ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ವತಿಯಿಂದ ಪುಸ್ತಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಸದರಿ ಪ್ರಶಸ್ತಿಗೆ ಬಂಜಾರ ಸಮುದಾಯದ ಲೇಖಕರು ಸ್ವತಃ ತಾವೇ ಬರೆದಿರುವ ವಿವಿಧ ಪ್ರಕಾರದಲ್ಲಿ ವರ್ಷದಲ್ಲಿ ಕನಿಷ್ಠ 03 ಶೀರ್ಷಿಕೆಗಳಾದರೂ ಪ್ರಕಟವಾಗಿದ್ದಲ್ಲಿ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಈ ಕೃತಿಗಳು 2022-23 (ಪ್ರಸಕ್ತ ಸಾಲಿಗೆ ಮಾತ್ರ ಸೀಮಿತವಾಗಿದೆ) ಹಿಂದೆ ಮುದ್ರಣಗೊಂಡ ಕೃತಿಗಳು ಹಾಗೂ 2023-24ರ ಸಾಲಿನಲ್ಲಿ ಪ್ರಕಟವಾಗಿರಬೇಕು.
ಬಂಜಾರ ಸಮುದಾಯದ ಸಂಸ್ಕೃತಿ, ಭಾಷೆ, ಸಾಹಿತ್ಯ, ಕಲೆಗಳು, ಕಲಾವಿದರು, ಸಾಂಸ್ಕೃತಿಕ ವೀರರು /ನಾಯಕರು ಹಾಗೂ ಸಾಧಕರು, ಈ ವಿಷಯಗಳಿಗೆ ಪೂರಕವಾಗಿರಬೇಕು ಮತ್ತು ಬಂಜಾರ ಸಮುದಾಯದ ಲೇಖಕರು ಸ್ವತಃ ತಾವೇ ಬರೆದಿರುವ ಸೃಜನಶೀಲ, ಜನಪರ ಬರಹಗಳಾದ ಕಥಾ ಸಂಕಲನ, ಕಾದಂಬರಿ, ಕವನ ಸಂಕಲನ, ಜೀವನ ಚರಿತ್ರೆ ಹಾಗೂ ಪ್ರಬಂಧ ಸಂಕಲನ ಕುರಿತ ಪುಸ್ತಕಗಳನ್ನೂ ಸಹ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ.
ಆಸಕ್ತರು ತಾವು ಪ್ರಕಟಿಸಿದ ಕೃತಿಯ 03 ಪ್ರತಿಗಳೊಂದಿಗೆ ಸ್ವ ವಿವರಗಳನ್ನು ಒಳಗೊಂಡ ಅರ್ಜಿಯನ್ನು ದಿನಾಂಕ: 30.11.2024ರ ಒಳಗಾಗಿ ಕಚೇರಿ ವೇಳೆಯಲ್ಲಿ ಅಕಾಡೆಮಿಗೆ ಖುದ್ದಾಗಿ ಸಲ್ಲಿಸಲು ಅಥವಾ ಅಂಚೆ, ಕೋರಿಯರ್ ಮೂಲಕ ಕಳುಹಿಸಿಕೊಡಲು ಕೋರಿದೆ.
ವಿಳಾಸ, ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡ ಭವನ , 1 ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002
ಹೆಚ್ಚಿನ ಮಾಹಿತಿಗಾಗಿ : 080-29917745



