ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ರವರ ಸ್ಮರಣಾರ್ಥವಾಗಿ “ಎಸ್.ಪಿ.ಬಿ ಸ್ವರಾಂಜಲಿ” ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಸಂಗೀತ ಕ್ಷೇತ್ರವನ್ನು ಅನಂತಕಾಲದವರೆಗೆ ಅಲಂಕರಿಸಿರುವ ಗಾಯಕರಾದ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಬಹುಭಾಷಾ ಗಾಯನದ ಮೂಲಕ ಗೌರವವನ್ನು ಸಲ್ಲಿಸಲು “ಸ್ವರಾಸ್ ಹಮ್ಮಿಂಗ್ ಹಾರ್ಟ್ಸ್” ಸಂಗೀತ ಬಳಗವು ಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಇದು ಈ ಸಂಗೀತ ಬಳಗದ ಪ್ರಪ್ರಥಮ ಕಾರ್ಯಕ್ರಮವಾಗಿದೆ. ಗೀತಪ್ರಿಯ ಎಂಬ ಸಂಗೀತಾರಾಧಕಿಯು ತನ್ನಂತೆಯೇ ಗೀತ ಗಾಯನದಲ್ಲಿ ಆಸಕ್ತಿ ಹೊಂದಿರುವ ಸಂಗೀತ ಪ್ರೇಮಿಗಳನ್ನು ಒಟ್ಟುಗೂಡಿಸಿ ಈ ಬಳಗವನ್ನು ಕಟ್ಟುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶ್ರೀ ಗುರುಪ್ರಸಾದ್, ಶ್ರೀ ಅಮಿತ್ ನಾಯಕ್ ಮತ್ತು ಶ್ರೀ ನಾಗೇಶ್. ಹೆಚ್.ರಾವ್ ಈ ಮೂವರು ಬಳಗವನ್ನು ಕಟ್ಟುವುದರಲ್ಲಿ ಗೀತ ಪ್ರಿಯರವರಿಗೆ ಜೊತೆ ನೀಡಿದವರು. ಶ್ರೀ ಶ್ರೀನಿವಾಸ್, ಶ್ರೀ ರಾಕೇಶ್ ಆರಾಧ್ಯ, ಶ್ರೀಮತಿ ಸುರಭಿ ನಾಡಿಗ್, ಶ್ರೀಮತಿ ರಶ್ಮಿ ಹಾಗೂ ಕುಮಾರಿ ಚಿನ್ಮಯಿ ಇವರೆಲ್ಲರೂ “ಸ್ವರಾಸ್ ಹಮ್ಮಿಂಗ್ ಹಾರ್ಟ್ಸ್” ನ ಗಾಯನ ಸದಸ್ಯರಾಗಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ಮಹೇಶ್ ಹಾಗೂ ಶ್ರೀ ಗುರುಪ್ರಸಾದ್ ರವರು ಆಗಮಿಸಿದ್ದರು. ಕಾರ್ಯಕ್ರಮದ ನಡುವೆ ಅತಿಥಿಗಳಿಗೆ ಹೂ ಗುಚ್ಛವನ್ನು ನೀಡಿ ಗೌರವಿಸಲಾಯಿತು.
ಎಸ್.ಪಿ.ಬಿ ಸ್ವರಾಂಜಲಿ ಕಾರ್ಯಕ್ರಮವು ನಿಶ್ಚಯಿಸಿದಂತೆ 5:00 ಗಂಟೆಗೆ ಪ್ರಾರಂಭವಾಯಿತು. ಮೊದಲಿಗೆ ಗಾನ ಚಕ್ರವರ್ತಿಯಾದ ಎಸ್.ಪಿ ಬಾಲಸುಬ್ರಮಣ್ಯಂ ರವರ ಸಂಕ್ಷಿಪ್ತವಾದ ಪರಿಚಯವನ್ನು ರಾಕೇಶ್ ಆರಾಧ್ಯರವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕೂಡ ಅವರೇ ನಿರ್ವಹಿಸಿದರು. ಗಾಯನ ಕಾರ್ಯಕ್ರಮ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಸಭಾಂಗಣವು ಪ್ರೇಕ್ಷಕರಿಂದ ತುಂಬಿತ್ತು. ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಎಸ್. ಪಿ ಬಾಲಸುಬ್ರಹ್ಮಣ್ಯಂ ರವರು ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಹಾಡಿರುವ ಚಲನಚಿತ್ರ ಗೀತೆಗಳನ್ನು ಗಾಯಕ ಗಾಯಕಿಯರು ಪ್ರಸ್ತುತಪಡಿಸಿದರು. ಅಂದಿನ ಕಾರ್ಯಕ್ರಮದಲ್ಲಿ ಒಟ್ಟು 24 ಸುಮಧುರ ಗೀತೆಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡುತ್ತಾ ಗಾಯಕ ಗಾಯಕಿಯರು ಪ್ರೇಕ್ಷಕರನ್ನು ರಂಜಿಸಿದರು.
ಪ್ರತಿಯೊಂದು ಹಾಡನ್ನು ಆಲಿಸಿದಾಗಲೂ ಪ್ರೇಕ್ಷಕರು ಸಂತೋಷದಿಂದ ಕರತಾಡನದ ಮೂಲಕ ಪ್ರೋತ್ಸಾಹವನ್ನು ನೀಡಿ ಹಾಡುಗಾರರನ್ನು ಹುರಿದುಂಬಿಸುತ್ತಿದ್ದರು. ನಿಶಬ್ದವಾಗಿ ಗಾಯನವನ್ನು ಎಲ್ಲರೂ ಆಲಿಸುತ್ತಿದ್ದುದು ವಿಶೇಷ. ಸಭಾಂಗಣದಲ್ಲಿ ಗಾಯನದ ಗುಂಜನವು ಮಾತ್ರ ಮೊಳಗುತ್ತಿತ್ತು. ಹಿರಿಯರು ಕಿರಿಯರು ಎಲ್ಲರೂ ಸ್ವರಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಎಸ್.ಪಿ ಬಾಲಸುಬ್ರಹ್ಮಣ್ಯಂ ರವರ ಸುಮಧುರ ಗೀತೆಗಳು ಸಭಾಂಗಣದಲ್ಲಿ ನೆರೆದಿದ್ದವರೆಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿತು.
“ಸ್ವರಾಸ್ ಹಮ್ಮಿಂಗ್ ಹಾರ್ಟ್ಸ್” ಬಳಗದ ಸದಸ್ಯರು ತಮ್ಮ ಮೊದಲ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಳಗದ ಸದಸ್ಯರ ಒಗ್ಗಟ್ಟು ಹಾಗೂ ಸಹಯೋಗ ಇತರರಿಗೂ ಮಾದರಿಯಾಗಿದೆ. ಒಂದು ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಆರಾಧ್ಯ ಗಾನ ಚಕ್ರವರ್ತಿಗೆ ಗೌರವ ಪೂರ್ವಕವಾಗಿ ಶ್ರದ್ಧೆಯಿಂದ ಸ್ವರಾಂಜಲಿಯನ್ನು ಅರ್ಪಿಸಿದ್ದಾರೆ.
– ರುಕ್ಮಿಣಿ ಎಸ್ ನಾಯರ್, ಬೆಂಗಳೂರು



