ಕರ್ನಾಟಕ ಸಂಶೋಧಕರ ಒಕ್ಕೂಟ ಬೆಂಗಳೂರು ವತಿಯಿಂದ ಸನ್ಮಾನ
ಧಾರವಾಡ: ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರ ಸದನದಲ್ಲಿ ಎಚ್.ಕೆ.ಪಾಟೀಲ 5 ಸಂಪುಟಗಳ ಬಿಡುಗಡೆ ಕಾರ್ಯಕ್ರಮ ಧಾರವಾಡದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಸಭಾಪತಿಗಳಾದ ಡಾ. ಬಿ ಎಲ್ ಶಂಕರ್, ವಿ ಆರ್ ಸುದರ್ಶನ್ ಹಾಗೂ ವೀರಣ್ಣ ಮತ್ತಿಕಟ್ಟಿ, ಕವಿವಿ ಕುಲಪತಿ ಪ್ರೊ. ಕೆ ಬಿ ಗುಡಸಿ, ಕೃಷಿ ವಿವಿ ಕುಲಪತಿ ಡಾ. ಪಿ ಎಲ್ ಪಾಟೀಲ್, ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟೀಮನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ, ಸಂಪುಟದ ಸಂಪಾದಕರು ಉಪಸ್ಥಿತರಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಎಚ್.ಕೆ.ಪಾಟೀಲ್, ನನ್ನ ರಾಜಕೀಯ ಅನುಭವಗಳು ಪುಸ್ತಕ ರೂಪಕ್ಕೆ ಬಂದು ದಾಖಲೆಯಾಗಿದ್ದು ನನ್ನ ಜೀವದಲ್ಲಿ ಒಂದು ಅಪೂರ್ವ ಅನುಭವ. 16 ಸಂಪುಟಗಳನ್ನು ಸಂಪಾದಿಸಿದ್ದು, 5 ಸಂಪುಟಗಳು ಬಿಡುಗಡೆಯಾಗಿವೆ. ಇದಕ್ಕೆ ಕಾರಣೀಭೂತರಾಗಿರುವ ಎಲ್ಲರಿಗೂ ಧನ್ಯವಾದಗಳು ಎಂದರು.
ಸಂಪುಟಗಳ ರಚನೆಯಲ್ಲಿ ನೆರವಾದ ರೇವಯ್ಯ ಒಡೆಯರ್, ವಸಂತ ಪುರೋಹಿತ್, ಲಕ್ಷ್ಮೀಕಾಂತ ಜೋಷಿ, ಲತೀಫ್ ಕುನ್ನಿಬಾವಿ, ಜೆ.ಕೆ.ಜಮಾದಾರ್, ಪತ್ರಕರ್ತರಾದ ನೂರ್ ಅಹಮದ್ ಮಕಾಂದಾರ್ ಮತ್ತು ಡಾ.ಪ್ರದೀಪ್ ಮಾಲ್ಗುಡಿ ಮೊದಲಾದವರಿಗೆ ಕರ್ನಾಟಕ ಸಂಶೋಧಕರ ಒಕ್ಕೂಟ ಬೆಂಗಳೂರು ವತಿಯಿಂದ ಕಾರ್ಯಕ್ರಮದಲ್ಲಿ ಸನ್ಮಾನಿಲಾಯಿತು.




