ಬೆಂಗಳೂರು: ಬೆಸ್ಕಾಂ ನ ಕೇಂದ್ರ ಕಚೇರಿಯಲ್ಲಿ ಬಾಬಾಸಾಹೆಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಉದ್ಘಾಟನೆಯನ್ನು ವ್ಯವಸ್ಥಾಪಕ ನಿರ್ದೇಶಕ ಡಿ ಆರ್ ಎನ್ ಶಿವಶಂಕರ್ ನೆರವೇರಿಸಿದರು. ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ, ರಂಗತಜ್ಞ ಡಾ ಎ ಆರ್ ಗೋವಿಂದಸ್ವಾಮಿ ಭಾಗವಹಿಸಿದ್ದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಡಾ ಎ ಆರ್ ಗೋವಿಂದಸ್ವಾಮಿ ಮಾತನಾಡಿ, ಬಾಬಾ ಸಾಹೇಬರ ಬಾಲ್ಯದ ನೋವೇ ಉತ್ತಮ ಸಂವಿಧಾನರಚನೆಗೆ ಆಕರವಾಯಿತು. ಈ ನೆಲದ ಶಿಕ್ಷಣ ವಂಚಿತರ, ಅಧಿಕಾರವಂಚಿತರ ಬಗ್ಗೆ, ಲಿಂಗ ತಾರತಮ್ಯದಬಗ್ಗೆ ಮಮ್ಮಲ ಮರುಗಿದ ಬಾಬಾ ಸಾಹೇಬರು ಇವರೆಲ್ಲರ ವಿಮೋಚನೆ ಮಾಡಿದರು ಎಂದರು.
ವಿಶ್ವದ ಪ್ರಗತಿಯ ಮೂಲಚಿಂತಕರೇ ಅಂಬೇಡ್ಕರ್. ಅದು ಈಗ ತಿಳಿಯುತ್ತಿದೆ. ಇವರೊಬ್ಬ ದಾರ್ಶನಿಕರಾಗಿ, ಒಳ್ಳೆ ಪತ್ರಕರ್ತರಾಗಿ, ಸಾಮಾಜಿಕ ಸುಧಾಕರಾಗಿ, ವಿಶ್ವರತ್ನ ಎನಿಸಿದವರು. ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಮದ್ದು ಎಂದು ತೋರಿಸಿದವರು ಎಂದರು.
ಕೊನೆಗೂ ತಮ್ಮವರಿಂದಲೇ ಅವಕೃಪೆಗೆ ಒಳಗಾಗಿ ಬೌದ್ಧ ಧರ್ಮಕ್ಕೆ ಹೋದರು. ಕಾರಣ ಮಾನಸಿಕವಾದ ಅಸ್ಪೃಶ್ಯತೆ ಮನಸ್ಸಿನಲ್ಲಿಯೇ ಯುದ್ಧಮಾಡಿ ಕೊಲ್ಲುತ್ತಿದೆ. ರಕ್ತಮಾತ್ರ ಕಾಣುತ್ತಿಲ್ಲ. ಇದು ಶಾಶ್ವತವಾಗಿ ನಿಲ್ಲದ ಹೊರತು ಡಾ ಅಂಬೇಡ್ಕರ್ ಅವರಿಗೆ ಮುಕ್ತಿಯಿಲ್ಲ ಎಂದರು.
ಡಿ ಆರ್ ಎನ್ ಶಿವಶಂಕರ್ ಮಾತನಾಡಿ, ಬಾಬಾಸಾಬೇಹರ ಹಿಂದೂ ಕೋಡ್ ಬಿಲ್ ನಿಂದ ಮಹಿಳೆಯರಿಗೆ ಹೆಚ್ಚಿನ ಲಾಭ ಆಯಿತು. ಕಾರ್ಮಿಕ ಸಚಿವರಾಗಿ ತಂದ ಫ್ಯಾಕ್ಟರೀಸ್ ಆಕ್ಟ್, ಟ್ರೇಡ್ ಯೂನಿಯನ್ ಆಕ್ಟ್ ನೌಕರರಿಗೆ ರೈತರಿಗೆ ಅನುಕೂಲವಾಯಿತು. ಇಂದಿಗೂ ಇರುವ ಜಾತಿ ಧರ್ಮ ಭಾಷೆ ಆಧಾರದ ತಾರತಮ್ಯ ನಿಲ್ಲಬೇಕುಎಂದರು
ವೇದಿಕೆಯಲ್ಲಿ ಬೆಸ್ಕಾಂ ನ ಹಿರಿಯ ಅಧಿಕಾರಿಗಳಾದ ರಮೇಶ್ ಎಚ್ ಜೆ, ಮಹಾದೇವ್, ದಯಾನಂದ್, ಕೆಪಿಟಿಸಿಎಲ್ ಪರಿಶಿಷ್ಟ ಜಾತಿ ಪಂಗಡಗಳ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನಕುಮಾರ್, ಪ.ಜಾ.ಅಧಿಕಾರಿಗಳ ಸಂಘದ ಅಧ್ಯಕ್ಷ ರವೀಂದ್ರ, ಗವಿಕುಮಾರ್, ಪುಷ್ಪ, ಶಿವಪ್ರಕಾಶ್ ಮುಂತಾದವರು ಹಾಜರಿದ್ದರು.










