ಕನ್ನಡ ಕಾವಲುಗಾರ ಕೃತಿ ಲೋಕರ್ಪಣೆ
ಬೆಂಗಳೂರು: ನಯನ ಸಭಾಂಗಣದಲ್ಲಿ ಕನ್ನಡದ ಕಾವಲುಗಾರ ಮ.ಚಂದ್ರಶೇಖರ್ ಅಭಿನಂದನಾ ಸಮಾರಂಭ ಮತ್ತು ಕನ್ನಡ ಕಾವಲುಗಾರ ಕೃತಿ ಲೋಕರ್ಪಣೆಯನ್ನು ಮ.ಚಂದ್ರಶೇಖರ್ ಸ್ನೇಹ ಬಳಗದ ವತಿಯಿಂದ ಆಯೋಜಿಸಲಾಗಿತ್ತು.
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
- ಸಂಗೀತ ಬಾರ್ & ರೆಸ್ಟೋರೆಂಟ್ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿ
- ಅನರ್ಹ ಕಂಪನಿಗೆ ಕಸದ ಟೆಂಡರ್: ಆರ್.ಅಶೋಕ
- ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
- ಶೂದ್ರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಅದಮ್ಯ ಚೇತನ ಸಂಸ್ಥಾಪಕರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್, ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ, ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡ, ಸಾಹಿತಿ ರಾ.ನಂ.ಚಂದ್ರಶೇಖರ್, ಡಾ.ಜಿ.ಬಿ.ಹರೀಶ್, ಕೇಂದ್ರೀಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ಶ್ರೇಯಸ್ ಕೆ.ಎಂ. ಮ.ಚಂದ್ರಶೇಖರ್, ಜಲಜಾಕ್ಷಿ ಚಂದ್ರಶೇಖರ್, ಡಾ.ಶೇಷಶಾಸ್ತ್ರಿ, ಆರ್.ಪ್ರಭುಶಂಕರ್, ಭಾಗವಹಿಸಿದ್ದರು. ಕನ್ನಡದ ಕಾವಲುಗಾರ ಮ.ಚಂದ್ರಶೇಖರ್ ದಂಪತಿಗೆ ಸನ್ಮಾನಿಸಲಾಯಿತು.
ಎಲ್.ಹನುಮಂತಯ್ಯ ಮಾತನಾಡಿ, ಕನ್ನಡದ ಕೆಲಸ ಮಾಡುವವರಿಗೆ ಪ್ರೋತ್ಸಾಹ ಕೊಡಬೇಕು. ಕನ್ನಡ ಪರ ಹೋರಾಟಗಾರರು ಬಹಳ ಕಷ್ಟದಲ್ಲಿ ಬದುಕುತ್ತಾರೆ. ಉದ್ಯೋಗ ಮಾಡಿಕೊಂಡು ಕನ್ನಡ ಸೇವೆ ಮಾಡುವವರು ಹಲವಾರು ಕನ್ನಡಿಗರು ಇದ್ದಾರೆ. ಬೆಂಗಳೂರು ನಗರದಲ್ಲಿ ಕನ್ನಡ ಮಾತನಾಡದೇ ಬದುಕಲು ಸಾಧ್ಯವಿಲ್ಲ ಎಂಬ ಅರಿವು ಬಂದಿದೆ. ಕನ್ನಡ ಭಾಷೆ ನಗರ ಪ್ರದೇಶದಲ್ಲಿ ಉಳಿಯಲು ಕನ್ನಡ ಹೋರಾಟಗಾರರು ಕಾರಣಕರ್ತರು ಎಂದರು.
ಸಾಹಿತಿಗಳಾದ ಚಿದಾನಂದಮೂರ್ತಿ, ಎಸ್.ಎಲ್.ಬೈರಪ್ಪ ಅವರ ಜೊತೆಯಲ್ಲಿ ನವದೆಹಲಿಗೆ ತೆರಳಿ ಕನ್ನಡದ ಕೆಲಸವಾಗಬೇಕು ಎಂದು ಮಾಜಿ ಸಚಿವರಾದ ಅನಂತ್ ಕುಮಾರ್ ರವರ ಬಳಿ ತೆರಳಿದಾಗ ಉತ್ತಮವಾಗಿ ಸ್ಪಂದನೆ ನೀಡಿ ಕೆಲಸ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕಾರ್ಮಿಕರು ನಾಯಕರಾಗಿ ಅನ್ಯ ಭಾಷಿಕರು ನೇಮಕರಾಗುತ್ತಿದ್ದರು. ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಕನ್ನಡದ ಕೆಲಸ ಮಾಡುವವರು ಮೇಲೆ ಸಂಕಷ್ಚಗಳನ್ನು ಎದುರಿಸಬೇಕಾಗಿತ್ತು ಎಂದರು.
