ಕನ್ನಡವೇ ಜಾತಿ ಎಂದು ಬದುಕುತ್ತಿರುವ ಪಾಲನೇತ್ರ

6 months ago

ಕನ್ನಡಪರ ಚಿಂತಕ, ಹೋರಾಟಗಾರ ಪಾಲನೇತ್ರರವರಿಗೆ ಅಭಿನಂದನಾ ಸಮಾರಂಭ

ಕನ್ನಡ ಜಂಗಮ ಪುಸ್ತಕ ಲೋಕರ್ಪಣೆ, ಕನ್ನಡ ಪರ ಹೋರಾಟಗಾರರಿಗೆ ಗೌರವ ಸಮರ್ಪಣೆ

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡಪರ ಚಿಂತಕ, ಹೋರಾಟಗಾರ ಸಾಮಾಜಿಕ, ಸಾಂಸ್ಕೃತಿಕ ಸಂಘಟಕ ಪಾಲನೇತ್ರ ಅವರಿಗೆ ಅಭಿನಂದನೆ ಮತ್ತು ಕನ್ನಡ ಜಂಗಮ ಗ್ರಂಥ ಲೋಕಾರ್ಪಣಾ ಸಮಾರಂಭ ನಡೆಯಿತು.

ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾಸ್ವಾಮಿಗಳು, ದೇಗುಲಮಠದ ಡಾ.ಚನ್ನಬಸವ ಸ್ವಾಮೀಜಿಗಳು, ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮತ್ತು  ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಕನ್ನಡ ಪರ ಹೋರಾಟಗಾರ ಡಾ.ಬೈರಮಂಗಲ ರಾಮೇಗೌಡ, ಕನ್ನಡಪರ ಚಿಂತಕ, ಹೋರಾಟಗಾರ ಪಾಲನೇತ್ರ, ಗುರುನಾಥ ಹೊಳ್ಳ, ಅಭಿನಂದನಾ ಸಮಿತಿ ಅಧ್ಯಕ್ಷ ಶಿವರಾಮೇಗೌಡ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾ ಸ್ವಾಮಿಗಳು ಮಾತನಾಡಿ ಕನ್ನಡದ ಅಭಿಮಾನಿಗಳು ಗಟ್ಟಿಯಾಗಿ ನಿಲ್ಲುತ್ತಾರೆ. ಕುಗ್ರಾಮದಲ್ಲಿ ಹುಟ್ಚಿದ ಪಾಲನೇತ್ರರವರು ಬೆಂಗಳೂರಿಗೆ ಬಂದು ಕನ್ನಡ ಚಳುವಳಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಕುಮಾರವ್ಯಾಸ ಹೇಳುತ್ತಾರೆ ಮದುವೆ ಎಂಬುದು ಮುಖ್ಯವಲ್ಲ ಬಂಧು, ಬಳಗದವರು ಸೇರುತ್ತಾರೆ ಅದು ಮುಖ್ಯ. ನೀರು ಎಲ್ಲಿ ಹಾಕಿದರು ಒಂದೇ ಆಕಾರ ಅದರಂತೆ ಪಾಲನೇತ್ರರವರು. ಜಾತಿ ಮತ್ತು ರಾಜಕಾರಣದಿಂದ ದೂರವಿರುವ ಪಾಲನೇತ್ರ, ಕನ್ನಡವೇ ಜಾತಿ ಎಂದು ಬದುಕುತ್ತಿದ್ದಾರೆ. ಪಾಲನೇತ್ರ ಸಂಪತ್ತು ಗಳಿಸಲಿಲ್ಲ, ಬರಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಭಿಮಾನ ಎಂದು ಅಳಿಸಿಹೋಗವುದಿಲ್ಲ, ಮಾಸಿಹೋಗುವುದಿಲ್ಲ ನಿಮ್ಮ ಅಭಿಮಾನ ಪಾಲನೇತ್ರನ ಮೇಲಿದೆ ಎಂದರು.

ವಿ.ಸೋಮಣ್ಣ ಮಾತನಾಡಿ, ನಡವಳಿಕೆ, ದೂರದೃಷ್ಟಿ ಚಿಂತನೆ ಇದ್ದಾಗ, ಜಾತಿ, ಧರ್ಮ ಬರುವುದಿಲ್ಲ. ಪಾಲನೇತ್ರ ಕನ್ನಡ ಪರ ಹೋರಾಟಗಾರ. ಪಾಲನೇತ್ರ ಸ್ವಾಭಿಮಾನಿ, ಕೃತಜ್ಞತೆ ಇರುವ ವ್ಯಕ್ತಿತ್ವ, ಕನ್ನಡ ಪರ ಹೋರಾಟದಲ್ಲಿ ಪಾಲನೇತ್ರನಿಗೆ ಪಾಲನೇತ್ರನೆ ಸಾಟಿ ಎಂದರು.

