ಒಂದಷ್ಟು ಕರುಣಿ ಇರಲಿ

1 year ago

ಒಂದಷ್ಟು ಕರುಣಿ ಇರಲಿ

ಎಲ್ಲ ದೇಹಗಳಿಗೆ ಜೀವ ಕೊಡುವವನು ನೀನೆ
ಎಲ್ಲಾ ದೇಹಗಳ ಜೀವ ಕಸಿದುಕೊಳ್ಳುವವನು ನೀನೆ
ಇರಲಿ ಒಂದಷ್ಟು ಕರುಣೆ
ಕುಣಿದು ಕುಪ್ಪಳಿಸುವ ಪುಟ್ಟ ಕಂದಮ್ಮಗಳ ವಿಚಾರದಲ್ಲಿ
ಇರಲಿ ಕರುಣೆ
ಇನ್ನೂ ಬಾಳಿ ಬದುಕಬೇಕಾದವರ ಪ್ರಕರಣಗಳಲ್ಲಿ
ಇರಲಿ ಕರುಣೆ ಸಂಸಾರದ ಜವಾಬ್ದಾರಿಗಳ ಹೊತ್ತ ಜೀವಗಳಲ್ಲಿ.

ಅದೆಷ್ಟೋ ಮಂದಿ ರೋಗರುಜಿನಗಳಿಂದ ನರಳುತ್ತಾ
ಪರಿಪರಿಯಾಗಿ ಬೇಡುತ್ತಿದ್ದಾರೆ ಸಾಕು ಮಾಡು ಈ ಜೀವವ ಎಂದು
ಇದರ ನಡುವೆ ಇನ್ನು ಇರಬೇಕೆಂದು ಬಯಸುವವರ
ಜೀವಗಳ ಮಾತ್ರ ಏಕೆ ಕಸಿದುಕೊಳ್ಳುತ್ತಿರುವೆ.

ಈ ದೇಹವು ನಿನ್ನದೆ, ಹಾಗೆ ಅನ್ನವು ನಿನ್ನದೇ,
ಕಾಡದಿರಲಿ ಹಸಿವು ಯಾರಲ್ಲಿಯೂ,
ಈ ದೇಹವು ನಿನ್ನದೆ ಸುಖ ದುಃಖಗಳು ಎಲ್ಲವೂ ನಿನ್ನದೇ
ಪ್ರಸಾದ, ಆದರೂ ಕಾಡದಿರಲಿ ಬಡವರ ಕಡುಕಷ್ಟಗಳು.

ದೇಹವು ನಿನ್ನದೇ ಬಾಧಿಸುವ ರೋಗರುಜಿನಗಳು ನಿನ್ನ ಕೃಪೆ,
ನರಳಿಸದಿರಲಿ ದೇಹಗಳ ನೋವುಗಳಿಂದ

ದೇಹಕ್ಕೆ ಜೀವ ಕೊಡುವುದಾದರೆ
ಪುಟ್ಟ ಕಂದಮ್ಮಗಳಿಗೆ ರೋಗಗಳ ಕೊಡಬೇಡ
ದುಡಿದು ಬದುಕುವ ಜನರ ಬದುಕು ಕಸಿದುಕೊಳ್ಳಬೇಡ
ಅನ್ನ ಆಶ್ರಯ ಆರೋಗ್ಯಕ್ಕಾಗಿ
ಕಣ್ಣೀರು ಸುರಿಸುವಂತೆ ಸಂಕಷ್ಟದ ದಿನಗಳನ್ನು ಕೊಡಬೇಡ.

ಸಾಧ್ಯವಾಗುವುದಾದರೆ ರೋಗಗಳಿಂದ ಮುಕ್ತವಾದ
ಜೀವಗಳ ಜಗಕ್ಕೆ ಕಳಿಸು, ಏನೂ ಅರಿಯದ,
ಯಾವ ತಪ್ಪುಗಳ ಮಾಡದ, ಪುಟ್ಟ ಪುಟ್ಟ ಕಂದಮ್ಮಗಳ
ಕಾಯಿಲೆಗಳಿಂದ ನರಳಿ ನರಳಿ ನೊಂದು ಬದುಕುವಂತೆ ಮಾಡಲೇಬೇಡ.

– ಕೆ ಎಸ್ ನಾಗರಾಜ್, ಬೆಂಗಳೂರು

One Response

Leave a Reply