾರ್ಥಿಗಳು ಸೃಷ್ಟಿಸಿದ್ದರು.

ಫ್ಯಾಷನ್ ಉದ್ಯಮ, ಪೋಷಕರು, ಶಿಕ್ಷಕರು, ಖ್ಯಾತ ವ್ಯಕ್ತಿಗಳು ಮತ್ತು ಅನೇಕರು ಈ ಕಾರ್ಯಕ್ರಮದ ಪ್ರೇಕ್ಷಕರಾಗಿದ್ದರು. ನ್ಯಾಯಾರ್ಕ್ ಫ್ಯಾಷನ್ ವೀಕ್ ಉಡುಪನ್ನು ರ‍್ಯಾಂಪ್‌ನಲ್ಲಿ ಪ್ರದರ್ಶಿಸಿದ್ದಾಗ ಪ್ರೇಕ್ಷಕರು ಬೆರಗಾಗಿದ್ದರು.


ಬೆಂಗಳೂರಿನ ಎಂ.ಜಿ. ರಸ್ತೆಯ ಐಎನ್‌ಐಎಫ್‌ಡಿ ಶ್ರೀಮತಿ ಫರೀದಾ ಖಾನ್ ಅವರು ನೇತೃತ್ವ ಹೊಂದಿದ್ದು, ವಿನ್ಯಾಸ ಶಿಕ್ಷಣವನ್ನು ಮುಂದಿನ ಎತ್ತರದ ಹಂತಕ್ಕೆ ಒಯ್ಯುವ ಆಶಯ ಹೊಂದಿದೆ. ಇದಕ್ಕಾಗಿ ಅಸಾಧಾರಣ ಜ್ಞಾನವನ್ನು ನೀಡಲಾಗುತ್ತಿದೆ.

ಇದು ಫ್ಯಾಷನ್ ಮತ್ತು ಒಳಾಂಗಣ ವಿನ್ಯಾಸದಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ ಅವರು ಸ್ವತಃ ಉಡುಪುಗಳನ್ನು ತಯಾರಿಸುವಂತಹ ವಿನ್ಯಾಸ ಆಧಾರಿತ ಶಿಕ್ಷಣದ ಮೂಲಕ ವಾಸ್ತವಿಕ ಕಾರ್ಯಕ್ಕೆ ತೆರೆದುಕೊಳ್ಳುವಂತೆ ಮಾಡಲಾಗುತ್ತಿದೆ.

ಇದರಿಂದ ವಿದ್ಯಾರ್ಥಿಗಳ ಸೃಜನಶೀಲತೆ ವಿಸ್ತರಿಸುವುದಲ್ಲದೆ, ಅವರಲ್ಲಿನ ಗರಿಷ್ಠ ಸಾಮರ್ಥ್ಯವನ್ನು ಹೊರತರಬಹುದಾಗಿದೆ.


ಎಫ್’ಫೋಲಿಯೋ -2023 ಇತ್ತೀಚಿನ ಫ್ಯಾಷನ್ ಒಲವುಗಳ ಪ್ರದರ್ಶನ ಮಾತ್ರವಲ್ಲದೆ, ಸೃಜನಶೀಲತೆ, ವೈವಿಧ್ಯತೆ ಮತ್ತು ಎಲ್ಲರನ್ನು ಫ್ಯಾಷನ್ ಉದ್ಯಮದಲ್ಲಿ ಒಂದುಗೂಡಿಸುವುದರ ಸಂಭ್ರಮವಾಗಿದೆ.

ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ವಿನ್ಯಾಸಕಾರರು, ರೂಪದರ್ಶಿಗಳು ಮತ್ತು ಫ್ಯಾಷನ್ ಉತ್ಸಾಹಿಗಳನ್ನು ಈ ಕಾರ್ಯಕ್ರಮ ಒಂದುಗೂಡಿಸುವುದಲ್ಲದೆ, ಫ್ಯಾಷನ್ ಕಲೆಯನ್ನು ಸಂಭ್ರಮಿಸುತ್ತದೆ.

ಎಫ್-ಫೋಲಿಯೋನಲ್ಲಿ ವಿದ್ಯಾರ್ಥಿಗಳು ಪ್ರತಿ ವರ್ಷ ನೂತನ ಉಡುಪುಗಳ ಶ್ರೇಣಿಗಳು ಮತ್ತು ಸಂಗ್ರಹಗಳನ್ನು ಬೇರೆ ಬೇರೆ ತಿರುಳುಗಳೊಂದಿಗೆ ಹೊರತರುತ್ತಾರೆ.

ಮಹಿಳೆಯರ ಆರು ಸ್ವೀಕೆನ್ಸ್ಗಳು ಮತ್ತು ಒಂದು ಪುರುಷರ ಸ್ವೀಕೆನ್ಸ್ ಹಾಗೂ ಒಂದು ಆವಂತ್ ಗಾರ್ದೆ(ಅತ್ಯಾಧುನಿಕ ಪ್ರಯೋಗಾತ್ಮಕ ಚಿಂತನೆಯ) ಸಂಗ್ರಹಗಳನ್ನು ಸಾದರಪಡಿಸುವುದರಿಂದ ಈ ಬಾರಿಯ ಪ್ರದರ್ಶನ ವಿಶೇಷವಾಗಿದೆ.


ಐಎನ್‌ಐಎಫ್‌ಡಿ(ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್) ಸಂಸ್ಥೆಯು ಮೇಧಾವಿ ಸ್ಕಿಲ್ ಯುನಿವರ್ಸಿಟಿ ಮತ್ತು ಎಲ್‌ಎಸ್‌ಟಿ -ಲಂಡನ್ ಸ್ಕೂಲ್ ಆಫ್ ಟ್ರೆಂಡ್ಸ್ ಜೊತೆಗೆ ಸಹಯೋಗ ಹೊಂದಿದ್ದು, ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮೇಲುಗೈ ನೀಡುತ್ತದೆ.

