ನಿಮ್ಮ ಸೇವೆ ಮಾಡುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ: ಆರ್ಯ ಶ್ರೀನಿವಾಸ್

1 year ago

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಮೂಕಾಂಬಿಕಾ ಎಂಟರ್ ಪ್ರೈಸಸ್ ನಲ್ಲಿ ಹೆಮ್ಮಿಗೇಪುರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರಿಂದ ಅದ್ದೂರಿಯಾಗಿ ಆಚರಿಸಿದರು.

ಸಿಂಧೂ ಆರ್ಯ ಶ್ರೀನಿವಾಸ್, ಯುವ ಮುಖಂಡ ಹನುಮಂತೇಗೌಡ ಹಾಗೂ ಸ್ಥಳೀಯ ರಾಜಕೀಯ ಮುಖಂಡರು, ಸಾರ್ವಜನಿಕರು, ಹೆಮ್ಮಿಗೇಪುರ ವಾರ್ಡ್ ನಿವಾಸಿಗಳು ಆರ್ಯ ಶ್ರೀನಿವಾಸ್ ರವರಿಗೆ ಸನ್ಮಾನಿಸಿ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಆರ್ಯ ಶ್ರೀನಿವಾಸ್, ರಾಜಕೀಯ ಕ್ಷೇತ್ರ ಜನ ಸೇವೆಗೆ ಇರುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಜನರ ಆಶಯದಂತೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಬೇಕು ಎಂದರು.

ಮಾಜಿ ಸಚಿವರು, ಶಾಸಕರಾದ ಎಸ್.ಟಿ.ಸೋಮಶೇಖರ್ ರವರು ನಮ್ಮ ರಾಜಕೀಯ ಗುರುಗಳು, ಅವರ ಮಾರ್ಗದರ್ಶನದಲ್ಲಿ ರಾಜಕೀಯದಲ್ಲಿ ಜನಸೇವೆ ಮಾಡುತ್ತಿದ್ದೇನೆ. ಹೆಮ್ಮಿಗೇಪುರ ವಾರ್ಡ್ ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ವಾರ್ಡ್ ಆಗಿ ರೂಪಗೊಂಡಿದೆ ಎಂದರು.

ಶಾಸಕರು ಮತ್ತು ಹೆಮ್ಮಿಗೇಪುರ ವಾರ್ಡ್ ನಾಗರಿಕರ ಆಶೀರ್ವಾದ ಫಲದಿಂದ ಬಿಬಿಎಂಪಿ ಸದಸ್ಯನಾಗಿ 5 ವರ್ಷ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರು. ಬಡವರ ಸೇವೆ ಮಾಡುವ ಕಾರ್ಯ ಮತ್ತು ಜನರ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ, ನಿಮ್ಮ ಸೇವೆ ಮಾಡುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ ಎಂದರು.

Leave a Reply