ಸಾಹಿತಿಗಳು, ಕವಿಗಳು, ವಿಜ್ಞಾನಿಗಳು, ಸಮಾಜ ಸುಧಾರಕರು ಇವರುಗಳಿಗೆ ರಾಜಕೀಯ ಪಕ್ಷಗಳಲ್ಲಿ ಗೌರವ ಅರ್ಪಿಸುವ ಸಂಪ್ರದಾಯವೇ ಇಲ್ಲ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಬಹಳಷ್ಟು ರಾಜಕೀಯ ಪಕ್ಷಗಳಲ್ಲಿ ರಾಜಕಾರಣಿಗಳು ನಿಧನರಾದರೆ ಮಾತ್ರ ಅವರಿಗೆ ಶ್ರದ್ಧಾಂಜಲಿಯನ್ನ ಅರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಇನ್ನು ಸಾರ್ವಜನಿಕರು ಜನಪ್ರಿಯ ಚಲನಚಿತ್ರ ನಟರು ನಿಧರರಾದರೆ ಮಾತ್ರ ಅವರ ಭಾವಚಿತ್ರಗಳನ್ನು ಅಳವಡಿಸಿ ಅವರಿಗೆ ಗೌರವ ಅರ್ಪಿಸುತ್ತಾರೆ. ಇದರ ಹೊರತಾಗಿ ಸಾಹಿತಿಗಳು, ಕವಿಗಳು, ವಿಜ್ಞಾನಿಗಳು, ಹಾಗೂ ಸಮಾಜ ಸುಧಾರಕರು ನಿಧನರಾದರೆ ಅವರಿಗೆ ಯಾವ ರಾಜಕೀಯ ಪಕ್ಷವು ತಮ್ಮ ಕಚೇರಿಗಳಲ್ಲಿ ಶ್ರದ್ಧಾಂಜಲಿಯನ್ನ ಅರ್ಪಿಸುವುದಿಲ್ಲ. ಅದೇ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಸಹ ಅವರ ಭಾವಚಿತ್ರಗಳಿಗೆ ಪುಷ್ಪ ನಮನವನ್ನು ಸಲ್ಲಿಸುವುದು ಅಪರೂಪವೇ ಸರಿ.
ರಾಜಕೀಯ ಪಕ್ಷಗಳಿಗೆ ರಾಜಕಾರಣಿಗಳು ಮಾತ್ರವೇ ದೇಶ ಸೇವಕರು ಆಗಿರುತ್ತಾರೆ. ವಿಜ್ಞಾನಿಗಳು, ಮತ್ತು ಅವರ ಕೊಡುಗೆಗಳು ಅದರಿಂದ ನಮ್ಮ ಬದುಕಿನ ಮೇಲೆ ಆಗುವಂತಹ ಪರಿಣಾಮಗಳು ಇವುಗಳ ಬಗ್ಗೆ ಅರಿವು ಇರುವುದಿಲ್ಲ, ಅದೇ ರೀತಿಯಲ್ಲಿ ಕವಿಗಳು ಮತ್ತು ಸಾಹಿತಿಗಳು ಹಾಗೂ ಸಮಾಜ ಸುಧಾರಕರು ತಮ್ಮದೇ ಆದಂತಹ ಕೊಡುಗೆಗಳ ಮೂಲಕ ನಮ್ಮ ಭಾಷೆಯನ್ನ ಬಹಳ ಎತ್ತರಕ್ಕೆ ಏರಿಸುತ್ತಾರೆ ಮತ್ತು ಸಮಾಜ ಸುಧಾರಕರು ಶಿಕ್ಷಣ ತಜ್ಞರು ತಮ್ಮದೇ ಆದಂತಹ ಕೊಡುಗೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ದುಡಿದಿರುತ್ತಾರೆ. ಇವರುಗಳ ಸೇವೆಯನ್ನ ನೆನಪು ಮಾಡಿಕೊಳ್ಳುವವರು ಕೇವಲ ಒಂದಷ್ಟು ಸಂಘ ಸಂಸ್ಥೆಯವರು ಮಾತ್ರ. ಯಾವ ರಾಜಕೀಯ ಪಕ್ಷದಲ್ಲೂ ಇವರುಗಳಿಗೆ ಶ್ರದ್ಧಾಂಜಲಿಯನ್ನ ಅರ್ಪಿಸುವ ಕೆಲಸವನ್ನು ಮಾಡುವುದಿಲ್ಲ. ಇದರಿಂದಾಗಿ ರಾಜಕೀಯ ಕಾರ್ಯಕರ್ತರಲ್ಲಿ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಚಿಂತನೆಗಳು ಬೆಳೆಸುವಂತಹ ಪ್ರಯತ್ನಗಳನ್ನು ನಾಯಕರು ಮಾಡುವುದಿಲ್ಲ.
