ಮೊದಲಿಗೇ ಇದನ್ನು ಸ್ಪಷ್ಟಪಡಿಸಿಬಿಡುತ್ತೇನೆ- ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಆಕೃತಿ ಪುಸ್ತಕ ಮಳಿಗೆಯಲ್ಲಿ ನಿರೀಕ್ಷೆಗೂ ಮೀರಿದ ವ್ಯವಹಾರ ಆಗಿ ತೃಪ್ತಿಯ ಭಾವನೆ ಇದೆ. ಆದರೂ ಕೂಡ ಪುಸ್ತಕ ವ್ಯಾಪಾರಿಗಳಿಗೆ ಮಳಿಗೆ ಹಂಚುವುದನ್ನು ರ್ಯಾಂಡಮ್ ಆಗಿ ಅಂದರೆ ಲಾಟರಿ ಎತ್ತುವ ಮೂಲಕ ಮಾಡುವುದೇ ಉತ್ತಮ ವ್ಯವಸ್ಥೆ!
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ನಾನು 2010ರ ಗದಗ ಸಾಹಿತ್ಯ ಸಮ್ಮೇಳನದಿಂದ ಪುಸ್ತಕ ಮಳಿಗೆ ಹಾಕುತ್ತಾ ಬಂದಿದ್ದೇನೆ. ಅಲ್ಲಿಂದ ಕೊಪ್ಪಳ ಸಾಹಿತ್ಯ ಸಮ್ಮೇಳನದವರೆಗೆ ನನಗೆ ತಿಳಿದಂತೆ, ಸಮ್ಮೇಳನ ಆರಂಭವಾಗುವ ಹಿಂದಿನ ದಿನ ಲಾಟರಿ ಎತ್ತುವ ಮೂಲಕ ಮಳಿಗೆಗಳನ್ನು ಅಲೊಕೇಟ್ ಮಾಡಲಾಗುತ್ತಿತ್ತು. ಹಾಗೆ ಮಾಡಿದಾಗ, ಭಾಗವಹಿಸಿದ ಎಲ್ಲಾ ಮಳಿಗೆಗಳಿಗೂ ಅತ್ಯುತ್ತಮವಾಗಿ ವ್ಯಾಪಾರ ಆಗುತ್ತದೆ ಎಂದೇನಲ್ಲ. ಆದರೆ ಯಾರದ್ದೋ ಕೈವಾಡ, ಪ್ರಭಾವ ಅಥವಾ ಮತ್ಯಾವುದೋ ಎಕ್ಸ್ಟ್ರಾ ಸ್ಕಿಲ್ ಉಳಿದವರಿಗೆ ಅನ್ಯಾಯ ಆಗುವಂತೆ ಮಾಡುತ್ತಿರಲಿಲ್ಲ. ಲಕ್ ಸರಿ ಇಲ್ಲ ಅಂತ ಬೈದುಕೊಂಡು ಬರುತ್ತಿದ್ದೆವು. ಗಂಗಾವತಿಯಲ್ಲಿ ನಾನು ಹಾಗೆಯೇ ಬೈದುಕೊಂಡು ಬಂದಿದ್ದೆ.
ಆದರೆ ಆಮೇಲೆ ಶುರು ಆಯಿತು. ನೀವು ಸಾಹಿತ್ಯ ಪರಿಷತ್ ಗೆ ಹೋಗಿ ಹಣ ಕೊಟ್ಟು ರಿಜಿಸ್ಟರ್ ಮಾಡಿದ ಆಧಾರದ ಮೇಲೆ first come first serve ಆಧಾರದಲ್ಲಿ ಮಳಿಗೆಗಳನ್ನು ಹಂಚುತ್ತೇವೆ ಎನ್ನುವ ನಾಟಕ. ಆಮೇಲೆಲ್ಲಾ ಇಬ್ಬರು ಪ್ರಕಾಶಕರಿಗೆ ಕಡ್ಡಾಯವಾಗಿ ಮೊದಲ ಸಾಲಿನಲ್ಲಿಯೇ ಮಳಿಗೆ ಬೀಳುವಂತೆ ನೋಡಿಕೊಳ್ಳಲಾಗುತ್ತಿತ್ತು! ಆ ಇಬ್ಬರಲ್ಲಿ ಒಬ್ಬ ನಟೋರಿಯಸ್ ಫೆಲೋ. ಈ ಪವಾಡವನ್ನು ನಂಬಲು ಉಳಿದ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ಸಿದ್ಧರಿಲ್ಲದೆ ಇದ್ದರೂ ಉಗುಳು ನುಂಗಿ ಅನ್ಯಾಯವನ್ನು ಪ್ರಶ್ನಿಸದೆ ಸುಮ್ಮನೆ ಇರುತ್ತಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಅನ್ಯಾಯ ಕಣ್ಣಿಗೆ ರಾಚುವಂತೆ ಇತ್ತು.

