FB suggest ಮಾಡ್ತು ಅಂತ ಕೆಲವು ರಾಜಕೀಯದ ಪೇಜ್ ಗಳನ್ನು scroll ಮಾಡಿಕೊಂಡು ಹೋದೆ. ಕ್ಯಾಂಪೇನ್ ಭಾಗವಾಗಿ ಒಂದಷ್ಟು ಚಿಕ್ಕ ಚಿಕ್ಕ ವಿಡಿಯೋಗಳಿದ್ವು. ಎಲ್ಲಾ ಜನ ಸಾಮಾನ್ಯರ, ಹಳ್ಳಿಗಳ ಜನರ ಅಭಿಪ್ರಾಯಗಳ ವಿಡಿಯೋಸ್.
ಆಸಕ್ತಿಕರ ಅನಿಸಿ ನೋಡುತ್ತ ಹೋದೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಹೆಣ್ಣುಮಕ್ಕಳು ಫ್ರೀ ಬಸ್ ಬಗ್ಗೆ; ಅಕ್ಕಿ ಮತ್ತು ಹೆಚ್ಚುವರಿ ಹಣದ ಬಗ್ಗೆ ಖುಷಿಯಾಗಿ ಮಾತಾಡ್ತಿದ್ದರು. ಅವು ಹೇಳಿಕೊಟ್ಟ ಮಾತುಗಳಲ್ಲ ಅನ್ನೋದು ಮಾತಿನ ಧಾಟಿಯಲ್ಲಿ ಎಂಥವರೂ ಗುರುತಿಸುವಂತೆ ಇದ್ದವು.
ಅವವೇ ವಿಷಯಗಳ ಬಗ್ಗೆ ಗಂಡಸರ ಬೈಟ್ಸ್ ಸಿಟ್ಟು ತರಿಸುವ ಹಾಗಿತ್ತು. ನನಗೆ ಸಿಟ್ಟು ತರಿಸಿದವು. ತಾವು ತಮ್ಮ ಮನೆಯ ಹೆಣ್ಣುಗಳಿಗೆ ಬಸ್ ಚಾರ್ಜ್ ಕೊಡುವ, ಸಾಸಿವೆ – ಜೀರಿಗೆಗೆ ಹಣ ಕೊಡುವ ದೊಡ್ಡ ಸಂಕಷ್ಟದಿಂದ ಪಾರಾದೆವು ಅನ್ನುವಂತಿದ್ದ ಅವರ ಮಾತುಗಳು ಅಷ್ಟೇನೂ ಖುಷಿ ಕೊಡಲಿಲ್ಲ.
ಈ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಗಮನ ಸೆಳೆದಿದ್ದು ಭಾಷೆ. ಆ ಜನಗಳು ಅದೆಂಥದ್ದೇ ಕನ್ನಡದಲ್ಲಿ ಮಾತಾಡಿದರೂ ಇಂಗ್ಲಿಶ್ ಬಳಕೆ ಹೇರಳವಾಗಿದ್ದವು. ಹಳ್ಳಿ ಮತ್ತು ಪುಟ್ಟ ಪಟ್ಟಣಗಳ ಜನ ಅವರು.
ಯೂಸ್ ಮಾಡೋದು, ಎಜುಕೇಶನ್ನು, ಬ್ಯಾಂಗಲೋರ್, ಪ್ರಾಬ್ಲಮ್, ಫೆಸಿಲಿಟೀಸ್, ಮೆಡಿಸನ್ – ಇತ್ಯಾದಿ ಪದಗಳು ತಮ್ಮನ್ನು ಕೂಲಿಕಾರ ಕುಟುಂಬ ಎಂದು ಹೇಳಿಕೊಂಡವರಿಂದಲೂ ಬಂದವು. ಅವು ತೋರಿಕೆಯಲ್ಲ, ಸಹಜ ಆಡುನುಡಿಯಾಗೇ ಇದ್ದವು.
(ಕೆಲವು ಸಿಟಿ ಮಂದಿ ಶಿಕ್ಷಣ, ಬೆಂಗಳೂರು, ಸಮಸ್ಯೆ, ಬಳಕೆ, ಔಷಧಿ ಅನ್ನೋದು ಕೇಳಿದ್ದೇನೆ)
ಈ ಅಬ್ಸರ್ವೇಶನ್ ನನಗೆ ನಿರಾಸೆ, ಖುಷಿ, ಕುತೂಹಲ, ಆತಂಕ, ಆಕ್ಷೇಪ – ಯಾವುದನ್ನೂ ಹುಟ್ಟಿಸಲಿಲ್ಲ. ಬದಲಿಗೆ; ಇನ್ನು ಮುಂದೆ ಸಿನೆಮಾದವರು, ಸೀರಿಯಲ್ ನವರು ಮತ್ತು ಪುಸ್ತಕ ಕತೆಗಾರರು ಹಳ್ಳಿಯವರು ಅಂದಕೂಡಲೇ ಬರಿಯ ಆಡುಗನ್ನಡ, ಸಿಟಿ ಜನ ಅಂದಕೂಡಲೇ ಇಂಗ್ಲಿಶ್ ಮಿಶ್ರಿತ ಕನ್ನಡ ಅನ್ನುವ ಸವಕಲು ನಿಯಮ ಬಿಡಬೇಕು ಅನಿಸಿತು.
ಈಗೀಗ ಭಾಷೆಯೂ ಸೇರಿದಂತೆ ಪ್ರತಿಯೊಂದೂ ಹಳ್ಳಿ – ಪಟ್ಟಣಗಳ ಗೆರೆ ಅಳಿಸಿಕೊಳ್ಳುತ್ತಿವೆ. ಈ ಬಗ್ಗೆ ಬರಹಗಾರರು ಇನ್ನೂ ಅಪ್ಡೇಟ್ ಆಗಿಲ್ಲ ಅನಿಸಿತು.
ಇದು ನನ್ನ ಹೊಸ ಕಲಿಕೆ.
ರಾಜಕೀಯ ವಿಡಿಯೋಗಳಿಗೆ ಧನ್ಯವಾದ 🙂
– ಚೇತನಾ ತೀರ್ಥಹಳ್ಳಿ, ಕವಯಿತ್ರಿ



