200ರ ಹುಣ್ಣಿಮೆ ಹಾಡು ಸಂಭ್ರಮಾಚರಣೆ
ಬೆಂಗಳೂರು: ಮಲ್ಲೇಶ್ವರದ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗ (ರಿ) ವತಿಯಿಂದ, ನೆಲ ಜಲ ಹಸಿರು ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ನಮ್ಮ ಧೈಯದಲ್ಲಿ ನೀವೂ ಭಾಗಿಯಾಗಿ ಅಭಿಯಾನದಡಿ, ಸಾಂಸ್ಕೃತಿಕ ದಾಖಲೆ ಬರೆದು ಬೆಳದಿಂಗಳ ಬೆಸದ 200ರ ಹುಣ್ಣಿಮೆ ಹಾಡು, 2024 ರ ನವೆಂಬರ್ 15 ರಿಂದ 18 ರವರೆಗೆ 8ನೇ ರೈತಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ, ಕನ್ನಡ ರಾಜ್ಯೋತ್ಸವ ಸ್ವಾಭಿಮಾನ ಆಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂರ ಮತ್ತು ಸಮಾಜ ಸೇವಕ ಅನೂಪ್ ಅಯ್ಯಂಗಾರ್ ಕಾರ್ಯಕ್ರಮದ ಮಾಹಿತಿ ನೀಡಿದರು. ಪದಾಧಿಕಾರಿಗಳಾದ ಚಂದ್ರಶೇಖರ್ ನಾಯ್ಡು, ಶ್ರೀವಲ್ಲಭ, ಚಂದ್ರಮೌಳಿ, ಎಲ್.ಎನ್.ಪ್ರಭು, ರಾಜಶಶಿಧರ್, ಡಾ. ಲೀಲಾ ಸಂಪಿಗೆ, ಹೇಮಂತ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ಶಿವರಾಂ, ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕು. ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಜನವರಿ 30, 2010ರಲ್ಲಿ ಹುಣ್ಣಿಮೆ ಹಾಡು ಕಾರ್ಯಕ್ರಮ ಆರಂಭಿಸಲಾಯಿತು. 14 ವರ್ಷಗಳ ಕಾಲ ಸಾಗಿ ಬಂದಿದೆ. 2024ರ ನವಂಬರ್ ನಲ್ಲಿ 200ನೇ ಹುಣ್ಣಿಮೆ ಹಾಡಿನ ಕಾರ್ಯಕ್ರಮ ಸಂಭ್ರಮಾಚರಣೆ ನಡೆಯಲಿದೆ ಎಂದರು.
ಯಕ್ಷಗಾನ, ನಾಟಕ, ಕರ್ನಾಟಕ ಸಂಗೀತ, ಬುಡಕಟ್ಟುಗಳ ಕಲಾಪ್ರದರ್ಶನ, ವಚನಗಾಯನ, ನೃತ್ಯ ನೂರಾರು ಕಾರ್ಯಕ್ರಮಗಳ ಹುಣ್ಣಿಮೆ ಹಾಡಿನಲ್ಲಿ ಕಲಾವಿದರು ಕಲಾ ಪ್ರದರ್ಶನ ಮಾಡಿದ್ದಾರೆ. ಜನರಿಗೆ ಅರಿವು ಮೂಡಿಸುವ ಜೊತೆಯಲ್ಲಿ ಕಲಾವಿದರಿಗೂ ಪ್ರೋತ್ಸಾಹ, ಸಹಕಾರ ನೀಡಲಾಗುತ್ತಿದೆ ಎಂದರು
ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಯಂತೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಪ್ರಸಿದ್ಧಿ ಪಡೆದಿದೆ. ಕಳೆದ 8 ವರ್ಷಗಳಿಂದ ಕಡಲೆಕಾಯಿ ಪರಿಷೆ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಿಂದ ರೈತರು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ. ರೈತರು, ಬೀದಿ ಬದಿಯ ವ್ಯಾಪಾರಿಗಳಿಗೆ 400ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಪರಿಸರ ಸ್ನೇಹಿ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತ, ಕೈ ಬಟ್ಟೆ ಚೀಲ, ಪೇಪರ್ ಕವರ್ ಗಳನ್ನು ಬಳಸಿ ಎಂದು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೆ. ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಹಾಗೂ ಬಂದ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ನೂರಾರು ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
15-11-2024ರ ಶುಕ್ರವಾರ 4-30ಕ್ಕೆ ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ಉದ್ಘಾಟನೆ ಮಾಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಿನಾಂಕ 15.11.2024ನೇ ಶುಕ್ರವಾರ ಸಂಜೆ 6.30ಕ್ಕೆ
ಹುಣ್ಣಿಮೆ ಹಾಡು-200
“ಹರಿದಾಸ-ಶಿವಶರಣ ಸಂಗಮ” (ಹಿಂದುಸ್ತಾನಿ – ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ)
ಪಂಡಿತ್ ರವೀಂದ್ರ ಸೊರಗಾಂವಿ, ಹಿಂದುಸ್ತಾನಿ ಶಾಸ್ತ್ರೀಯ ಕಲಾವಿದರಿಂದ “ವಚನ ಗಾಯನ” ವಿದ್ವಾನ್ ಸಾಯಿತೇಜಸ್ ಚಂದ್ರಶೇಖರ್, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಂದ
“ದಾಸರ ಪದಗಳು”
ಮುಖ್ಯ ಅತಿಥಿಗಳು ಡಾ.ಅನುಸೂಯ ಕುಲಕರ್ಣಿ, ಕರ್ನಾಟಕದ ಹೆಮ್ಮೆಯ ಹಿರಿಯ ಗಾನ ಕಲಾ ಭೂಷಣ
ದಿನಾಂಕ 16.11.2024ನೇ ಶನಿವಾರ ಸಂಜೆ 6.30ಕ್ಕೆ ಹುಣ್ಣಿಮೆ ಹಾಡು-201
ಬೆಳದಿಂಗಳ ಬೆಸದ ಹುಣ್ಣಿಮೆ ಹಾಡು 200 ರ ಸಂಭ್ರಮದಲ್ಲಿ ಡಾ.ಹಂಸಲೇಖ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಮುಖ್ಯ ಅತಿಥಿ: ನೇತ್ರಪಾಲ್ , ಹೆಚ್ಚುವರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ.
