ರಾಜಾಜಿನಗರ ಶ್ರೀರಾಮಮಂದಿರದಲ್ಲಿ ವೈಭವದ ಶ್ರೀರಾಮ ಬ್ರಹ್ಮರಥೋತ್ಸವ

3 years ago

ಬೆಂಗಳೂರು: ರಾಜಾಜಿನಗರದ ಶ್ರೀರಾಮ ಸೇವಾ ಮಂಡಳಿ ವತಿಯಿಂದ ಶ್ರೀ ರಾಮಮಂದಿರದಲ್ಲಿ 67ನೇ ವರ್ಷದ ಶ್ರೀರಾಮನ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಶ್ರೀರಾಮನ ಅಭಿಷೇಕದಿಂದ ವಿಶೇಷಪೂಜೆಯೊಂದಿಗೆ ಶ್ರೀರಾಮನ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಶ್ರೀರಾಮನ ಬಾಲ್ಯದ ದಿನಗಳು ಮತ್ತು ರಾಮರಾಜ್ಯದ ಮಾದರಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು.

ಶ್ರೀರಾಮನ ಭವ್ಯ ಪ್ರತಿಮೆ ಹೊತ್ತು ಬಾರಿ ಮೆರವಣಿಗೆಯಲ್ಲಿ ರಾಜಬೀದಿಗಳಲ್ಲಿ ಬ್ರಹ್ಮರಥೋತ್ಸವ ಸಾಗಿತು.

ಶ್ರೀ ರಾಮ ಸೇವಾ ಮಂಡಳಿ ಅಧ್ಯಕ್ಷ ಶ್ರೀಧರ್ ಮಾತನಾಡಿ, ಶ್ರೀರಾಮನವಮಿಯನ್ನು ಶ್ರೀ ರಾಮಮಂದಿರ 67 ವರ್ಷದ ಸಂಭ್ರಮಾಚರಣೆ. ಶ್ರೀರಾಮನ ಎಲ್ಲರಿಗೂ ಆದರ್ಶ. ಶ್ರೀರಾಮನ ಭವ್ಯ ಪರಂಪರೆ ಸಾರಲು ಶ್ರೀರಾಮಮಂದಿರದಲ್ಲಿ 12ದಿನಗಳ ಭಕ್ತಿ ಭಾವನೆ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ದೇವಸ್ಥಾನ ಆಡಳಿತ ಮಂಡಳಿಯ ಡಾ.ರಮೇಶ್, ವಿಜಯರಾಘವನ್, ಜಯರಾಮ್, ವೆಂಕಟೇಶ್ ಬಾಬು, ಮಂಜುನಾಥಸ್ವಾಮಿ, ಮಹೇಶ್, ಬಸವರಾಜು, ಬಿ.ಎಲ್.ಸುರೇಶ್, ಜಯರತ್ನ, ಬೈಜೊರಾಮ್ ಮೊದಲಾದವರು ಉಪಸ್ಥಿತರಿದ್ದರು.

Leave a Reply