ಐತಿಹಾಸಿಕ ದೇವಾಲಯ ಕೆಡವಿದ ಸಾಧನೆಗಾಗಿ RSS ಸಮಾವೇಶವೇ?: ರಾಮಲಿಂಗಾರೆಡ್ಡಿ

5 years ago

ಬೆಂಗಳೂರು: ಐತಿIndian National Congress – Karnataka Indian National Congress Bharatiya Janata Party (BJP) BJP Karnataka Chief Minister of Karnataka Basavaraj Bommai #Karnataka #Temples #TemplesDemolition #INCIndia #INCKarnataka #BJP #RSSಹಾಸಿಕ ದೇವಾಲಯ ಕೆಡವಿದ ಸಾಧನೆಗಾಗಿ RSS ಸಮಾವೇಶವೇ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಮುಂದಾಗಿ ರಾಜ್ಯದ ನಂಜನಗೂಡು ಸೇರಿದಂತೆ ಇತರೆಡೆ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಭಾಗವಾಗಿ ನಂಜನಗೂಡಿನಲ್ಲಿದ್ದ ದೇಗುಲವನ್ನು ತೆರವುಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಗುಲ ಧ್ವಂಸದ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಧಾರ್ಮಿಕ ಕ್ಷೇತ್ರ ಮೈಸೂರಿನ ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹಾದೇವಮ್ಮ ದೇವಾಲಯವನ್ನು ಬಿಜೆಪಿಯ ಸರ್ಕಾರ ಅಮಾನುಷವಾಗಿ ಕೆಡವಿಹಾಕಿದೆ. 600 ವರ್ಷಗಳ ವೀರಗಲ್ಲಿನ ಇತಿಹಾಸವಿರೋ ಈ ದೇವಾಲಯದ ನಾಶ ಈ ನೆಲದ ಸಂಸ್ಕೃತಿಯ ನಾಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕ, ತಾಲ್ಲೂಕು ಪಂಚಾಯತ್ ಸದಸ್ಯ, ಸಂಸದ, ಸರ್ಕಾರ ಎಲ್ಲವೂ ಬಿಜೆಪಿಯವರೇ ಆಗಿದ್ದಾರೆ. ಧರ್ಮ ರಕ್ಷಕರು ಎಂದು ರಾಜಕಾರಣ ಮಾಡುತ್ತಿದ್ದ ಬಿಜೆಪಿಯವರ ಮುಖವಾಡ ಈ ಪ್ರಕರಣದಿಂದ ಕಳಚಿ ಬಿದ್ದಿದೆ ಎಂದಿದ್ದಾರೆ.

2009ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಾಗಿದ್ದರೂ ಹಿಂದಿನ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ದೇವಾಲಯಗಳನ್ನು ರಕ್ಷಿಸಲು ಹೆಚ್ಚಿನ ಮಹತ್ವ ಕೊಟ್ಟಿತ್ತು. ಇದೀಗ ಬಿಜೆಪಿಯವರ ಬಣ್ಣ ಬಟಾಬಯಲಾಗಿದೆ. ಬದಲಿ ನಿವೇಶನ ನೀಡಲು ಸರ್ಕಾರ ಮುಂದಾದರೂ ಯಾರಿಂದಲೂ ಮಾಡಲು ಅಸಾಧ್ಯವಾದ ದೇವಾಲಯದ ವಾಸ್ತುಶಿಲ್ಪವನ್ನು ಮರು ಸ್ಥಾಪಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ದೇವಾಲಯವನ್ನು ಕೆಡವಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಜೆಪಿ ಸರ್ಕಾರ ಕೆಡವಿದೆ. ಇನ್ನು ಸಂಘಪರಿವಾರದವರು ಸೆಪ್ಟೆಂಬರ್ 16ರಂದು ಮೈಸೂರಿನಲ್ಲಿ ಪ್ರತಿಭಟನೆ ಯಾರ ವಿರುದ್ದ ನಡೆಸಲಿದ್ದಾರೆ ? ಇದು ಪ್ರತಿಭಟನಾ ಸಮಾವೇಶವೇ ಅಥವಾ ಈ ಸಮಾವೇಶ ದೇವಾಲಯ ಕೆಡವಿದ ಸಾಧನೆಗಾಗಿಯೇ ಎಂದು RSS ಸ್ಪಷ್ಟಪಡಿಸಲಿ ಎಂದು ಸವಾಲೆಸೆದಿದ್ದಾರೆ.

ಇನ್ನಾದರೂ ರಾಜ್ಯದ ಜನ ನಿರ್ಧರಿಸಲಿ ನಿಜವಾದ ಹಿಂದೂ, ದೇವಾಲಯ ಉಳಿಸಿದ ಕಾಂಗ್ರೆಸ್ ಪಕ್ಷವೋ ಅಥವಾ ದೇವಾಲಯ ಕೆಡವಿದ ಬಿಜೆಪಿಯೋ? ಎಂದು ಅವರು ಹೇಳಿದ್ದಾರೆ.

Leave a Reply