ಜಗತ್ತಿನ ಎಲ್ಲೆಡೆ ಅಂದರೆ ಲಂಡನ್, ನ್ಯೂಯಾರ್ಕ್, ದುಬಾಯ್ ಮತ್ತು ಸಿಂಗಪುರ್ ಮುಂತಾದ ಕಡೆಗಳಲ್ಲಿನ ಐಎನ್‌ಐಎಫ್‌ಡಿ ಕೇಂದ್ರಗಳಲ್ಲಿ ರೆಸಿಡೆನ್ಸಿಯಲ್ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದರೊಂದಿಗೆ ತಮ್ಮ ಕೌಶಲ್ಯಗಳನ್ನು ವಿಸ್ತರಿಸಲು ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಲಾಗುತ್ತದೆ.

ಲಾಕ್ಮೆ ಫ್ಯಾಷನ್ ವೀಕ್ ಮತ್ತು ಫೆಮಿನಾ ಮಿಸ್ ಇಂಡಿಯಾ ಕಾರ್ಯಕ್ರಮಗಳಿಗೆ ಅಧಿಕೃತ ನಾಲೆಡ್ಜ್ ಪಾರ್ಟ್ನರ್ ಆಗಿ ಐಎನ್‌ಐಎಫ್‌ಡಿ ಕಾರ್ಯನಿರ್ವಹಿಸುತ್ತಿದೆ.

ಐಎನ್‌ಐಎಫ್‌ಡಿ ವಿದ್ಯಾರ್ಥಿಗಳಿಗೆ ಲಂಡನ್ ಫ್ಯಾಷನ್ ವೀಕ್ ಮತ್ತು ನ್ಯೂಯಾರ್ಕ್ ಫ್ಯಾಷನ್ ವೀಕ್‌ಗಳಲ್ಲಿ ವಿದ್ಯಾರ್ಥಿ ವಿನ್ಯಾಸಕಾರರಾಗಿ ಭಾಗವಹಿಸಲು ಅವಕಾಶ ಲಭಿಸುತ್ತದೆ. ಈ ಅವಕಾಶ ನೀಡುವ ಭಾರತದ ಮೊದಲ ವಿದ್ಯಾರ್ಥಿ ಸಂಸ್ಥೆ ಇದಾಗಿರುತ್ತದೆ.


ಎಸ್ ಫೋಲಿಯೋ ಮಾರ್ಗದರ್ಶಕರು- ಮನೀಶ್ ಮಲ್ಹೋತ್ರಾ(ಫ್ಯಾಷನ್ ಡಿಸೈನ್) ಟ್ವಿಂಕಲ್ ಖನ್ನಾ (ಒಳಾಂಗಣ ವಿನ್ಯಾಸ)
ಫ್ಯಾಷನ್ ವಿನ್ಯಾಸದಲ್ಲಿ ಮತ್ತು ಒಳಾಂಗಣ ವಿನ್ಯಾಸ ಕೋರ್ಸ್ಗಳಲ್ಲಿ ಯುಜಿಸಿ ಮತ್ತು ಎನ್‌ಎಸ್‌ಡಿಸಿ ಒಪ್ಪಿಗೆ ನೀಡಿರುವ ವಿಶ್ವವಿದ್ಯಾಲಯ/ಅಂತಾರಾಷ್ಟ್ರೀಯ/ರಾಷ್ಟ್ರೀಯ ಸರ್ಟಿಫಿಕೇಷನ್ ಅನ್ನು ಈ ಕೆಳಗಿನ ಕಾರ್ಯಕ್ರಮಗಳಲ್ಲಿ ಸಾದರಪಡಿಸುತ್ತೇವೆ.
ಬಿ.ವಿಒಸಿ /ಎಂ.ವಿ.ಒಸಿ / ಬಿ.ಡಿಇಎಸ್ / ಎಂ.ಡಿಇಎಸ್ / ಡಿಪ್ಲೊಮೋ ಇನ್ ಫ್ಯಾಷನ್ / ಇಂಟಿರಿಯರ್ ಡಿಸೈನ್

ಗೌರವ ಅತಿಥಿಗಳು
ಫರೀದಾ ಖಾನ್ – (ನಿರ್ದೇಶಕರು ಐಎನ್‌ಐಎಫ್‌ಡಿ ಎಂ.ಜಿ. ರಸ್ತೆ, ಬೆಂಗಳೂರು ಮತ್ತು ಚೆನ್ನೈ)
ಶಬೀನ ಸುಲ್ತಾನ – ಬೆಂಗಳೂರಿನಲ್ಲಿ ತುನಿಶಿಯಾ ಗಣರಾಜ್ಯದ ದೂತಾವಾಸದ ಗೌರವ ಪ್ರಧಾನ ಅಧಿಕಾರಿ
ಮಿಸ್ ಲಿಮೋರ್ ಬ್ಲೆಟರ್- ದಕ್ಷಿಣ ಭಾರತಕ್ಕೆ ಇಸ್ರೇಲ್‌ನ ಉಪ ಪ್ರಧಾನ ಸಲಹಾಗಾರರು
ಮಿಸ್ ಪೂಜಾ ಕಾಮಕ್- ಇಮೇಜ್ ಕನ್ಸಲ್ಟೆಂಟ್, ಸ್ಟೈಲಿಸ್ಟ್, ರೂಪದರ್ಶಿ

Leave a Reply