ನಾಡಗೀತೆಗೆ `ಬೌದ್ಧರುದ್ಯಾನ’ ಪದ ಸೇರ್ಪಡೆಗೆ ಬೆಂಬಲ

3 weeks ago

ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿಯ ಮೂಲಕ ಇದೇ 13ರಂದು ನಾಡಗೀತೆಯಲ್ಲಿ `ಬೌದ್ಧರುದ್ಯಾನ’ ಪದ ಸೇರ್ಪಡೆಗಾಗಿ ಶಿಫಾರಸ್ಸು ಮಾಡಿದ ಬೆನ್ನಲ್ಲೇ, ಕುವೆಂಪು ವಿರಚಿತ ನಾಡಗೀತೆಗೆ `ಬೌದ್ಧರುದ್ಯಾನ’ ಎಂಬ ಪದ ಮರು ಸೇರ್ಪಡೆಗೆ ಕೆಲವರು ಆಕ್ಷೇಪ ಮಾಡಿದ್ದಾರೆ. ಇದನ್ನು ನಮ್ಮ ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದಿಂದ ವಿರೋಧಿಸುತ್ತೇವೆ.


ಕಾರಣ ರಾಷ್ಟ್ರಕವಿ ಕುವೆಂಪು ಎಂದಿಗೂ ಧರ್ಮ ವಿರೋಧಿಯಾಗಿರಲಿಲ್ಲ `ಸರ್ವ ಜನಾಂಗದ ಶಾಂತಿ’ಗಾಗಿ ಸಾಹಿತ್ಯ ರಚನೆ, ಮಾಡಿದವರು. ಕುವೆಂಪು ಅವರು 07.12.1928ರ ನಾಡಗೀತೆಯಲ್ಲಿ `ಮಾಧ್ವ’ ಪದ ಸೇರಿಸಿರಲಿಲ್ಲ ನಂತರ ಸೇರ್ಪಡೆ ಮಾಡಲಾಗಿದೆ. ಅವರ ಕಾಲದ ಸ್ಥಿತಿಗೂ ಇಂದಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಇಂದು ಅವರು ಬದುಕಿದಿದ್ದರೆ `ಬೌದ್ಧರುದ್ಯಾನ’ ಪದದ ಸೇರ್ಪಡೆಗೆ ಅವರು ಸಹ ಖಂಡಿತ ಒಪ್ಪುತ್ತಿದ್ದರು. ಕಾರಣ ಹೋರಗಿನಿಂದ ಬಂದ ಕ್ರೈಸ್ತ, ಹಿಂದೂ, ಮುಸಲ್ಮಾನ ಧರ್ಮಗಳಿಗೆ ನಾಡಗೀತೆಯಲ್ಲಿ ಸ್ಥಾನ ಇರುವವಾಗ ಇಲ್ಲಿನ ಮೂಲ ನಿವಾಸಿಗಳಾಗಿ ಇಡೀ ವಿಶ್ವದಾದ್ಯಾಂತ ಇದ್ದ ಮೊದಲ ಧರ್ಮವಾದ `ಬೌದ್ದಧರ್ಮ: ಇವರು ದೇಶದ ಹಿಂದೂಗಳಿಗೆ `ನಾಗಸಂಸ್ಕೃತಿ’ ಕೊಟ್ಟವರು. ಹೀಗಾಗಿ ಮಾಧ್ವ ಪದದಂತೆ `ಬೌದ್ಧರುದ್ಯಾನ’ ಪದದ ಸೇರ್ಪಡೆ ಅಗತ್ಯವಾಗಿ ಆಗಲೇಬೇಕು: ನಮ್ಮ ಸಂವಿಧಾನ ಪಿಠಿಕೆ ಹೇಳುವುದು ಅಲ್ಪ ಸಂಖ್ಯಾತರ ಧರ್ಮದ ರಕ್ಷಣೆ ಮಾಡಬೇಕೆಂದು ಮತ್ತು ಎಲ್ಲರೂ ಬಾಳಬೇಕೆಂದು.


ಹೀಗಾಗಿ, ನಾಡಗೀತೆಗೆ `ಬೌದ್ಧರುದ್ಯಾನ’ ಪದದ ಸೇರ್ಪಡೆ ಆಗಲೇಬೇಕು. ಸರ್ಕಾರದ ತೀರ್ಮಾನವನ್ನು ನಾವು ಒಕ್ಕೊರಲಿನಿಂದ ಬೆಂಬಲಿಸುತ್ತೆವೆ, ಹೀಗೆ ಮಾಡಿದರೆ ಜ್ಞಾನಪೀಠ ಪುರಸ್ಕೃತ ಕುವೆಂಪು ಅವರಿಗೆ ಸಲ್ಲುವ ಗೌರವ ಎಂದು ಭಾವಿಸುತ್ತೇವೆ.

ಇಂತಿ
ರಂಗೋತ್ರಿ ಕುಮಾರ್, 
ಡಾ.ಎ.ಆರ್.ಗೋವಿಂದಸ್ವಾಮಿ
ಆರ್.ಜಿ.ಹಳ್ಳಿ ನಾಗರಾಜ್
ಡಾ.ಬಾಲಗುರುಮೂರ್ತಿ
ಪ್ರಿಯದರ್ಶಿನಿ
ವರಲಕ್ಷ್ಮಿ ಎನ್

Leave a Reply