ರಾಜ್ಯ ಸರ್ಕಾರ ಈಗಾಗಲೇ ಚಾಮುಂಡಿ ಬೆಟ್ಟದ ದೇವಸ್ಥಾನ, ಮಲೆ ಮಹದೇಶ್ವರ ದೇವಸ್ಥಾನ, ಮತ್ತಷ್ಟು ದೇವಾಲಯಗಳಿಗೆ ಪ್ರಾಧಿಕಾರಗಳನ್ನ ರಚಿಸಿ ಅವುಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ವಿಶೇಷವಾಗಿ ಶ್ರೀರಾಮಲಿಂಗಾರೆಡ್ಡಿಯವರು ಮುಜರಾಯಿ ಇಲಾಖೆ ಸಚಿವರಾದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ದೇವಾಲಯಗಳ ವಿಚಾರದಲ್ಲಿ ನಡೆಯುತ್ತಿವೆ. ಈಗ ಇಂತಹದೇ ಮತ್ತೊಂದು ಅಭಿವೃದ್ಧಿಯ ಕಾರ್ಯ ಮೈಸೂರಿನ ನಂಜನಗೂಡಿನ ನಂಜನಗೂಡು ದೇವಾಲಯಕ್ಕೂ ಆಗಬೇಕಾಗಿದೆ.
ಅತ್ಯಂತ ಐತಿಹಾಸಿಕ ಮತ್ತು ಪವಿತ್ರವಾದ ನಂಜನಗೂಡಿನ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬಂದು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಈ ದೇವಾಲಯದಲ್ಲಿ ಒಳಗಡೆ ಬೆಳಕಿನ ಕೊರತೆ ಇದೆ, ಸ್ವಚ್ಛತೆಯ ನಿರ್ಲಕ್ಷ್ಯವಿದೆ, ದೇವಾಲಯದ ಒಳಗಡೆ ಹಲವಾರು ಸಾಮಗ್ರಿಗಳನ್ನು ಯಾವುದೇ ಶಿಸ್ತು ಇಲ್ಲದೆ ಹರಡಿರುತ್ತಾರೆ.
ದೇವರ ಅಭಿಷೇಕದ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲ, ದೇವಾಲಯದ ಕಲ್ಲಿನ ಕಂಬಗಳು ಮತ್ತು ಒಳಗಡೆ ಸಾಕಷ್ಟು ಅಶುದ್ಧವಾಗಿದೆ. ದೇವಾಲಯದ ಹೊರಗಡೆಯೂ ಸಹ ಸ್ವಚ್ಛತೆಯ ಕೊರತೆ ಇದೆ. ದೇವಾಲಯದ ಒಳಗಡೆ ನೂರಾರು ವಿಗ್ರಹಗಳಿದ್ದು ಆ ವಿಗ್ರಹಗಳಿರುವ ಮಂಟಪಗಳು ಸಹ ಕೆಲವು ಕಡೆ ಶಿಥಿಲಗೊಂಡಿದೆ ಮತ್ತು ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಸಚಿವರು ನಂಜನಗೂಡಿನ ದೇವಾಲಯದ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ ಕೂಡಲೇ ಅನುಷ್ಠಾನಗೊಳಿಸಬೇಕು. ಸಾಧ್ಯವಾಗುವುದಾದರೆ ನಂಜನಗೂಡಿನ ದೇವಸ್ಥಾನಕ್ಕೂ ಸಹ ಒಂದು ಪ್ರಾಧಿಕಾರವನ್ನು ರಚಿಸಿ ಮತ್ತಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕು.
– ಕೆ ಎಸ್ ನಾಗರಾಜ್, ಬೆಂಗಳೂರು



