ಅಭಿಮಾನಿಗಳು, ಸ್ನೇಹಿತರಿಂದ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬ ಅಚರಣೆ

4 years ago

ಅಭಿಮಾನಿಗಳು, ಸ್ನೇಹಿತರಿಂದ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬ ಅಚರಣೆ
ಬೆಂಗಳೂರು: ಹೆಮ್ಮಿಗೆಪುರ ವಾರ್ಡ್, ತಲಘಟ್ಟಪುರದಲ್ಲಿ ಮೂಕಾಂಬಿಕಾ ಎಂಟರ್ ಪ್ರೈಸಸ್ ಕಛೇರಿ ಅವರಣದಲ್ಲಿ ಆರ್ಯ ಶ್ರೀನಿವಾಸ್ ಅಭಿಮಾನಿ ಬಳಗದ ವತಿಯಿಂದ ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಅವರ ಹುಟ್ಟಹಬ್ಬವನ್ನು ಏರ್ಪಡಿಸಲಾಗಿತ್ತು. ಅಭಿಮಾನಿಗಳು, ಸ್ನೇಹಿತರ ಸಮ್ಮುಖದಲ್ಲಿ ಆರ್ಯ ಶ್ರೀನಿವಾಸ್ ಅವರು ಕೇಕ್ ಕತ್ತರಿಸಿ, ಸಿಹಿ ತಿಂಡಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ಸದಸ್ಯ ಆರ್ಯ ಶ್ರೀನಿವಾಸ್, ನನ್ನ ರಾಜಕೀಯ ಗುರುಗಳು, ಮಾರ್ಗದರ್ಶಕರಾದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ರವರ ಆಶೀರ್ವಾದದಿಂದ ಮತ್ತು ಹೆಮ್ಮಿಗೆಪುರ ವಾರ್ಡ್ ನಾಗರಿಕರ ಸಹಕಾರ, ಬೆಂಬಲದಿಂದ ಕಳೆದ ಬಾರಿ ಬಿ.ಬಿ.ಎಂ.ಪಿ. ಸದಸ್ಯನಾಗಿ ಆಯ್ಕೆಯಾದೆ. ಕಳೆದ ಪಾಲಿಕೆ ಸದಸ್ಯನಾಗಿ ನನ್ನ ಅಧಿಕಾರ ಅವಧಿಯಲ್ಲಿ ಹೆಮ್ಮಿಗೆಪುರ ವಾರ್ಡ್ ಹಲವಾರು ಸಮಸ್ಯೆಗಳಿಂದಕೂಡಿತ್ತು ಎಂದರು.
ಸಚಿವರ ಸಹಕಾರದಿಂದ ಹೆಮ್ಮಿಗೆಪುರ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ಡಾಂಬರೀಕರಣ ರಸ್ತೆಗಳು ಹಾಗೂ ಉದ್ಯಾನವನಗಳ ನಿರ್ಮಾಣ ಹಲವಾರು ಅಭಿವೃದ್ಧಿ ಕೆಲಸಗಳ ಯೋಜನೆಗಳನ್ನ ರೂಪಿಸಿ, ಅನುಷ್ಠಾನಕ್ಕೆ ತಂದು ಮಾದರಿ ವಾರ್ಡ್ ಆಗಿ ಮಾಡಲಾಗಿದೆ ಎಂದರು.
ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಸಹಕಾರ ಮತ್ತು ಹೆಮ್ಮಿಗೆಪುರ ವಾರ್ಡ್ ನಾಗರಿಕರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ನಿಮ್ಮಲ್ಲರ ಅಭಿಮಾನ, ಪ್ರೀತಿಗೆ ಅಭಿನಂದನಾಪೂರ್ವಕ ಧನ್ಯವಾದಗಳು ಎಂದರು.
ಯಶವಂತಪುರ ಸಿಂಧೂ ಆರ್ಯ ಶ್ರೀನಿವಾಸ್, ಬಿ.ಜೆ.ಪಿ. ಮುಖಂಡರಾದ ಹನುಮಂತೇಗೌಡ, ಹೆಮ್ಮಿಗೆಪುರ ವಾರ್ಡ್ನನ ಬಿ.ಜೆ.ಪಿ. ಮುಖಂಡರು, ಸ್ನೇಹಿತರು ಮತ್ತು ಸ್ಥಳೀಯರು ಭಾಗವಹಿಸಿದ್ದರು.

Leave a Reply