ಪ್ರತಿಷ್ಠೆ ಮಾಡಬಾರದು
ಎಲ್ಲವೂ ನನ್ನ ಅಣತಿಯಂತೆಯೇ ನಡೆಯಬೇಕೆಂದು ಬಯಸುವುದೇ ಸಹಜವಲ್ಲ, ನಮ್ಮ ಮಾತಿನಂತೆ ಯಾವುದು ನಡೆಯದಿದ್ದಾಗ ನೆಮ್ಮದಿಯ ಕಳೆದುಕೊಳ್ಳುವುದಂತೂ ತಪ್ಪುವುದಿಲ್ಲ, ಬದಲಿಗೆ ಹೊಂದಿಕೊಂಡು ಬದುಕುವುದು ನೆಮ್ಮದಿಯ ಮಾರ್ಗ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಎಲ್ಲರಂತೆ ಶ್ರೀಮಂತರಾಗಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಸಾಧನೆಯ ಹಾದಿ ಸರಿ ಇಲ್ಲದಿದ್ದರೆ ಸೋಲು ಅನಿವಾರ್ಯವಾಗುತ್ತದೆ, ಬದಲಿಗೆ ಇರುವುದರಲ್ಲಿ ಸಮಾಧಾನದಿಂದ ಬದುಕು ಸಾಗಿಸುವುದು ಸರಿಯಾದ ಮಾರ್ಗ.
ಎಲ್ಲ ಕಾಲದಲ್ಲೂ ಅಧಿಕಾರದಲ್ಲಿ ಇರಬೇಕು, ನಾಯಕತ್ವವು ನಮ್ಮಲ್ಲೇ ಇರಬೇಕೆಂದು ಬಯಸುವುದು ಸಹಜ ಬಯಕೆಯಲ್ಲ, ಅಧಿಕಾರ, ನಾಯಕತ್ವ, ಅವಕಾಶ ಬಂದಾಗ ಇವುಗಳ ತಲೆಗೆ ಅಂಟಿಸಿಕೊಳ್ಳದೆ ಬದುಕಿದರೆ ನೆಮ್ಮದಿಗೆ ಎಂದೂ ಭಂಗವಾಗುವುದಿಲ್ಲ.
ಎಲ್ಲ ಕಾಲದಲ್ಲೂ ಬಂಧುಗಳು ಸ್ನೇಹಿತರು ಜೊತೆಗೆ ಇರುತ್ತಾರೆಂದು ನಂಬಿಕೆಯಿಂದ ಇರಬಹುದು, ಆದರೆ ಎಲ್ಲಾ ಕಾಲದಲ್ಲೂ ಇವರು ನಮ್ಮೊಂದಿಗೆ ಇರುವುದಿಲ್ಲ ಎಂಬ ಕಟು ಸತ್ಯದ ಅರಿವು ಇರಬೇಕು.
ತಾನು ಎಲ್ಲರಿಗೂ ಉಪಕಾರವನ್ನು ಮಾಡಿದ್ದೇನೆ ನೆರವನ್ನ ನೀಡಿದ್ದೇನೆ, ಸಂಕಷ್ಟದಲ್ಲಿ ಜೊತೆಯಾಗಿದ್ದೇನೆಂದು ಅವರೆಲ್ಲರಿಂದ ಪ್ರತಿಫಲವನ್ನ ಬಯಸಲೇಬಾರದು, ನಾವು ಮಾಡಿದ ಸೇವೆ, ಉಪಕಾರ, ನೆರವು ಎಲ್ಲವೂ ನಮ್ಮ ಅರಿವಿಗೆ ಬಾರದಂತೆ ನಾವು ಮಾಡಿರಬಹುದಾದ ಪಾಪಗಳ ಪರಿಹಾರದ ಮಾರ್ಗಗಳಿಂದ ಭಾವಿಸಿ ಬದುಕಬೇಕು.
ಅದು ಸಿಗಲಿಲ್ಲ, ಇದು ಸಿಗಲಿಲ್ಲ, ಅದು ಆಗಾಗಲಿಲ್ಲ, ಇದು ಆಗಲಿಲ್ಲ, ಎಂದು ಸದಾ ಅಸಹನೆಯಿಂದ ಬದುಕುವುದಕ್ಕಿಂತ, ಸಿಕ್ಕಿದಷ್ಟೇ ಯೋಗವೆಂದು ತೃಪ್ತಿಯಿಂದ ಬದುಕಿದರೆ ಹೃದಯ ಹಗುರವಾಗಿರುತ್ತದೆ
– ಕೆ ಎಸ್ ನಾಗರಾಜ್, ಬೆಂಗಳೂರು