ಮುಂದಿನ ದಿನಗಳಲ್ಲಾದರೂ ರಾಜಕೀಯ ಪಕ್ಷಗಳು ಪ್ರಮುಖ ವ್ಯಕ್ತಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ದುಡಿದವರು ನಿಧನರಾದರೆ ಕನಿಷ್ಠ ಪಕ್ಷ ನಿಮ್ಮ ಕಚೇರಿಗಳ ಮುಂಭಾಗದಲ್ಲಿ ಅವರದೊಂದು ಭಾವಚಿತ್ರವನ್ನು ಹಾಕಿ ಒಂದಷ್ಟು ಹೂವವನ್ನ ಹಾಕಿ ಗೌರವವನ್ನು ನೀಡುವ ಸಂಪ್ರದಾಯವನ್ನು ಆರಂಭಿಸಿ. ಸಾಹಿತಿಗಳು, ಕಲಾವಿದರು, ಕವಿಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಸಮಾಜ ಸುಧಾರಕರು ಈ ಸಮಾಜದ ಒಂದು ಭಾಗವಾಗಿರುತ್ತಾರೆ ಎಂಬುದು ನೆನಪಿನಲ್ಲಿರಲಿ.
ನಮ್ಮ ದೃಶ್ಯ ಮಾಧ್ಯಮಗಳು ವಿಜ್ಞಾನಿಗಳು ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು ಇಲ್ಲವೇ ಸಮಾಜ ಸುಧಾರಕರು ಸತ್ತರೆ ಅವರ ವಿಚಾರದಲ್ಲಿ ಕೆಲವು ನಿಮಿಷದ ಕಾರ್ಯಕ್ರಮಗಳನ್ನು ಮಾಡಲು ಸಮಯವಿರುವುದಿಲ್ಲ. ಕಾರಣ ಇವರುಗಳನ್ನ ತೋರಿಸುವುದರಿಂದ ಯಾವ ಟಿ ಆರ್ ಪಿ ಯು ಹೆಚ್ಚಾಗುವುದಿಲ್ಲ ಎನ್ನುವ ನಂಬಿಕೆ ಇವರದಾಗಿರುತ್ತದೆ. ಇದರಿಂದಾಗಿ ಇವರಿಗೆ ಚಲನಚಿತ್ರ ನಟ ನಟಿಯರು ಮತ್ತು ರಾಜಕಾರಣಿಗಳು ಇಲ್ಲವೇ ಕ್ರಿಕೆಟ್ ಆಟಗಾರರ ಎಲ್ಲ ವಿಚಾರಗಳು ಬಹಳ ಪ್ರಮುಖವಾಗುತ್ತದೆ. ಅವರುಗಳ ವಿಚಾರದಲ್ಲಿ ಎಷ್ಟು ದಿನವೇ ಬೇಕಾದರೂ ಕಾರ್ಯಕ್ರಮವನ್ನು ಮಾಡಲು ಸಿದ್ಧರಿರುತ್ತಾರೆ. ಇದರಿಂದಾಗಿ ಅವರು ಪರಿಚಿತರಾದಷ್ಟು ಜನಮಾನಸದಲ್ಲಿ, ಕವಿಗಳು ಸಾಹಿತಿಗಳು ಶಿಕ್ಷಣ ತಜ್ಞರು ಸಮಾಜ ಸುಧಾರಕರು ಜನಸಾಮಾನ್ಯರಿಗೆ ಪರಿಚಯವೇ ಇರುವುದಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು



