ನನ್ನಪ್ಪನಿಲ್ಲದ ಲೋಕ
ಇಂದಿಗೆ ಅಪ್ಪ ತೀರಿಹೋಗಿ ಏಳು ವರ್ಷ. ತೀರಿಹೋದ ಎನ್ನುವುದು ನಮ್ಮ ಸಮಾಧಾನಕ್ಕೆ ನಾವಾಡಿಕೊಳ್ಳುವ ಮಾತು, ನಿಜಕ್ಕೂ ಅಪ್ಪನನ್ನ ಅಪಘಾತದ ನೆವದಲ್ಲಿ ಕೊಲ್ಲಲಾಯಿತು ಮತ್ತು ಆತ ಕೊಲೆಯಾದ ಮೇಲೂ ನಮಗೆ ಸಿಗಬೇಕಾಗಿದ್ದ ನ್ಯಾಯವನ್ನೂ ಕೊಲ್ಲಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ನಮ್ಮಿಡೀ ಬಂಧುಬಳಗ ಊರುಕೇರಿಯನ್ನೆಲ್ಲ ಅಪ್ಪ ತೀವ್ರವಾಗಿ ತನ್ನ ಅಪರಿಮಿತ ಪ್ರೀತಿಯಿಂದ ಆವರಿಸಿಕೊಂಡಿದ್ದ. ತನ್ನ ಪರಮಶತ್ರುಗಳಿಗೂ ತನ್ನ ಸ್ವಯವನ್ನು ಮರೆತು ಸಹಾಯ ಮಾಡುತ್ತಿದ್ದ ಮತ್ತು ಎಂದಿಗೂ ಮಾತು ತಪ್ಪುತ್ತಿರಲಿಲ್ಲ ಎಂಬುದು ಅಪ್ಪನ ಕುರಿತು ಇರುವ ಐತಿಹ್ಯ.
ನನ್ನಜ್ಜಿ ನನ್ನಪ್ಪನಿಗೆ ಅಂಥ ಸಹ್ಯಬಾಲ್ಯವನ್ನೇನೂ ಕೊಟ್ಟಿರಲಿಲ್ಲ. ಆದರೆ ಮತ್ತೊಬ್ಬ ನಮಗೆ ರಕ್ತಸಂಬಂಧಿಕಳಲ್ಲದ ಹೆಣ್ಣುಮಗಳೂ ನನ್ನಪ್ಪನಿಗೆ ತನ್ನ ಮಮತೆಯನ್ನ ಧಾರೆಎರೆಯುತ್ತಿದ್ದಳು ಎಂಬುದು ಈಗಲೂ ನನಗೆ ಪರಮಾಶ್ಚರ್ಯ. ನನ್ನಪ್ಪನ ಬದುಕೇ ಒಂದು ರೀತಿಯ ಮಳೆಬಿಲ್ಲಿನ ಬದುಕು.
ಏನೂ ಇಲ್ಲದೆಯೂ ನನ್ನಪ್ಪ ಎಲ್ಲವನ್ನೂ ನಮಗೆ ನೀಡಿದ್ದ. ಅಸಹನೀಯ ಕೋಪದಲ್ಲಿ ಮಾತ್ರ ಆಗಾಗ ಬೆಂಕಿಯುಗುಳುತ್ತಿದ್ದ, ಬೆಂಕಿಯನ್ನೇ ಉಣಿಸುತ್ತಿದ್ದ.
ಅಕ್ಷರ ಕಲಿಯದ ನನ್ನಪ್ಪನಿಗೆ ಅಪಾರ ಜ್ಞಾಪಕ ಶಕ್ತಿಯಿತ್ತು. ನೂರಾರು ಜನರ ಫೋನ್ ನಂಬರ್ ಅನ್ನು ತನ್ನ ನೆನಪಿನಿಂದಲೇ ಹೇಳುವಷ್ಟು ಬುದ್ಧಿವಂತನಾಗಿದ್ದ. ನನ್ನಪ್ಪನಿಗೆ ಸಹಿ ಮಾಡುವುದನ್ನು ನಾನೇ ಕಲಿಸಿದ್ದೆ. ಅಪ್ಪ ನನಗೆ ಬದುಕುವುದನ್ನು ಕಲಿಸಿದ ಬದುಕು ಕೊಟ್ಟ.
ಅಪ್ಪನಿದ್ದಾಗಿನ ನಮ್ಮ ಬದುಕಿನಲ್ಲಿ ಅಂಥ ಸ್ಥಿತಿವಂತಿಕೆಯೇನೂ ಇರಲಿಲ್ಲ… ಆದರೆ ನೆಮ್ಮದಿಯಿತ್ತು. ನರಳಾಟವಿರಲಿಲ್ಲ. ಈಗ ಪರವಾಗಿಲ್ಲ ಎನ್ನಿಸಿದರೂ ಅಪ್ಪನಿಲ್ಲದ ನಮ್ಮ ಬದುಕಿನಲ್ಲಿ ಸಂಕಟಗಳೇ ಜಾಸ್ತಿ.
ಅಪ್ಪನಿಲ್ಲದ ಈ ನೋವು ನಿತ್ಯ ನಿರಂತರವಾದುದು, ನಾವು ಬದುಕಿರುವವರೆಗೂ.
ಕ್ಷಮಿಸು ಅಪ್ಪಾ… Love you
– ವೀರಣ್ಣ ಮಡಿವಾಳರ, ಕವಿಗಳು



