ಬೆಂಗಳೂರು: ಅನ್ಯ ಭಾಷೆಯ ಪದಗಳನ್ನು ಬಳಸದೆ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಘೋಷಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ 5000/ ರೂ., ದ್ವಿತೀಯ 3000 ರೂ., ತೃತೀಯ 2000/ ರೂ. ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ನಡೆಸಲಾಗುವುದು. ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ, 50,000/- ರೂ., ದ್ವಿತೀಯ ಬಹುಮಾನ- 30,000/- ಮತ್ತು ತೃತೀಯ ಬಹುಮಾನ 20,000/ರೂ. ನೀಡಲಾಗುವುದು. ಅಕ್ಟೋಬರ್ 28ರೊಳಗೆ ವಿಡಿಯೋ – ಸೆಲ್ಫಿ ರೆಕಾರ್ಡ್ ಮಾಡಿ ಕಳುಹಿಸಬಹುದು. ಅಕ್ಟೋಬರ್ 20ರಂದು ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.




