ಬೆಂಗಳೂರು ನಗರದಲ್ಲಿ ಮತ್ತು ರಾಜ್ಯದ ಭಾಗದಲ್ಲಿ ಪ್ರತಿದಿನವೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಹಾಗೆ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಆಂಗ್ಲ ಮಾಧ್ಯಮದ ಪತ್ರಿಕೆಗಳಲ್ಲಿ ಇಂತಹ ಕಾರ್ಯಕ್ರಮಗಳ ಸುದ್ದಿ ಇರಲಿ, ಸಣ್ಣ ಚಿತ್ರವು ಸಹ ಪ್ರಕಟವಾಗುವುದಿಲ್ಲ. ಆದರೆ ವಾಣಿಜ್ಯದ ಉದ್ದೇಶಗಳಿಗಾಗಿ ನಡೆಯುವಂತಹ ಕಾರ್ಯಕ್ರಮಗಳ ವಿಚಾರವನ್ನು ಹಲವಾರು ಪುಟಗಳ ಲೆಕ್ಕದಲ್ಲಿ ಪ್ರಕಟಿಸಿ ಪ್ರಚಾರವನ್ನು ನೀಡುತ್ತಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಹಾಗೆ ವಿಚಾರ ಸಂಕಿರಣಗಳು, ಚರ್ಚೆಗಳು ನಾಡು-ನುಡಿಗೆ ದುಡಿದಂತಹ ಮಹನೀಯರ ನೆನಪಿನ, ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಎಂತಹ ದೊಡ್ಡ ವ್ಯಕ್ತಿಗಳು ಪ್ರಮುಖರು ಸಹ ಸಭೆಯಲ್ಲಿ ಅನೇಕ ಮಹತ್ತರವಾದ ವಿಚಾರಗಳನ್ನು ಪ್ರಸ್ತಾಪಿಸಿದ್ದರು ಸಹ ಆಂಗ್ಲ ಮಾಧ್ಯಮದ ಪತ್ರಿಕೆಗಳಲ್ಲಿ ಒಂದೇ ಒಂದು ಸಾಲಿನ ಸುದ್ದಿಯು ಪ್ರಕಟಣೆ ಯಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ನಾಡಿನಲ್ಲಿ ಮುದ್ರಣಗೊಂಡು ಪ್ರಸಾರ ಮಾಡುತ್ತಿರುವ ಆಂಗ್ಲ ಮಾಧ್ಯಮದ ಪತ್ರಿಕೆಯವರು ಇನ್ನು ಮುಂದಿನ ದಿನಗಳಲ್ಲಾದರೂ ತಮ್ಮ ಧೋರಣೆಯನ್ನ ಬದಲಾಯಿಸಿಕೊಳ್ಳಿ. ಆಂಗ್ಲ ಮಾಧ್ಯಮದ ಪತ್ರಿಕೆಯನ್ನು ಕೇವಲ ವಿದೇಶದಲ್ಲಿ ನೆಲೆಸಿರುವವರು ಅಥವಾ ಬ್ರಿಟಿಷರು ಬಿಟ್ಟು ಹೋಗಿರುವ ಅವರ ಸಂಬಂಧಿಕರು ಮಾತ್ರ ಓದುವುದಿಲ್ಲ. ನಾಡಿನ ಬಹುತೇಕ ಜನರು ಆಂಗ್ಲ ಮಾಧ್ಯಮದ ಪತ್ರಿಕೆಗಳನ್ನು ಸಹ ಕೊಂಡು ಓದುತ್ತಾರೆ. ಇಂತಹ ಪತ್ರಿಕೆಯಲ್ಲಿ ನಮ್ಮ ನಾಡು ನುಡಿಗೆ ಸಂಬಂಧಪಟ್ಟ ವಿಚಾರಗಳಿಗೆ ಕನಿಷ್ಠ ಮಟ್ಟದ ಪ್ರಚಾರವನ್ನು ನೀಡದಿದ್ದರೆ ಇದು ಒಂದು ರೀತಿಯಲ್ಲಿ ಅಸಡ್ಡೆಯ ಮತ್ತು ತಾಕ್ಷರತನ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಆದುದರಿಂದ ಆಂಗ್ಲ ಮಾಧ್ಯಮದ ಪತ್ರಿಕೆಗಳ ಸಂಪಾದಕರು ಇಂತಹ ವಿಚಾರದಲ್ಲಿ ಗಂಭೀರವಾದ ಚಿಂತನೆಯನ್ನು ನಡೆಸಬೇಕಾದದ್ದು ಅನಿವಾರ್ಯವೂ ಹೌದು ಅವಶ್ಯವೂ ಹೌದು.
ಉತ್ತರ ಭಾರತದ ನಟ ನಟಿಯರು ಮತ್ತು ಫ್ಯಾಷನ್ ಕಾರ್ಯಕ್ರಮಗಳು ಇವುಗಳಿಗೆ ನೀಡುವಷ್ಟು ಆದ್ಯತೆಯನ್ನ ಕನ್ನಡ ಕಾರ್ಯಕ್ರಮಗಳಿಗೆ ನೀಡುವುದಿಲ್ಲ. ಪತ್ರಿಕೆಗಳನ್ನು ನಡೆಸಲು ಜಾಹೀರಾತು ಅವಶ್ಯಕತೆ ಇದೆ. ಆದರೆ ಜೊತೆಗೆ ನಾಡಿನ ಭಾಷೆಯ ಮೇಲೆ ಒಂದಷ್ಟು ಪ್ರೀತಿಯು ಇರಬೇಕಲ್ಲವೇ?
– ಕೆ ಎಸ್ ನಾಗರಾಜ್, ಬೆಂಗಳೂರು