ಮ.ಚಂದ್ರಶೇಖರ್ ಕನ್ನಡ ಭಾಷೆಯ ಮೌನ ಕ್ರಾಂತಿಕಾರಿ. ಕನ್ನಡದ ಕೆಲಸದಲ್ಲಿ ಮಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರು ಎಂದರು.
ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ಕನ್ನಡ ಮಾಧ್ಯಮ ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅನಂತ್ ಕುಮಾರ್ ರವರು ನನಗೆ ಮಾರ್ಗದರ್ಶನ ನೀಡಿದರು. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕನ್ನಡ ಶಾಲೆಗಳಿಗೆ ಮಧ್ಯಾಹ್ನ ಬಿಸಿಯೂಟ ವಿತರಣೆಯಿಂದ ಕನ್ನಡ ಶಾಲೆಗಳಲ್ಲಿ ಬಹಳ ಬದಲಾವಣೆಯಾಯಿತು ಎಂದರು.
ಕನ್ನಡ ಛಾಪು ಇರಬೇಕು ಎಂದು ಅನಂತ್ ಕುಮಾರ್ ತಿಳಿಸಿದ್ದರು. ಅದರಂತೆ ನಾನು ಕನ್ನಡದಲ್ಲಿ ಸಹಿ ಹಾಕುವುದಕ್ಕೆ ಪ್ರಾರಂಭಿಸಿದೆ. ವಿಶ್ವಸಂಸ್ಥೆಯಲ್ಲಿ ಭಾಷಣದ ಪ್ರತಿಯಲ್ಲಿ ಅನಂತ್ ಕುಮಾರ್ ಕನ್ನಡದಲ್ಲಿ ಸಹಿ ಹಾಕಿದ್ದರು. ಒಂದು ನಿಮಿಷ ಕನ್ನಡ ಎಂಬ ಕಾರ್ಯಕ್ರಮದ ಮೂಲಕ ಕನ್ನಡ ಭಾಷೆ ಉಳಿಸಿ, ಬೆಳಸುವ ಗಟ್ಟಿಯಾಗಿ ಉಳಿಸುವ ಕಾರ್ಯ ಮಾಡಲಾಯಿತು. ಇಸ್ರೇಲ್ ದೇಶದಲ್ಲಿ ಇಬ್ರೂ ಭಾಷೆ ಮೊದಲ ಆದ್ಯತೆ ನೀಡಿದ್ದಾರೆ. ರಾಷ್ಟ್ರೀಯ ಭಾಷೆ ಮಾಡಿದ್ದಾರೆ, ಅದರಂತೆ ನಾವು ಅದ್ಬುತ ಕನ್ನಡ ಭಾಷೆ ಬಳಸಿ, ಉಳಿಸಬೇಕು ಎಂದರು.
ಕೆ.ಎಂ.ಶ್ರೇಯಸ್ ಮಾತನಾಡಿ, ಮ.ಚಂದ್ರಶೇಖರ್ ಅವರು ಕನ್ನಡ ಕೆಲಸದ ಜೊತೆಯಲ್ಲಿ ಬೇರೆಯವರು ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. 40 ವರ್ಷದಿಂದ ಕನ್ನಡದ ಕೆಲಸದ ಜೊತೆಯಲ್ಲಿ ಕೇಂದ್ರೀಯ ತೆರಿಗೆ ಇಲಾಖೆಗೆ ಸೇವೆ ಸಲ್ಲಿಸಿದ್ದಾರೆ ಎಂದರು.
ವ.ಚ.ಚನ್ನೇಗೌಡ ಮಾತನಾಡಿ, ಮ.ಚಂದ್ರಶೇಖರ್ ಅವರು 38 ವರ್ಷಗಳಿಂದ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಉದ್ಯೋಗದ ಜೊತೆಯಲ್ಲಿ ಕನ್ನಡ ಪರ ಹೋರಾಟದಲ್ಲಿ ಮ.ಚಂದ್ರಶೇಖರ್ ಮಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಉದ್ಯೋಗಿ ಆಗಿದ್ದರು ಯಾವುದೇ ಭಯವಿಲ್ಲದೇ, ಧೈರ್ಯದಿಂದ ಕನ್ನಡ ತಾಯಿಯ ಸೇವೆ ಮಾಡಿದರು ಎಂದರು.