ಗುರಿಯಿಟ್ಟು ಕೆಲಸ ಮಾಡಬೇಕು. ಆಗ ಸಾಧನೆ ಮಾಡಲು ಸಾಧ್ಯ. ನಾಡು, ನುಡಿಯ ಅವಿರತ ಸೇವೆಯಿಂದ ಪಾಲನೇತ್ರರವರು ಕನ್ನಡದ ಕಟ್ಟಾಳುವಾಗಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಪಾಲನೇತ್ರರವರು ಕನ್ನಡಿಗನಾಗಿ, ತಾಯಿ ಭುವನೇಶ್ವರಿ ಆಶೀರ್ವಾದದಿಂದ ಕನ್ನಡ ಪರ ಕೆಲಸಗಳನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆದಿದ್ದಾರೆ ಎಂದರು.

ರೈಲ್ವೆ ಇಲಾಖೆಯಲ್ಲಿ 12 ಲಕ್ಷ ಉದ್ಯೋಗಿಗಳು ಇದ್ದಾರೆ. ಕನ್ನಡಿಗರ ಸಂಖ್ಯೆ ಬಹಳ ವಿರಳ. ನಾನು ಪಾಲನೇತ್ರರವರ ಜೊತೆಯಲ್ಲಿ ಚರ್ಚೆ ಮಾಡಿ ಪ್ರಧಾನಿ ನರೇಂದ್ರಮೋದಿರವರ ಜೊತೆಯಲ್ಲಿ ಚರ್ಚೆ ಮಾಡಿ ದೇಶದ 10 ರಾಜ್ಯಗಳಲ್ಲಿ ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಇದ್ದರಿಂದ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಬರೆದು ನೇಮಕಾತಿ ಆಗುವಂತೆ ಆಯಿತು ಎಂದರು.

ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕೆಲಸ ಶಾಶ್ವತ. ದೇಶಕ್ಕೆ  ಉತ್ತಮ ಭವಿಷ್ಯವಿದೆ. ಪಾಲನೇತ್ರರವರ ಮನವಿ ಮೇರೆಗೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಬಸವ ಜಯಂತಿ ಅಚರಣೆಯನ್ನು ನವದೆಹಲಿಯಲ್ಲಿ ಅಚರಿಸಲಾಯಿತು ಎಂದರು.

ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡುವುದಕ್ಕೆ ಅವಕಾಶ ನೀಡಲಾಗಿದೆ ಹಾಗೂ ದೇಶದ ಎಲ್ಲ ಭಾಷೆಯಲ್ಲಿ ಮಾತನಾಡುವ ಉತ್ತರ ಕೊಡುವ ಅವಕಾಶ ನೀಡಲಾಗಿದೆ. ನಾನು ಇದರ ಬಗ್ಗೆ ಪತ್ರ ಬರೆಯಲು ಪಾಲನೇತ್ರರವರ ಸಲಹೆ ಕಾರಣ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಾಲನೇತ್ರ, 4 ದಶಕಗಳ ಕಾಲ ಕನ್ನಡ ಪರ ಹೋರಾಟದಲ್ಲಿ ನನಗೆ ಸಹಕಾರ ನೀಡಿದ, ಬೆಂಬಲಿಸಿದ ಎಲ್ಲ ಕನ್ನಡ ಹೋರಾಟಗಾರರಿಗೆ ಋಣಿಯಾಗಿದ್ದೇನೆ ಎಂದರು.

ಕನ್ನಡ ಪರ ಹೋರಾಟಗಾರರು ನನ್ನ ಸಂಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡಿಗರು ಎಲ್ಲರು ಒಟ್ಟಾಗಿ ಸಂಘಟಿತರಾಗಿ ಉಳಿಯೋಣ ಎಂದರು.

ಕನ್ನಡ ಪರ ಸಾಧಕರಾದ ಮಾಜಿ ಮೇಯರ್ ಜೆ.ಹುಚ್ಚಪ್ಪ, ಎ.ಅಮೃತ್ ರಾಜ್, ಡಾ.ತಲಕಾಡು ಚಿಕ್ಕರಂಗೇಗೌಡ, ಕೆ.ಮಂಜನಾಥದೇವ, ವ.ಚ.ಚನ್ನೇಗೌಡ, ನಾ.ಶ್ರೀಧರ್, ಗೋ.ಮೂರ್ತಿ ಯಾದವ್,  ಜಿ.ಗುರುಪ್ರಸಾದ್, ಬಿ.ಆರ್.ಶಿವಕುಮಾರ್, ಎಂ ಜಿ.ವಿಜಯಲಕ್ಷ್ಮಿ ಅವರಿಗೆ ಗೌರವಿಸಿ, ಸನ್ಮಾನಿಸಲಾಯಿತು.

Leave a Reply