ಬೆಂಗಳೂರು: ಕರ್ನಾಟಕ ಬಲಿಜ ಜಾಗೃತಿ ವೇದಿಕೆ ವತಿಯಿಂದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣರವರಿಗೆ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಕಾಲಜ್ಞಾನಿ, ಮಹಾನ್ ಸಂತ ಶ್ರೀ ಕೈವಾರ ತಾತಯ್ಯ ಖ್ಯಾತಿಯ ಯೋಗಿ ನಾರೇಯಣ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಕರ್ನಾಟಕ ಬಲಿಜ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಮುನಿರಾಜು, ಕಾರ್ಯದರ್ಶಿ ಜಿ.ಜ್ಞಾನೇಶ್ ಮತ್ತು ಕನ್ನಡ ಪರ ಹೋರಾಟಗಾರ ಖಾಜಾ ಹುಸೇನ್ ರವರು ಮನವಿ ಪತ್ರ ನೀಡಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ ಮಾತನಾಡಿ, ಸರ್ವರಿಗೂ ಅನ್ನ, ಅಕ್ಷರ, ಆಶ್ರಯ ಮೂರು ಸಿದ್ದಾಂತದ ಮೇಲೆ ಸಾಧು ಸಂತರು ನಾಡಿನ ಜನರ ಒಳಿತಿಗೆ ಶ್ರಮಿಸಿದರು ಎಂದರು.
ಸಾಧು ಸಂತರ ಕೊಡುಗೆಯಿಂದ ನಾಡು ಶ್ರೀಮಂತಿವಾಗಿದೆ. ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರವರು ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಂತರು. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಹೆಸರು ನಾಮಕರಣಕ್ಕೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಂ.ಮುನಿರಾಜು ಮಾತನಾಡಿ, ಕಾಲಜ್ಞಾನಿ, ಮಹಾತಪಸ್ವಿ ಆಧ್ಯಾತ್ಮ ಚಿಂತಕ, ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆ ಪಾಂಡಿತ್ಯದ ಮೇರು ಪರ್ವತ ಕೈವಾರ ತಾತಯ್ಯರವರ ಆದರ್ಶ ಚಿಂತನೆ ಮಾರ್ಗದರ್ಶನ ಎಲ್ಲರಿಗೂ ಸಿಗಬೇಕು ಅವರ ಹೆಸರು ವಿಶ್ವವ್ಯಾಪಿ ಪಸರಿಸಬೇಕು ಎಂದರು.
ವಿದೇಶದ ಕಾಲಜ್ಞಾನಿಗಳ ಬಹಳ ಪ್ರಚಾರವಿದೆ. ಆದರೆ ನಮ್ಮ ಕನ್ನಡ ನಾಡಿನ ಕಾಲಜ್ಞಾನಿ ಯೋಗಿ ನಾರೇಯಣರವರ ಕಾಲಜ್ಞಾನದ ಕುರಿತು ಪ್ರಚಾರವಿಲ್ಲದೇ ಇತಿಹಾಸ ಮರೀಚಿಕೆಯಾಗುತ್ತಿದೆ ಎಂದರು.
ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಕೈವಾರ ತಾತಯ್ಯ ಯೋಗಿ ನಾರೇಯಣರವರ ಹೆಸರು ಚಿರಸ್ಥಾಯಿ ಉಳಿಯಬೇಕು. ಅವರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂದು ಚಿಕ್ಕಬಳ್ಳಾಪುರದ ರೈಲು ನಿಲ್ದಾಣಕ್ಕೆ ಹೆಸರು ನಾಮಕರಣ ಮಾಡಿ ಎಂದು ನಮ್ಮ ಮನವಿ. ಇದಕ್ಕೆ ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣರವರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.
ಕಾರ್ಯದರ್ಶಿ ಜಿ.ಜ್ಞಾನೇಶ್ ಮಾತನಾಡಿ, ಕೈವಾರ ತಾತಯ್ಯರವರ ಸಾಧನೆ ಕುರಿತು ಇಂದಿನ ಪೀಳಿಗೆಯ ಜನರಿಗೆ ಅರಿವು ಇಲ್ಲ. ಜನಕಲ್ಯಾಣಕ್ಕೆ ಶ್ರಮಸಿದ ಮಹಾನ್ ಸಂತರ ಹೆಸರು ಉಳಿಯಬೇಕು. ಅವರ ಸಾಧನೆ ಆದರ್ಶ ಮಾರ್ಗದರ್ಶನ ಎಲ್ಲರಿಗೂ ಸಿಗಬೇಕು. ಆದ್ದರಿಂದ ರೈಲು ನಿಲ್ದಾಣಕ್ಕೆ ಯೋಗಿ ನಾರೇಯಣ ಹೆಸರು ನಾಮಕರಣ ಮಾಡಬೇಕು ಎಂದು ರಾಜ್ಯದ ಸಮಸ್ತ ಬಲಿಜ ಸಮುದಾಯದ ಪರವಾಗಿ ನಮ್ಮ ಮನವಿ ಮಾಡಲಾಗಿದೆ ಎಂದರು.




