ಶ್ರೀರಾಮನ ಭವ್ಯ ರಥದಲ್ಲಿ ರಥೋತ್ಸವ, ಪ್ರಮುಖ ಬೀದಿಗಳಲ್ಲಿ ಸಂಚಾರ
ಬೆಂಗಳೂರು: ರಾಮಮಂದಿರ ಶ್ರೀರಾಮ ಸೇವಾ ಮಂಡಳಿ ವತಿಯಿಂದ 69ನೇ ರಾಮೋತ್ಸವ 10ದಿನಗಳ ಕಾಲ ಪ್ರಭು ಶ್ರೀರಾಮೋತ್ಸವ ಅದ್ದೂರಿ ಸಂಭ್ರಮಾಚರಣೆ ನಡೆಯಿತು.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಶ್ರೀರಾಮನವಮಿ ಪ್ರಯುಕ್ತ ರಥೋತ್ಸವವನ್ನು ರಾಜಾಜಿನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು, ಶ್ರೀರಾಮನಿಗೆ ಅಲಂಕಾರ, ವಿಶೇಷ ಪೂಜೆ ಸಲ್ಲಿಸಲಾಯಿತು, ಸಾವಿರಾರು ಭಕ್ತರಿಗೆ ಶ್ರೀರಾಮನ ದರ್ಶನ ಪಡೆದರು.
ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್ ಮಾತನಾಡಿ, ಪ್ರತಿವರ್ಷ ಶ್ರೀರಾಮ ಸೇವಾ ಮಂಡಳಿವತಿಯಿಂದ ಅದ್ದೂರಿಯಾಗಿ ಶ್ರೀರಾಮನವಮಿ ಆಚರಿಸಲಾಗುತ್ತಿದೆ ಎಂದರು.
ಈ ಬಾರಿ ಹತ್ತು ದಿನಗಳ ಕಾಲ ಪ್ರಭು ಶ್ರೀರಾಮನಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಗುತ್ತಿದೆ. ಶ್ರೀರಾಮತಾರಕ ಹೋಮ, ಶೇಷವಾಹನೋತ್ಸವ, ಶ್ರೀ ಸೀತಾರಾಮ ಕಲ್ಯಾಣ, ಗರುಡವಾಹನೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀರಾಮ ಪಟ್ಟಾಭಿಷೇಕ ಹಾಗೂ 15ನೇ ತಾರೀಖ ರಾಮನಾ ಬಂಟ ಅಂಜನೇಯ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗಿದೆ ಎಂದರು.
10 ದಿನಗಳ ಕಾಲ ಸಂಗೀತ, ನೃತ್ಯ ಭಜನೆ, ಪ್ರವಚನ, ದೇವರ ನಾಮ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 63 ಅಡಿ ಶ್ರೀರಾಮಾಂಜನೇಯ ಮೂರ್ತಿಗೆ ಲಕ್ಷಾಂತರ ವೆಚ್ಚದಲ್ಲಿ ಅತ್ಯುಧುನಿಕ ದೀಪದ ವ್ಯವಸ್ಥೆ ಹಾಗೂ ಕಿರುಜಲಪಾತ ಉದ್ಯಾನವನ್ನು ಲೋಕರ್ಪಣೆ ಮಾಡಲಾಗಿದೆ. ಭಕ್ತರು ಆಗಮಿಸಿ, ಪ್ರಭು ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಮಾಗಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ, ಈಸ್ಟ್ ವೆಸ್ಟ್ ನಿರ್ದೇಶಕಿ ರಶ್ಮಿ ರವಿಕಿರಣ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್, ಪದಾಕಾರಿಗಳಾದ ಮಹೇಶ್, ವೆಂಕಟೇಶ್ ಬಾಬು, ಭರತ್, ಡಾ.ಮಂಜುನಾಥ್, ಬಸವರಾಜ್, ಜಯರಾಮ್, ವಿಜಯರಾಘವನ್, ಬಾಬುನರಸಿಂಹಪ್ಪ ಸುದರ್ಶನ್, ರವಿ, ಮದನ್ ರಾವ್, ಬಿ.ಎಲ್.ಸುರೇಶ್ ಮೊದಲಾದವರು ಹಾಜರಿದ್ದರು.








