ಮೈಸೂರು ದೊರೆ ಹಜರತ್ ಹೈದರಾಲಿ ಖಾನ್ ಮತ್ತು ಆತನ ಹೆಂಡತಿ ಫಾತಿಮಾಬಿ ಅವರು, ಪುತ್ರ ಸಂತಾನಕ್ಕಾಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಯ ಜೀವಸಮಾಧಿಗೆ ಮೊರೆ ಹೋದರು. ಹಟ್ಟಿ ತಿಪ್ಪೇಸ್ವಾಮಿಯ ಅನುಗ್ರಹದಿಂದ ಪಡೆದ ಮಗನಿಗೆ ತಿಪ್ಪೇಸುಲ್ತಾನ್ ಎಂಬ ಹೆಸರು ಕಟ್ಟಿದರು. ಹೀಗೆ ಟಿಪ್ಪೂ ಸುಲ್ತಾನ್ ಹುಟ್ಟನ್ನು ಪವಾಡೀಕರಿಸಿ ಹೇಳುವ ಜಾನಪದ ಕಥೆಯೊಂದು ಪ್ರಚಲಿತದಲ್ಲಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಗುಡಿ, ಚರ್ಚು, ದರ್ಗಾ, ಬಸದಿ, ಜೀವಸಮಾಧಿ ಮುಂತಾದವುಗಳಿಗೆ ಭಾವಿಕರು ಹರಕೆ ಹೊತ್ತು ಧಾರ್ಮಿಕ ಶ್ರದ್ಧೆಯನ್ನು ತೋರಿಸುವಂತೆಯೇ ಹೈದರ್ – ಫಾತಿಮಾ – ಟಿಪ್ಪೂ ಕೂಡಾ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದರು. ಅವರ ಧಾರ್ಮಿಕ ಶ್ರದ್ಧೆಯು ಯಾವತ್ತೂ ಅನ್ಯ ಧರ್ಮೀಯರ ಭಾವನೆಗಳನ್ನು ಮತೀಯ ಸಂಘರ್ಷಕ್ಕೆಳೆಸಲು ಪ್ರಚೋದಿಸಲಿಲ್ಲ. ಬದಲಾಗಿ ಪರಸ್ಪರ ಅನ್ಯ ಧರ್ಮೀಯರನ್ನು ಸೌಹಾರ್ದತೆಯಿಂದ ಒಂದೆಡೆ ಬೆಸೆಯುವ ಬಗೆಯದ್ದಾಗಿತ್ತು.
ವೈಜ್ಞಾನಿಕ ಅಥವಾ ಚಾರಿತ್ರಿಕ ಸತ್ಯಾಸತ್ಯತೆ ಏನೇ ಇರಲಿ ನಾಯಕನಹಟ್ಟಿ ತಿಪ್ಪೇಸ್ವಾಮಿಯನ್ನು ಮೊರೆಹೋಗಿ ಪ್ರಾರ್ಥಿಸಿದ ಬಳಿಕ ಹೈದರಾಲಿ ಮತ್ತು ಫಾತಿಮಾ ದಂಪತಿಗೆ ಗಂಡುಮಗು ಹುಟ್ಟಿದನೆಂದು, ಆ ಮಗುವಿಗೆ ತಿಪ್ಪೇ ಸುಲ್ತಾನ್ ಎಂಬ ಹೆಸರು ಕರೆದರೆಂದು ಜನಪದರು ಕಟ್ಟಿರುವ ಐತಿಹ್ಯದಿಂದ ನಮಗೆ ತಿಳಿದುಬರುತ್ತದೆ.

ಹಟ್ಟಿ ತಿಪ್ಪಯ್ಯನ ಜೀವಸಮಾಧಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದ ದೊರೆ ಹೈದರಾಲಿಯು ನಾಯಕನಹಟ್ಟಿ ತಿಪ್ಪೇಸ್ವಾಮಿಯ ಹೊರಮಠದ (ತಿಪ್ಪೇಸ್ವಾಮಿಯ ಜೀವಸಮಾಧಿ) ಗುಡಿಯನ್ನು ಗುಂಬಜ್ ಮಾದರಿಯಲ್ಲಿ ಕಟ್ಟಿಸುತ್ತಾನೆ. ಆ ಮೂಲಕ ದೇಶಿ ಯೋಗ ಸಾಧಕರ- ತತ್ವಪದಕಾರರ ನೆಲೆಯನ್ನಾಗಿ ನಾಯಕನಹಟ್ಟಿಯನ್ನು ಅಭಿವೃದ್ಧಿಪಡಿಸುತ್ತಾನೆ. ಪ್ರತಿವರ್ಷ ನಾಯಕನಹಟ್ಟಿಯಲ್ಲಿ ನಡೆಯುವ ಜಾತ್ರೆ ಮತ್ತು ರಥೋತ್ಸವದಲ್ಲಿ ಸರ್ವ ಧರ್ಮಗಳ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಹಟ್ಟಿ ತಿಪ್ಪೇಸ್ವಾಮಿಯ ಜೀವಸಮಾಧಿಯು (ಗುಡಿ) ಧಾರ್ಮಿಕ ಸಾಮರಸ್ಯದ ತಾಣವಾಗಿ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದೆ.
ಇದು ಹೈದರಾಲಿ ಖಾನ್ ನೀಡಿದ ಕೊಡುಗೆ. ಅಪ್ಪನಿಂದ ಬಳುವಳಿಯಾಗಿ ಬಂದ ಅನ್ಯಧರ್ಮ ಸಮತಾ ಭಾವವನ್ನು ಟಿಪ್ಪೂ ಸುಲ್ತಾನ್ ತನ್ನ ಆಡಳಿತದಲ್ಲಿ ಅಳವಡಿಸಿಕೊಂಡು ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಕೊಡುಗೆಗಳನ್ನು ನೀಡುತ್ತಲೂ ಸ್ವಯಂ ಧಾರ್ಮಿಕ ಶ್ರದ್ಧೆ ತೋರುತ್ತಲೂ ಪೋಷಿಸುತ್ತಾನೆ. ಇಂತಹ ನಡೆಗಳ ಮೂಲಕ ಧಾರ್ಮಿಕ ವೈರಭಾವನೆಗಳ ಕಂದಕಗಳನ್ನು ಮುಚ್ಚಿಹಾಕಿದ್ದಾರೆ ಹೈದರಾಲಿ ಖಾನ್ ಮತ್ತು ಟಿಪ್ಪೂ ಸುಲ್ತಾನ್.
ಎಲ್ಲರಿಗೂ ‘ಮೈಸೂರು ಹುಲಿ’ ಟಿಪ್ಪೂ ಸುಲ್ತಾನ್ ಜಯಂತಿಯ ಶುಭಾಶಯಗಳು
– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ, 8722724174




