ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ದಿನಾಂಕ:10.10.2024 ರಂದು ಬೆಳಗ್ಗೆ 11.00 ಗಂಟೆಗೆ ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಅಂಬೇಡ್ಕರ್ ವೀದಿ, ಸೆಂಟ್ರಲ್ ಕಾಲೇಜು ಎದುರು, ಬೆಂಗಳೂರು ಇಲ್ಲಿ ಬಂಜಾರ ಸಾಂಪ್ರದಾಯಿಕ ಕಸೂತಿ ಕಲಿಕೆ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ.
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ. ಆರ್. ಗೋವಿಂದಸ್ವಾಮಿ ಸಮಾರೋಪ ಸಮಾರಂಭದ ನುಡಿ ನುಡಿಯಲಿದ್ದಾರೆ. ಡಾ. ಪಿ.ಟಿ. ಶ್ರೀನಿವಾಸ ನಾಯಕ, ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಜಯದೇವ ನಾಯಕ್, ಅಧ್ಯಕ್ಷರು, ತಾಂಡಾ ಅಭಿವೃದ್ಧಿ ನಿಗಮ, ಬೆಂಗಳೂರು, ಸೈದುಲು ಅಡಾವತ್ ಭಾ.ಪೋ.ಸೇ , ಉಪ ಪೋಲಿಸ್ ಆಯುಕ್ತರು, ಬೆಂಗಳೂರು ಉತ್ತರ, ಶ್ರೀಮತಿ ಕಾಂತಾ ನಾಯಕ್ , ಅಧ್ಯಕ್ಷರು, ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು, ಶ್ರೀ ಕೆ ಬಲರಾಮ, ಕ.ವಿ.ಪ್ರ.ನಿ. ನಿ. ನೌಕರ ಸಂಘ(659), ಬೆಂಗಳೂರು, ವಿ. ನಾಗೇಂದ್ರ ಪ್ರಸಾದ್, ಹೆಸರಾಂತ ಗೀತ ರಚನಾಕಾರರು ಹಾಗೂ ನಿರ್ದೇಶಕರು ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.



