ಶ್ರೀರಾಮ ಸೇವಾ ಮಂಡಳಿ ವತಿಯಿಂದ ವೈಕುಂಠ ಏಕಾದಶಿ

2 years ago

ಬೆಂಗಳೂರು: ರಾಜಾಜಿನಗರದ ಶ್ರೀರಾಮ ಸೇವಾ ಮಂಡಳಿ ವತಿಯಿಂದ ಶ್ರೀ ರಾಮಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಕ್ತರು ಶ್ರೀನಿವಾಸ ದೇವರ ಮುಖ್ಯದ್ವಾರದಿಂದ ತಲೆಬಾಗಿಸಿ ಸಾಗಿದರೆ ಸಕಲ ಸಂಕಷ್ಟಗಳು ನಿವಾರಣೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಭಕ್ತಾದಿಗಳಿಗೆ ವಿಶೇಷ ದರ್ಶನ ಸೇವೆ ಮತ್ತು ಶಿವನಾ ಮತ್ತು ವಿಷ್ಣುವಿನ ಮಹಿಮೆ ನೃತ್ಯರೂಪಕ ಭರತನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಶ್ವಾದ್ಯಂತ ಕೊರೋನ ಭಯದಲ್ಲಿ ಅತಂಕದಲ್ಲಿ ಇದ್ದಾರೆ. ವೈಕುಂಠ ಏಕಾದಶಿ ದಿನದಂದು ಶಿವನ ಸನ್ನಿಧಾನ ಮತ್ತು ಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತ ರೋಗರುಜಿನ ಮುಕ್ತವಾಗಲಿ, ಜನರಿಗೆ ಸುಖಶಾಂತಿ ಲಭಿಸಲಿ ಪ್ರಾರ್ಥಿಸುತ್ತೇನೆ ಎಂದು ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್ ಹೇಳಿದರು.

Leave a Reply