ಕಪ್ಪುಚಿರತೆ ದತ್ತು ಪಡೆದ ನಂಜನಗೂಡು ಶಾಸಕ ಹರ್ಷವರ್ಧನ್ 

3 years ago

ಗಂಧದಗುಡಿ ಚಿತ್ರ ಬಿಡುಗಡೆ ಹಾಗೂ ದಲಿತ್ ಪ್ಯಾಂಥರ್ಸ್ ಸ್ಮರಣಾರ್ಥ  ಕಪ್ಪುಚಿರತೆ ದತ್ತು ಪಡೆದ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್

ಮೈಸೂರು: ಕನ್ನಡ ಚಲನಚಿತ್ರರಂಗದ ಮೇರುನಟ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂದಧಗುಡಿ ಚಲನಚಿತ್ರದ ಬಿಡುಗಡೆ ಹಾಗೂ ದಲಿತ್ ಪ್ಯಾಂಥರ್ಸ್ ಸಂಘಟನೆ ಸ್ಮರಣಾರ್ಥ ಶಾಸಕ ಬಿ.ಹರ್ಷವರ್ಧನ್ ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಬ್ಲಾಕ್ ಪ್ಯಾಂಥರ್ ಅನ್ನು ದತ್ತು -ಪಡೆದಿದ್ದಾರೆ.

2022ರ ಅಕ್ಟೋಬರ್ 28ರಿಂದ ಮುಂದಿನ ವರ್ಷ 2023ರ ಅಕ್ಟೋಬರ್ 27ರವರೆಗೆ ಬ್ಲಾಕ್ ಪ್ಯಾಂಥರ್ (ಕಪ್ಪು ಚಿರತೆ) ದತ್ತು ಪಡೆದಿರುವ ಅವರು ಈ ಸಂಬಂಧ ಮೃಗಾಲಯ ಪ್ರಾಧಿಕಾರಕ್ಕೆ ₹50 ಸಾವಿರ ಚೆಕ್ ಪಾವತಿಸಿದ್ದಾರೆ.

ನಂಜನಗೂಡಿನಲ್ಲಿ ಈ ಕುರಿತು ನೀಡಿದ ಅವರು ಚಿತ್ರನಟ ಡಾ.ಪುನೀತ್ ರಾಜಕುಮಾರ್ ಅವರು ಕನ್ನಡನಾಡು ನುಡಿಯ ಹಿರಿಮೆಯನ್ನು ಸಾರುವ ಜೊತೆಗೆ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು. ಪುನೀತ್ ರಾಜಕುಮಾರ್ ಅವರು ಅಭಿನಯಿಸಿರುವ ಕೊನೆಯ ಚಿತ್ರ ಗಂದಧಗುಡಿ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದರು.

ಚಿತ್ರ ಬಿಡುಗಡೆ ಸವಿನೆನಪಿನಲ್ಲಿ ಹಾಗೂ 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಯುವ ಜನ ದಲಿತ್ ಪ್ಯಾಂಥರ್ ಮೂಮೆಂಟ್ ಪ್ರಾರಂಭಿಸಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿ ಭಾರತದ ರಾಜಕೀಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದರು ಹೀಗಾಗಿ ದಲಿತ್ ಪ್ಯಾಂಥರ್ ಸಂಘಟನೆಯ ಸ್ಮರಣಾರ್ಥ ಮೈಸೂರು ಮೃಗಾಲಯದಲ್ಲಿ ಬ್ಲಾಕ್ ಪ್ಯಾಂಥರ್ (ಕಪ್ಪು ಚಿರತೆ) ಪ್ರಾಣಿಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಲಾಗಿದೆ ಎಂದರು.

ಮನುಷ್ಯರಂತೆ ಪ್ರಾಣಿ ಪಕ್ಷಿಗಳೂ ಸಹ ಜೀವಿಸುವ ಹಕ್ಕನ್ನು ಹೊಂದಿದ್ದು ಮೈಸೂರು ಮೃಗಾಲಯದಲ್ಲಿ ದೇಶ ವಿದೇಶಗಳ ಹಲವು ಪ್ರಭೇದದ ಪ್ರಾಣಿ ಪಕ್ಷಿಗಳಿವೆ ಅವುಗಳನ್ನು ಮೈಸೂರು ಮೃಗಾಲಯದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ವಿಶ್ವದ ಹಲವೆಡೆ ಮೃಗಾಲಯಗಳಿದ್ದರೂ ಮೈಸೂರು ಮೃಗಾಲಯ ವಿಭಿನ್ನವಾಗಿದ್ದು ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ ಹೀಗಾಗಿ ಬ್ಲಾಕ್ ಪ್ಯಾಂಥರ್ ಪ್ರಾಣಿಯನ್ನು ಒಂದು ವರ್ಷಗಳ ಕಾಲದ ನಿರ್ವಹಣೆಯ ವೆಚ್ಚವನ್ನು ಪಾವತಿಸಿ ದತ್ತು ಸ್ವೀಕರಿಸಿದ್ದೇನೆ ಎಂದರು.

Leave a Reply