ದೇವಸ್ಥಾನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ದೇಣಿಗೆ

1 year ago

ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ನವೀಕರಣಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ 50 ಲಕ್ಷ ರೂಪಾಯಿ ದೇಣಿಗೆ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಅದಿಶಕ್ತಿ ಅಮ್ಮನವರ ದೇವಸ್ಥಾನ ಆರ್ಥಿಕ ಕೊರತೆ ದೇವಸ್ಥಾನ ನವೀಕರಣ ಕಾರ್ಯ ಕುಂಠಿತಗೊಂಡಿತ್ತು. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಜೊತೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ನವೀಕರಣ ಮಾಡಲು  ಆರ್ಥಿಕ ಸಹಕಾರ ಕೊಡುವಂತೆ ಮನವಿ ಸಲ್ಲಿಸಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ದೇವಾಲಯ ನವೀಕರಣ ಕಾರ್ಯ 50 ಲಕ್ಷ ರೂಪಾಯಿ ಚೆಕ್ಕನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಅಧ್ಯಕ್ಷ ಎ.ಅಮೃತ್ ರಾಜ್ ಹಸ್ತಾಂತರ ಮಾಡಿದರು.

ಇದೇ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ನಡುವೆ ಸಾಮರಸ್ಯ ಇರಬೇಕು. ಇಂದು ಬೆಂಗಳೂರು ನಗರ ಅಭಿವೃದ್ದಿಯಾಗಲು ಅಧಿಕಾರಿ, ನೌಕರರ ಶ್ರಮವಿದೆ. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ನೌಕರರ ಸಮಸ್ಯೆಗಳಿಗೆ ಹೋರಾಟದ ಜೊತೆಯಲ್ಲಿ ಸಮಾಜ ಸೇವೆ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನರ ಪ್ರೀತಿ, ವಿಶ್ವಾಸ ಗಳಿಸಿದೆ ಎಂದರು.

ಎ.ಅಮೃತ್ ರಾಜ್ ಮಾತನಾಡಿ, ಅಧಿಕಾರಿ, ನೌಕರರ ಹಿತರಕ್ಷಣೆ ಜೊತೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಮ್ಮ ಸಂಘವು ಮಾಡುತ್ತಿದೆ. ಧರ್ಮಸ್ಥಳದಲ್ಲಿ ನೀರಿನ ಅಭಾವ ಆದಾಗ 1 ಲಕ್ಷ ಲೀಟರ್ ನೀರು ಕಳುಹಿಸಿ ಕೊಡಲಾಯಿತು ಮತ್ತು ಮರದ ಕೊಂಬೆ ಬಿದ್ದು ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ಪರಿಹಾರ, ಆಸಿಡ್ ದಾಳಿಗೆ ಒಳಗಾದ ಯುವತಿ ವೈದ್ಯಕೀಯ ಚಿಕಿತ್ಸೆಗೆ ಸಹಾಯಹಸ್ತ, ಉತ್ತರ ಕರ್ನಾಟಕ, ಕೊಡಗು, ಕೇರಳದ ವೈನಾಡುವಿನಲ್ಲಿ ಪ್ರವಾಹ ಸಂಸ್ತತ್ಥರಿಗೆ ದಿನಸಿ ಕಿಟ್ ವಿತರಣೆ, ಪರಿಸರ ಜಾಗೃತಿ ಮತ್ತು ಉಚಿತ ಆರೋಗ್ಯ ಶಿಬಿರ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.

ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನವಾಗಿದೆ. ಆರ್ಥಿಕ ಮುಗ್ಗಟ್ಟು ಕಾರಣ ದೇವಾಲಯ ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿತ್ತು. ನಮ್ಮ ಸಂಘ ಪದಾಧಿಕಾರಿಗಳು, ಸದಸ್ಯರು ದೇವಸ್ಥಾನ ನವೀಕರಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ತೀರ್ಮಾನಿಸಿ ಇದೀಗ 50 ಲಕ್ಷ ರೂಪಾಯಿ ಸಂಗ್ರಹ ಮಾಡಿ ದೇವಾಲಯ ನವೀಕರಣ ಕಾರ್ಯಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸಮ್ಮುಖದಲ್ಲಿ ನೀಡುತ್ತಿದ್ದೇವೆ ಎಂದರು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಜಿ.ರವಿ, ಎಸ್.ಜಿ.ಸುರೇಶ್, ರಾಮಚಂದ್ರ, ಮಂಜೇಗೌಡ, ಹೆಚ್.ಬಿ.ಹರೀಶ್, ಮಾರ್ಕೆಟ್ ಮಂಜುನಾಥ್, ಶ್ರೀಧರ್, ಮಂಜುನಾಥ್, ಕೆ.ನರಸಿಂಹ, ಎನ್.ಶಿವಪ್ರಸಾದ್, ಎನ್.ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply