ಬೆಂಗಳೂರು: ಕರ್ನಾಟಕ ಸರ್ಕಾರದಿಂದ 2020-21 ನೇ ಸಾಲಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗಿರುತ್ತದೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಅಕಾಡೆಮಿಯ ವತಿಯಿಂದ ಬಂಜಾರ ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ವೈವಿಧ್ಯಮಯವಾದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಬಂಜಾರ ಸಮುದಾಯದ ಸಂಪ್ರದಾಯಗಳು, ಆಚಾರ ವಿಚಾರಗಳು ಹಾಗೂ ವೇಷಭೂಷಣಗಳು ಇತ್ಯಾದಿ ಸಮಗ್ರ ವಿಷಯಗಳನ್ನು ಒಳಗೊಂಡ ಲೋಗೋವನ್ನು ರಚಿಸಬೇಕಾಗಿರುತ್ತದೆ.
ಆಸಕ್ತ ಕಲಾವಿದರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ಸೂಕ್ತವಾಗುವಂತಹ ಒಂದು ಲೋಗೋವನ್ನು (03 ವಿಭಿನ್ನ ರೀತಿಯಲ್ಲಿ ರಚಿಸುವುದು) ರಚಿಸಿ ದಿನಾಂಕ: 15.11.2024ರ ಒಳಗಾಗಿ ಖುದ್ದಾಗಿ ಅಕಾಡೆಮಿಯ ಕಚೇರಿಗೆ ತಲುಪಿಸಲು ಕೋರಿದೆ.
ಆಯ್ಕೆಯಾದ ಲೋಗೋ ಒಂದಕ್ಕೆ ಅಕಾಡೆಮಿಯಿಂದ ರೂ.25,000/- ಗಳ ಬಹುಮಾನವನ್ನು ನೀಡಲಾಗುವುದು. ಲೋಗೋ ಆಯ್ಕೆ ಮಾಡುವಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.




