ಎಲ್ಲವನ್ನೂ ಕಳೆದುಕೊಂಡ ನಮ್ಮ ಸಮುದಾಯಗಳಿಗೆ ಬಾಬಾ ಸಾಹೇಬರ ಸಂವಿಧಾನವು ಸಂಜೀವಿನಿ ಆಯಿತು. ಸಂವಿಧಾನ ಇಲ್ಲದೇ ಹೋಗಿದ್ದರೆ ಪರಿಶಿಷ್ಟರ ಬದುಕು ಕಷ್ಟ ಮಾತ್ರವಲ್ಲ, ಹೆಜ್ಜೆ ಹೆಜ್ಜೆಗೂ ಅವಮಾನಕರ ಆಗಿರುತ್ತಿತ್ತು. ಈಗ ನಾವೆಲ್ಲರೂ ಏನನ್ನು ಪಡೆದಿದ್ದೇವೆಯೋ ಅದರ ಹಿಂದೆ ಮಹಾನ್ ತ್ಯಾಗ ಜೀವಿಗಳ ಜ್ಞಾನ, ಪರಿಶ್ರಮವಿದೆ ಮತ್ತು ಹೋರಾಟದ ಛಲವಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಹೋರಾಟ ಎಂದರೆ ಈಗಿನಂತೆ ವ್ಯಕ್ತಿ ಕೇಂದ್ರಿತ, ಪ್ರಚಾರ ಮತ್ತು ದೂರದೃಷ್ಟಿ ಇಲ್ಲದ ಮಾದರಿಗಳಲ್ಲ. ಅವು ಈಗಲೂ ನಮ್ಮ ಜನರ ಬದುಕನ್ನು ಬೆಳಗುತ್ತಿರುವ ಮಹಾ ಹಣತೆ ಆಗಿದೆ.
ಒಡೆಯುವುದು ಸುಲಭ ಆದರೆ ಕಟ್ಟುವುದು ಮತ್ತು ಎಲ್ಲರ ಭಾವಾವೇಷಗಳನ್ನು ಅರಿತು, ಅವುಗಳನ್ನು ಕೇಳಿಸಿಕೊಂಡು ಸಮನ್ವಯತೆಯಿಂದ ಜೊತೆಗೆ ಕೊಂಡೊಯ್ಯುವುದು ಈ ಹೊತ್ತಿನ ಅಗತ್ಯ.
ಇನ್ನು ಈ ನೆಲದ ಮೂಲ ನಿವಾಸಿಗಳಾದ ಅಸ್ಪೃಶ್ಯ ಸಮುದಾಯದವರು ಒಗ್ಗಟ್ಟಾಗಿ ಸಾಮರಸ್ಯದಿಂದ ಮುನ್ನಡೆಯಬೇಕಾದ್ದು ಐತಿಹಾಸಿಕ ಅಗತ್ಯ. ಇದು ಬಾಬಾ ಸಾಹೇಬರ ಆಶಯವೂ ಹೌದು.
ಫ್ಯೂಡಲ್ ಮತ್ತು ಜಾತಿವಾದಿಗಳ ನೆಲದಲ್ಲಿ ಬಾಬಾ ಸಾಹೇಬರ ಈ ಆಶಯಕ್ಕೆ ದೊಡ್ಡದಾದ ಶಕ್ತಿಯಿದ್ದು, ಇದು ಸಮುದಾಯಗಳನ್ನು ಕಾಪಾಡುವ ಏಕೈಕ ಸೂತ್ರವಾಗಿದೆ.
ಏನನ್ನಾದರೂ ಕಳೆದುಕೊಳ್ಳದ ಹೊರತು ನಮಗೆ ಸಂವಿಧಾನ ಮತ್ತು ಬಾಬಾ ಸಾಹೇಬರ ಮಹತ್ವವು ಅರ್ಥವಾಗುವುದಿಲ್ಲ. ಹೀಗಾಗಿ ಕಳೆದುಕೊಂಡ ಮೇಲೆ ಪಶ್ಚಾತ್ತಾಪ, ನೋವು ಮತ್ತು ಅವಮಾನ ಪಡುವ ಬದಲು ಈಗಲೇ ನಮ್ಮ ಸಮುದಾಯಗಳು ಜಾಗೃತರಾಗಿ, ಒಗ್ಗಟ್ಟಾಗಿರಬೇಕು.
ಇದು ಐತಿಹಾಸಿಕ ಅಗತ್ಯ ಎಂದು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ ಮತ್ತು ಪ್ರತಿಪಾದಿಸುತ್ತೇನೆ. ಕಾರಣ ಅಸ್ಪೃಶ್ಯ ಸಮುದಾಯಗಳಿಗೆ ಬರುವ ಮುಂದಿನ ಸವಾಲುಗಳು ಅಂತವು. ಇದು ನಮಗೆ ಎಷ್ಟು ಬೇಗ ಅರ್ಥ ಆಗುತ್ತದೋ ಅಷ್ಟು ನಮಗೆ ಒಳ್ಳೆಯದು.
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




