ಹೆಮ್ಮಿಗೇಪುರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬ
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ, ಹೆಮ್ಮಿಗೇಪುರ ವಾರ್ಡ್: ತಲ್ಲಘಟ್ಟಪುರದಲ್ಲಿ ಮಾಜಿ ಪಾಲಿಕೆ ಸದಸ್ಯರ ಜನಸಂಪರ್ಕ ಕಛೇರಿಯಲ್ಲಿ ಆರ್ಯ ಶ್ರೀನಿವಾಸ್ ಅಭಿಮಾನಿಗಳ ಬಳಗದ ವತಿಯಿಂದ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ರವರ ಹುಟ್ಟುಹಬ್ಬದ ಆಯೋಜಿಸಿದ್ದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಆರ್ಯ ಶ್ರೀನಿವಾಸ್ ಮತ್ತು ಸಿಂಧೂ ಆರ್ಯ ಶ್ರೀನಿವಾಸ್ ರವರು ಕೇಕ್ ಕಟ್ ಮಾಡಿ ಅಭಿಮಾನಿಗಳು, ಸ್ನೇಹಿತರುಗಳಿಗೆ ಸಿಹಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಹನುಮಂತೇಗೌಡ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಸಾರ್ವಜನಿಕರು, ಸಂಘ, ಸಂಸ್ಥೆಗಳು ಹಾಗೂ ರಾಜಕೀಯ ಮುಖಂಡರು ಆರ್ಯ ಶ್ರೀನಿವಾಸ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆರ್ಯ ಶ್ರೀನಿವಾಸ್, ತಂದೆ, ತಾಯಿಯ ಆಶೀರ್ವಾದ ಮತ್ತು ನನ್ನ ರಾಜಕೀಯ ಗುರುಗಳು, ಮಾರ್ಗದರ್ಶಕರಾದ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಹೆಮ್ಮಿಗೇಪುರ ವಾರ್ಡ್ ಜನರ ಸಹಕಾರದಿಂದ ಬಿಬಿಎಂಪಿ ಸದಸ್ಯನಾಗಿ ಜನಸೇವೆ ಮಾಡುವ ಅವಕಾಶ ಕೊಟ್ಟರು. ಬೆಂಗಳೂರು ನಗರ ಪ್ರದೇಶಕ್ಕೆ ಹೊಸದಾಗಿ ಹೆಮ್ಮಿಗೇಪುರ ವಾರ್ಡ್ ಸೇರ್ಪಡೆಯಾಯಿತು, ನೂತನ ವಾರ್ಡ್ ನಲ್ಲಿ ಹಲವಾರು ಸಮಸ್ಯೆ ಇತ್ತು. ಮಾಜಿ ಸಚಿವರು, ಶಾಸಕರಾದ ಎಸ್.ಟಿ.ಸೋಮಶೇಖರ್ ಗೌಡ್ರರು ಮತ್ತು ವಾರ್ಡ್ ನಾಗರಿಕರ ಸಹಕಾರದಿಂದ ಹೆಮ್ಮಿಗೇಪುರ ವಾರ್ಡ್ ಮಾದರಿ ವಾರ್ಡ್ ಆಗಿ ರೂಪಿಸಲಾಗಿದೆ ಎಂದರು.
ಉತ್ತಮ ರಸ್ತೆ, ನವೀಕರಣ ಉದ್ಯಾನವನ ಮತ್ತು ಕಾವೇರಿ ಕುಡಿಯುವ ನೀರಿನ ಸಂಪರ್ಕ ಮತ್ತು 110 ವ್ಯಾಪ್ತಿಗೆ ಬರುವ ನಮ್ಮ ವಾರ್ಡ್ ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೆಮ್ಮಿಗೇಪುರ ವಾರ್ಡ್ ನಾಗರಿಕರ ಪ್ರೀತಿ, ವಿಶ್ವಾಸಕ್ಕೆ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.




