ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ
ಸಂತೋಷ್ ಕೊಡಂಕಿರಿ ನಿರ್ದೇಶನದ, ಲೇಖಕ, ರಂಗಕರ್ಮಿ ಯೋಗೇಶ್ ಮಾಸ್ಟರ್ 24 ಪಾತ್ರಗಳಲ್ಲಿ ಅಭಿನಯಿಸಿರುವ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದೆ.

ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಯೋಗೇಶ್ ಮಾಸ್ಟರ್, “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಸಿನಿಮಾ theatrical movie ಮತ್ತು ಒಬ್ಬ ಕಲಾವಿದ ಇಪ್ಪತ್ನಾಲ್ಕು ಪಾತ್ರಗಳನ್ನು ನಿರ್ವಹಿಸುವ ಪ್ರಯತ್ನಕ್ಕೆ India Book Of Recordsಗೆ ಇದೊಂದು ದಾಖಲೆಯ ಪ್ರಯತ್ನವೆಂದು ದಾಖಲಾಗಿದೆ. ಇದು ನಮ್ಮ ತಂಡದ ಸಂಕಲಿತ ಶ್ರಮಕ್ಕೆ ಸಂದ ಗರಿ ಎಂದು ಸಂತಸ ಹಂಚಿಕೊಂಡಿದ್ದಾರೆ.




