ಬಳ್ಳಾರಿ: ನೆಹರು ಯುವ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ಆಸಕ್ತ ಯುವ ಸಮೂಹವು ನ.29ರ ಒಳಗಾಗಿ ಗೂಗಲ್ ಶೀಟ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ತಿಳಿಸಿದ್ದಾರೆ.
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
ಸ್ಪರ್ಧೆ ಮತ್ತು ಬಹುಮಾನಗಳ ವಿವರ:
ವಿಜ್ಞಾನ ಮೇಳ (ಸ್ಪರ್ಧಾತ್ಮಕ ಕಾರ್ಯಕ್ರಮ-ವೈಯಕ್ತಿಕ): ಪ್ರಥಮ–ರೂ.3000, ದ್ವಿತೀಯ-ರೂ.2000, ತೃತೀಯ-ರೂ.1500.
ವಿಜ್ಞಾನ ಮೇಳ (ಸ್ಪರ್ಧಾತ್ಮಕ ಕಾರ್ಯಕ್ರಮ-ಗುಂಪು): ಪ್ರಥಮ –ರೂ.7000, ದ್ವಿತೀಯ-ರೂ.5000, ತೃತೀಯ-ರೂ.3000.
ಯುವ ಬರಹಗಾರರ ಸ್ಪರ್ಧೆ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000.
ಯುವ ಕಲಾಕಾರರ ಸ್ಪರ್ಧೆ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000.
ಫೋಟೊಗ್ರಫಿ ಸ್ಪರ್ಧೆ ಮತ್ತು ಕಾರ್ಯಾಗಾರ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000
ಭಾಷಣ ಸ್ಪರ್ಧೆ: ಪ್ರಥಮ –ರೂ.5000, ದ್ವಿತೀಯ-ರೂ.2500, ತೃತೀಯ-ರೂ.1500
ಕಥೆ ಬರವಣಿಗೆ: ಪ್ರಥಮ–ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000
ಜಾನಪದ ನೃತ್ಯ ಕಾರ್ಯಕ್ರಮ-ಗುಂಪು: ಪ್ರಥಮ –ರೂ.7000, ದ್ವಿತೀಯ-ರೂ.5000 , ತೃತೀಯ-ರೂ.3000.
ಜಾನಪದ ನೃತ್ಯ ಕಾರ್ಯಕ್ರಮ-ವೈಯಕ್ತಿಕ: ಪ್ರಥಮ –ರೂ.2500, ದ್ವಿತೀಯ-ರೂ.1500, ತೃತೀಯ-ರೂ.1000.
ಷರತ್ತುಗಳು:
ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಯಸ್ಸು 15 ರಿಂದ 29 ವರ್ಷದೊಳಗಿನವರಾಗಿರಬೇಕು. ಹಿಂದಿ, ಇಂಗ್ಲೀಷ್ನಲ್ಲಿ ಮಾತನಾಡಬಹುದು. ಆಧಾರ್ ಕಾರ್ಡ್, 2 ಫೋಟೊ, ಜನ್ಮ ದಿನಾಂಕದ ದಾಖಲಾತಿ, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.9972552385, 9049487027 ಗೆ ಸಂಪರ್ಕಿಸಬಹುದು.




