ನಾನು ಕಂಡ ಕನಸ್ಸು ನನಸ್ಸು ಮಾಡಿದ ರೂಪ ಶಶಿಧರ್: ಕೆ ಎಚ್ ಮುನಿಯಪ್ಪ

1 year ago

ಕೋಲಾರ: ಕೋಲಾರ ಜಿಲ್ಲೆ ನನ್ನ ಕರ್ಮಭೂಮಿಯಾಗಿದ್ದು, ನಾನು ರೈಲ್ವೆ ಸಚಿವನಾಗಿದ್ದ ಸಂದರ್ಭದಲ್ಲಿ ಬಿಸನತ್ತಂ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಿದ್ದೆ. ಅದೇ ರೀತಿ ಕುಪ್ಪಂ–ಮಾರಿಕುಪ್ಪಂ ರೈಲ್ವೆ ಹಳಿಗಳ ಜೊಡಣೆ ಕಾಮಗಾರಿಗೂ ಕ್ಯಾಬಿನೆಟ್‌ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದೆ. ಆದರೆ, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಶೀಘ್ರ ಪೂರ್ಣಗೊಳ್ಳುವ ಕಡೆ ಸಂಸದ ಮಲ್ಲೇಶಬಾಬು ಗಮನಹರಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡ ಹಾಗೂ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,  ತಿರುಪತಿ–ಮುಳಬಾಗಿಲು, ಕಡಪ–ಮದನಪಳ್ಳಿ–ಶ್ರೀನಿವಾಸಪುರ, ಕೋಲಾರ–ವೈಟ್‌ಫೀಲ್ಡ್ ರೈಲು ಮಾರ್ಗಗಳ ಸರ್ವೇ ನಡೆಸಲಾಗಿದ್ದರೂ, ಇಂದಿಗೂ ಯಾವುದೇ ಪ್ರಗತಿ ಕಂಡಿಲ್ಲ. ಹಾಗೆಯೇ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅಸ್ತು ನೀಡಿದ್ದರೂ ನಂತರ ಯಾವ ಹಂತದಲ್ಲಿದೆ ಎಂಬುದು ತಿಳಿದಿಲ್ಲ ಎಂದರು.

ಈ ಭಾಗದ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ನಾನು ಕೈಗಾರಿಕಾ ಕಾರಿಡಾರ್ ಯೋಜನೆಯ ನೀಲನಕ್ಷೆ ತಯಾರಿಸಿದ್ದೆ. ಅಂದು ಹಾಕಿದ ಅಡಿಗಲ್ಲಿಗೆ ಇಂದು ಜೀವ ಬಂದಿರುವುದು ಸಂತೋಷದ ಸಂಗತಿ. ಕೈಗಾರಿಕಾ ಕ್ರಾಂತಿ ಉಂಟುಮಾಡುವ ಕನಸನ್ನು ನನಸಾಗಿಸಲು ಶಾಸಕಿ ರೂಪ ಶಶಿಧರ್ ಮುಂದಾಗಿರುವುದು ನನಗೆ ನೆಮ್ಮದಿ ತಂದಿದೆ ಎಂದರು.

ಕೋಲಾರ ಸಂಸದ ಮಲ್ಲೇಶಬಾಬು, ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಮತ್ತು ರಾಜ್ಯ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವತ್ತ ವಿಶೇಷ ಗಮನಹರಿಸಬೇಕಾಗಿದೆ ಎಂದರು.

Leave a Reply