ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತಾಗಿ ಗೌರವ ತೋರಬೇಕಿದ್ದ ಕಡೆ, ಕೇವಲ ಅಗೌರವ ಮತ್ತು ಅವಮಾನಗಳನ್ನು ಮಾಡುವಂತಹ ಕೆಲಸಗಳನ್ನು ಬಾಬಾ ಸಾಹೇಬರು ಬದುಕಿದ್ದ ಕಾಲದಿಂದಲೂ ಸಹ ಪಕ್ಷಾತೀತವಾಗಿ ಮಾಡುತ್ತಲೇ ಬರುತ್ತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬಾಬಾ ಸಾಹೇಬರ ವಿಚಾರ ಮತ್ತು ಅವರ ಸೈದ್ಧಾಂತಿಕ ನಿಲುಗಳನ್ನು ಹೇಗೆ ಪಕ್ಷಾತೀತವಾಗಿ ವಿರೋಧಿಸುತ್ತಾ, ದ್ವೇಷ ಕಾರುವ ಮನುವಾದಿ ಜನರು ಇದ್ದಾರೋ, ಬಾಬಾ ಸಾಹೇಬರ ವಿಚಾರ ಮತ್ತು ಅವರ ವ್ಯಕ್ತಿತ್ವವನ್ನು ಪ್ರೀತಿಸುವ ಮತ್ತು ಅವರ ಮಹತ್ವವನ್ನು ಅರಿತಿರುವ ಜನರೂ ಕೂಡಾ ಅದೇ ರೀತಿಯಲ್ಲಿ ಪಕ್ಷಾತೀತವಾಗಿ ಇದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯಾವುದೋ ಮೂಲೆಯಲ್ಲಿ ಕುಳಿತು ಯಾರದ್ದೋ ಮಾತುಗಳಿಂದ ದಿಕ್ಕು ತಪ್ಪಿ ಇಂತಹ ಕೆಲಸ ಮಾಡುತ್ತಿರುವ ಯುವಕರು ಮಾತ್ರ, ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ್ದಾರೆಂಬ ಸಂಗತಿಯು ಅತ್ಯಂತ ನೋವು ತರಿಸುವಂತದ್ದು.

ಬಾಬಾ ಸಾಹೇಬರ ಮೇಲೆ ಅವಮಾನಕಾರಿಯಾಗಿ, ಮಾತನಾಡುತ್ತಿದ್ದಾರೆ, ಅವರ ಮೇಲೆ ಕ್ರಮ ವಹಿಸಲು ಒತ್ತಡ ಇದೆ ಎಂದು ನಮ್ಮ ಹುಡುಗರು ಹೇಳಿದಾಗ, ಇಂತಹ ಕೆಲಸಕ್ಕೆ ಮನುವಾದಿಗಳು ಯಾರನ್ನು ಬಳಸಿಕೊಳ್ಳುತ್ತಾರೆ ಎಂಬ ಅರಿವಿದ್ದ ನಾನು, ಅವರನ್ನು ಪತ್ತೆ ಮಾಡಿ ಒಂದಿಷ್ಟು ಬುದ್ದಿ ಹೇಳಿ ಕಳಿಸಬಹುದಾ ಎಂದು ಕೊಂಡಿದ್ದೆ. ಅದರಂತೆಯೇ ಮಾಡಲಾಗಿತ್ತು ಕೂಡಾ.
ಆದರೆ ತಪ್ಪನ್ನು ಸರಿಪಡಿಕೊಳ್ಳುವ ಕೆಲಸ ಮಾಡದೇ ಮತ್ತೆ ಮತ್ತೆ ರಾಷ್ಟ್ರೀಯ ನಾಯಕರು ಮತ್ತು ದೇಶದ ಸಂವಿಧಾನಕ್ಕೆ ಅಗೌರವ ತರುವಲ್ಲಿ ಅದೇ ಯುವಕರು ಮಾಡಿದ್ದು ನಿಜಕ್ಕೂ ಕ್ರಮ ವಹಿಸಬೇಕಾದ ಸಂಗತಿ ಎನಿಸಿತು. ಅದರಂತೆಯೇ ಈಗ ಬಂಧನವಾಗಿದೆ.
ಬಂಧನವೇನೋ ಆಗಿದೆ ನಿಜ, ಆದರೆ ಬಾಬಾ ಸಾಹೇಬರು ಮತ್ತು ಸಂವಿಧಾನದ ವಿರುದ್ಧ ಯಾವ ಸಮುದಾಯಗಳನ್ನು ಎತ್ತಿ ಕಟ್ಟಲಾಗುತ್ತಿದೆ ಎಂಬುದನ್ನು ನೆನೆಸಿಕೊಂಡರೆ, ತಳ ಸಮುದಾಯಗಳ ಅಜ್ಞಾನ, ಮುಗ್ದತೆ ಮತ್ತು ಅವರ ಸ್ಥಿತಿಯ ಬಗ್ಗೆ ಅಂದು ಬಾಬಾ ಸಾಹೇಬರು ಹೊಂದಿದ್ದ ವಿಚಾರಗಳು ನೆನಪಾಗುತ್ತದೆ ಮತ್ತು ಬೇಸರ ಆಗುತ್ತದೆ ಕೂಡಾ.!
ಇನ್ನು ಬಾಬಾ ಸಾಹೇಬರು ದೇಶವೆಂಬ ದೇಹದ ಒಳಗೆ ಇರುವ ಜೀವ ಸೆಲೆ. ಅವರ ವಿರುದ್ಧ ಹೊರಡುವುದು ದೇಶದ ಉಸಿರು ನಿಲ್ಲಿಸಲು ಹೊರಡುವ ರೀತಿ ಆಗಿದ್ದು, ಈ ಉಸಿರನ್ನು ಕಾಯಲು ದೇಶದಲ್ಲಿ ಅಷ್ಟೇ ಸಂಖ್ಯೆಯ ಭೀಮ ಸೈನಿಕರು, ಸಂವಿಧಾನದ ಪ್ರಿಯರು ಇದ್ದಾರೆ ಎಂಬುದು ಸಮಾಧಾನಕರವಾದ ಸಂಗತಿಯಾಗಿದೆ!
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