ದಿನಾಂಕ 17.11.2024ನೇ ಭಾನುವಾರ ಬೆಳಗ್ಗೆ 11.00ಕ್ಕೆ
ಹುಣ್ಣಿಮೆ ಹಾಡು-202 ಮಧು ಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ “ಅಪರೂಪದ ಭಾವಗೀತೆಗಳ ಕಾರ್ಯಕ್ರಮ
ಮುಖ್ಯ ಅತಿಥಿಗಳು ಶ್ರೀ ಬಾಲಚಂದ್ರ ರಾಜ್‌ಹನ್ಸ್ ಎಂಟರ್‌ಪ್ರೈಸಸ್
ಕಾರ್ಯಕ್ರಮದ ಪ್ರಾಯೋಜಕರು: ಎಸ್. ಪ್ರಕಾಶ್ ಅಯ್ಯಂಗಾರ್. ಸಮಾಜ ಸೇವಕರು, ಮಲ್ಲೇಶ್ವರ, ಬೆಂಗಳೂರು
ದಿನಾಂಕ 17.11.2024ನೇ ಭಾನುವಾರ ಸಂಜೆ 6.30ಕ್ಕೆ ಹುಣ್ಣಿಮೆ ಹಾಡು-203 ಸೃಷ್ಟಿ ನಿರಂತರ ಮತ್ತು ತಂಡದವರಿಂದ “ಡಾ. ರಾಜ್ ನೆನಪಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ”
ಮುಖ್ಯ ಅತಿಥಿಗಳು: ದೊಡ್ಡಣ್ಣ, ಹಿರಿಯ ಕನ್ನಡ ಚಲನಚಿತ್ರ ನಟರು
ದಿನಾಂಕ 18.11.2024ನೇ ಸೋಮವಾರ ಸಂಜೆ 4.30ಕ್ಕೆ
ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯವರಿಗೆ “ಕಡಲೆಕಾಯಿ ಅಭಿಷೇಕ”
ದಿನಾಂಕ 18.11.2024ನೇ ಸೋಮವಾರ ಸಂಜೆ 6.00ಕ್ಕೆ
ಹುಣ್ಣಿಮೆ ಹಾಡು-204
ಭಾರತದ ಪ್ರಸಿದ್ಧ ಸಾರಂಗಿ ವಾದಕರು ಹಾಗೂ ಹಿಂದುಸ್ತಾನಿ ಗಾಯಕರಾದ ಉಸ್ತಾದ್ ಫಯಾಜ್‌ಖಾನ್ ರವರಿಂದ “ಸಾರಂಗಿ ವಾದನ ಹಾಗೂ ಸಂಗೀತ ಕಾರ್ಯಕ್ರಮ
ಮುಖ್ಯ ಅತಿಥಿ: ಬಿ.ಕೆ. ಹರಿಪ್ರಸಾದ್, ವಿಧಾನಪರಿಷತ್ ಸದಸ್ಯರು
ಗಣೇಶ ಅಮೀನಗಡ, ಹಿರಿಯ ಪತ್ರಕರ್ತರು ಹಾಗೂ ಲೇಖಕರು
ಪುಸ್ತಕ ಬಿಡುಗಡೆ : ಸಾರಂಗಿ ನಾದದ ಬೆನ್ನೇರಿ (ಉಸ್ತಾದ್ ಫಯಾಜ್ ಖಾನ್ ಜೀವನಕಥನ) ಲೇಖಕರು: ಗಣೇಶ ಅಮೀನಗಡ, ಡಾ. ಸಿ.ಬಿ. ಚಿಲ್ಲರಾಗಿ