ಕಳೆದ ಬಾರಿಯ ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿಜಿಟಲ್ ಆಪ್ ನಲ್ಲಿ ಮಳಿಗೆ ಬುಕ್ ಮಾಡುವ ಪರಿಪಾಠ ಆರಂಭವಾಯಿತು. ಅದರಲ್ಲಿಯೂ first come first serve ಆಧಾರದಲ್ಲಿ ಮಳಿಗೆ ಹಂಚಿದ್ದೇವೆ ಎಂದು ಹೇಳಿಕೊಳ್ಳಲಾಯಿತು. ಆದರೆ ಅದು foolproof ಆಗಿ ಏನು ಇರಲಿಲ್ಲ. ಆದರೆ ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮಳಿಗೆಗಳ ನಕಾಶೆಯನ್ನೇ ಪುಸ್ತಕ ಮಾರಾಟಗಾರ ಮುಂದೆ ಕನ್ನಡ ಸಾಹಿತ್ಯ ಪರಿಷತ್ ವೆಬ್ ಸೈಟ್ ನಲ್ಲಿಟ್ಟು, ಮಲ್ಟಿಪ್ಲೆಕ್ಸ್ ಗಳಲ್ಲಿ ಬೇಕಾದ ಸೀಟುಗಳನ್ನು ಸೆಲೆಕ್ಟ್ ಮಾಡುವಂತೆ ಮಳಿಗೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.

ಇದು ಮಳಿಗೆ ಹಂಚಿಕೆಯನ್ನು ಡೆಮಾಕ್ರಟೈಸ್ ಮಾಡಿದೆ ಎಂದೆನಿಸಿದರು ವಾಸ್ತವ ಹಾಗಿಲ್ಲ; ಡಿಜಿಟಲ್ ಶಿಕ್ಷಣ ಇರುವ ನನ್ನಂಥವರಿಗೆ ಇದು ಜಾಕ್ ಪಾಟ್ ನಂತಾಗಿ ಅತಿ ಬೇಗ ಬೇಕಾದ ಕಡೆಗೆ, ಎಲ್ಲಿ ಜನ ಹೆಚ್ಚು ಬರಬಹುದು ಎಂಬ ಒಂದು ಸಣ್ಣ ಊಹೆಯೊಂದಿಗೆ ಮಳಿಗೆ ಬುಕ್ ಮಾಡಿಕೊಳ್ಳಲು ಸಾಧ್ಯವಾಯಿತು. ಡಿಜಿಟಲ್ ಶಿಕ್ಷಣ ಇಲ್ಲದೆ ಇರುವವರು ಅಥವಾ ಅದರ ಬಗ್ಗೆ ಚೂರು ರಿಲಕ್ಟೆಂಟ್ ಆಗಿರುವವರು ಮತ್ತು ಮಳಿಗೆ ಬುಕ್ ಮಾಡುವ ಮಾಹಿತಿಯನ್ನು ಸರಿಯಾದ ಸಮಯಕ್ಕೆ ತಿಳಿಯದವರು ಹಿಂದೆ ಬಿದ್ದರು.. ಬಿ ಬ್ಲಾಕ್ ನಲ್ಲಿ ಕೊನೆಯ ಸಾಲುಗಳಲ್ಲಿ ಬುಕ್ ಮಾಡಿದವರು ಮತ್ತು ಸಿ ಬ್ಲಾಕ್ ನಲ್ಲಿ ಬುಕ್ ಮಾಡಿದವರು ವ್ಯಾಪಾರದಲ್ಲಿ ಕೂಡ ಹಿಂದೆ ಬಿದ್ದರು. ನಮ್ಮ ಆಯ್ಕೆಗೆ ಬಿಟ್ಟಿದ್ದರೂ ಕೂಡ ಈ ವ್ಯವಸ್ಥೆ ಎಲ್ಲರಿಗೂ ಈಕ್ವಲೈಸಿಂಗ್ ಫ್ಯಾಕ್ಟರ್ ಆಗಿರಲಿಲ್ಲ ಅನ್ನುವುದು ವಾಸ್ತವ.
