ಬೆಂಗಳೂರು: ಬಂಜಾರ ಮಹಾಸಭಾ ವತಿಯಿಂದ ಗಾಂಧಿ ಭವನದಲ್ಲಿ ನಡೆದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪಿ ಯು ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಸಂಜನಾ ಬಾಯಿ, ರಾಷ್ಟ್ರಪತಿ ಪದಕ ಪಡೆದ ಡಿವೈಎಸ್ಪಿ ಜಯರಾಜ್ ಮತ್ತು ಡಿವೈಎಸ್ಪಿ ಪದೋನ್ನತಿ ಪಡೆದ ಕೃಷ್ಣ ಲಮಾಣಿ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ ಎ. ಆರ್. ಗೋವಿಂದ ಸ್ವಾಮಿ, ಸಾಹಿತಿ ಬಿ ಟಿ ಲಲಿತಾ ನಾಯ್ಕ್, ಸನ್ಮಾನಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾಗವಹಿಸಿ ಮಾತನಾಡಿದರು. ಪ್ರಕಾಶ್ ರಾಠೋಡ್, ಸುಭಾಷ್ ರಾಠೋಡ್, ಜಾಲಜಾ ನಾಯ್ಕ್, ಪರಿಸರ ತಜ್ಞ ಡಾ. ಡಿ. ಪರಮೇಶ ನಾಯ್ಕ್, ರಾಜ ನಾಯ್ಕ್, ರುದ್ರುಪುನೀತ್ ಉಪಸ್ಥಿತರಿದ್ದರು.

ಕಲಾವಿದರಾದ ಅರುಣ್, ಉಮೇಶ್ ನಾಯ್ಕ್ ಬಾಬಾ ಸಾಹೇಬರ ಗೀತೆ ಗಳನ್ನು ಹಾಡಿದರು. ಬಂಜಾರ ಸಾಹಿತಿಗಳು, ಚಿಂತಕರು, ಕಲಾವಿದರು ಸಮುದಾಯದ ಪ್ರಮುಖರು ಭಾಗವಹಿಸಿದ್ದರು.




