ಸಾರ್ವಜನಿಕರ ಸಹಕಾರ, ಬೆಂಬಲ ಮತ್ತು ಸಲಹೆಯಿಂದ ಅಭಿವೃದ್ಧಿ: ಆರ್ಯ ಶ್ರೀನಿವಾಸ್

3 years ago

#Development #through #public #cooperation #support #advice #AryaSrinivas

ಬೆಂಗಳೂರು: ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ನನ್ನ ಗುರುಗಳಾದ ಶಾಸಕ ಎಸ್.ಟಿ.ಸೋಮಶೇಖರ್ ರವರು ಕಾರಣ ಎಂದು ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಹೇಳಿದರು.

ಶ್ರೀ ಮೂಕಾಂಬಿಕಾ ಎಂಟರ್ ಪ್ರೈಸಸ್ ಜನಸಂಪರ್ಕ ಕಛೇರಿ ಆವರಣದಲ್ಲಿ ತಮ್ಮ ಜನ್ಮದಿನಾಚರಣೆಯಲ್ಲಿ ಮಾತಾಡಿದ ಅವರು, ಹೆಮ್ಮಿಗೇಪುರ ವಾರ್ಡ್ ನಿಂದ ಬಿಬಿಎಂಪಿ ಸದಸ್ಯನಾಗಿ ವಾರ್ಡ್ ಸಮಗ್ರ ಅಭಿವೃದ್ದಿ ಹಗಲಿರುಳು ಶ್ರಮಿಸಿದ್ದೇನೆ.ಸಾರ್ವಜನಿಕರು ನನಗೆ ಸಹಕಾರ, ಬೆಂಬಲ ಮತ್ತು ಸದಾ ಸಲಹೆ ನೀಡುತ್ತಾ ಅಭಿವೃದ್ದಿ ಕೆಲಸಗಳಿಗೆ ಕೈಜೋಡಿಸಿ ಕಾರಣದಿಂದ ಅಭಿವೃದ್ದಿಯ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ತಲಘಟ್ಟಪುರಪುರದ ಹೆಮ್ಮಿಗೇಪುರ ವಾರ್ಡ್ ನಲ್ಲಿ ನಡೆದ ತಮ್ಮ ಜನ್ಮದಿನಾಚರಣೆ ಸಂದರ್ಭದಲ್ಲಿ ಮಾತಾಡಿದ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು

ಅದ್ದೂರಿಯಾಗಿ ನಡೆದ ಜನ್ಮದಿನಾಚರಣೆ ವೇಳೆ ಕೇಕ್ ಕತ್ತರಿಸಿ , ಎಲ್ಲರಿಗೂ ಸಿಹಿ ವಿತರಿಸಲಾಯಿತು. ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರಮುಖ ರಾಜಕೀಯ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸಿ ಆರ್ಯ ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.ಸಿಂಧೂ ಆರ್ಯ ಶ್ರೀನಿವಾಸ್, ಹನುಮಂತೇಗೌಡ ಮೊದಲಾದವರು ಉಪಸ್ಥಿತರಿದ್ದರು.

Leave a Reply