ಆದುದರಿಂದ ಒಂದೆರಡು ಸರಳ ಸೂತ್ರಗಳನ್ನು ಅನುಸರಿಸಿದರೆ ಎಲ್ಲ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರಿಗೆ ತೃಪ್ತಿದಾಯಕ ಮಾರಾಟದ ಅನುಭವ ನೀಡುವಂತೆ ನೋಡಿಕೊಳ್ಳಬಹದು.
೧. ಜನ ಎಲ್ಲಾ ಕಡೆಗೂ ಸ್ಪ್ರೆಡ್ ಆಗುವಂತೆ ಮುಂದಾಲೋಚಿಸಿ ಮಳಿಗೆಗಳನ್ನು ನಿರ್ಮಿಸುವುದು. ಒಳ ಹೋಗುವ ಮತ್ತು ಹೊರ ಬರುವ ಮಾರ್ಗಗಳನ್ನು ದಿನದ ಅರ್ಧ ಭಾಗ ಒಂದು ಕಡೆ ನೀಡಿ ಮತ್ತೊಂದು ಅರ್ಥ ಭಾಗ ಅದನ್ನು ಬದಲಿಸುವುದು. ಈ ರೀತಿ ಮಾಡುವುದರಿಂದ ಜನ ಎಲ್ಲಾ ಮಳಿಗೆಗಳಿಗೂ ಹೆಚ್ಚು ಕಮ್ಮಿ ಸಮನಾಗಿ ಚದುರುವಂತೆ ಮಾಡುವುದು ಸಾಧ್ಯ.
೨. ಲಾಟರಿ ಮೂಲಕ ಮಳಿಗೆ ಹಂಚುವುದೇ ಇವತ್ತಿಗೂ ಒಳ್ಳೆಯ ವ್ಯವಸ್ಥೆ. ಇದು ಯಾರಿಗೂ ಯಾವುದೋ ಕಾರಣಕ್ಕೆ ಅಪ್ಪರ್ ಹ್ಯಾಂಡ್ ನೀಡುವುದಿಲ್ಲ. ಆದರೆ ಸಮ್ಮೇಳನ ಪ್ರಾರಂಭ ಆಗುವ ಹಿಂದಿನ ದಿನ ಬೆಳಗ್ಗೆಯೇ ಇದನ್ನು ಮಾಡಬೇಕು. ಇದರಿಂದ ಎಲ್ಲರಿಗೂ ಮಳಿಗೆ ಸಂಖ್ಯೆ ಸಿಕ್ಕಿ ಜೋಡಿಸಿಕೊಳ್ಳಲು ಅನುಕೂಲ ಆಗುತ್ತದೆ.
೩. ಪ್ರತಿಷ್ಠಿತ ಎಂದು ಹೇಳಿಕೊಳ್ಳುವವರಿಗೆ ಯಾವುದೇ ಕಾರಣಕ್ಕೂ ಆದ್ಯತೆ ನೀಡುವುದನ್ನು ಇನ್ನೆಂದಿಗೂ ಮಾಡಲೇಬಾರದು.
– ಗುರು, ಆಕೃತಿ ಪುಸ್ತಕ




