- ಬಿಜೆಪಿ ಕರ್ನಾಟಕ ಶತ್ರು ಅದಕ್ಕೆ ಸೋಲಬೇಕು. ನಮ್ಮ ರಾಜ್ಯದಿಂದ ಮೋದಿ ಸರ್ಕಾರ 4.5 ಲಕ್ಷ ಕೋಟಿ ತೆರಿಗೆ ದೋಚಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಕೇವಲ 50 ಸಾವಿರ ಕೋಟಿ ವಾಪಸ್ಸು ಕೊಡುತ್ತಾರೆ. ನಾವು 100 ರೂ ಕೊಟ್ಟರೆ ನಮಗೆ 11.5 ರೂಪಾಯಿ ಮಾತ್ರ ಕೊಡುತ್ತಾರೆ. ಇದು ಯಾವ ನ್ಯಾಯ. ರೈತರಿಗೆ ಬರ ಪರಿಹಾರ ಕೊಡಲಿಲ್ಲ. ಜನಕ್ಕೆ ಮನೆ ಕೊಡಲಿಲ್ಲ. ಬೆಂಗಳೂರಿನ ಜನರಿಗೆ ಮೇಕೆದಾಟು ಯೋಜನೆ ಕೊಡಲಿಲ್ಲ. ಕಿತ್ತೂರು ಕರ್ನಾಟಕದ ಜನರಿಗೆ ಮಹದಾಯಿ ಯೋಜನೆ ಕೊಡಲಿಲ್ಲ. ಬೆಂಗಳೂರಿನ ಫೆರಿಫೆರಲ್ ರಿಂಗ್ ರೋಡಿಗೆ ಹಣ ಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದರು. ನಮ್ಮ ರಾಜ್ಯದ ಹೆಮ್ಮೆಯ ಎಲ್ಲಾ ಬ್ಯಾಂಕುಗಳನ್ನು ಕಿತ್ತುಕೊಂಡು ಮಾರವಾಡಿಗಳಿಗೆ ಸಾಲ ಕೊಟ್ಟು ದಿವಾಳಿಯಾಗಿದ್ದ ಉತ್ತರ ಭಾರತದ ಬ್ಯಾಂಕುಗಳ ಜೊತೆ ಮರ್ಜ್ ಮಾಡಿದರು. ಇದರಿಂದ 317 ಲಕ್ಷ ಕೋಟಿಗೂ ಹೆಚ್ಚಿನ ನಮ್ಮ ರಾಜ್ಯದ ಮೂಲದ ಸಂಪತ್ತು ಕೈ ತಪ್ಪಿ ಹೋಯಿತು. ಸುಮಾರು 1.5 ಲಕ್ಷ ಉದ್ಯೋಗಗಳು ನಮ್ಮ ರಾಜ್ಯದ ಯುವಜನರ ಕೈ ತಪ್ಪಿ ಹೋದವು. ಕರ್ನಾಟಕ ದ್ರೋಹಿ ಬಿಜೆಪಿ ಯಾವ ಕಾರಣಕ್ಕೂ ಗೆಲ್ಲಬಾರದು. ಜನತಾ ದಳವೂ ಬಿಜೆಪಿಯ ಜೊತೆ ಸೇರಿಕೊಂಡಿದೆ. ಹಾಗಾಗಿ ಎರಡನ್ನೂ ಸೋಲಿಸಿ ಮನೆಗೆ ಕಳಿಸಬೇಕು. ಇದು ಕರ್ನಾಟಕದ ಅಳಿವು ಉಳಿವಿನ ಪ್ರಶ್ನೆ.
- ಬಿಜೆಪಿ ರೈತರಿಗೆ ದ್ರೋಹ ಬಗೆದ ಪಕ್ಷ ಅದಕ್ಕೆ ಸೋಲಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಎಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೆ ಗೋಲಿಬಾರ್ ಮಾಡಿ 700 ಜನ ರೈತರನ್ನು ಕೊಂದರು. ಕರ್ನಾಟಕದಲ್ಲಿ ಎಪಿಎಂಸಿ ಕಾಯ್ದೆಯನ್ನು ಹಾಳು ಮಾಡಿದರು. ಇದರಿಂದ ಕೊಬ್ಬರಿಯಿಂದ ಹಿಡಿದು ಎಲ್ಲ ಬೆಳೆಗಳ ಬೆಲೆಗಳು ಪಾತಾಳಕ್ಕೆ ಕುಸಿದಿವೆ. ಅಡಿಕೆ, ಮೆಣಸುಗಳಿಗೆ ಇಲ್ಲಿ ಬೆಲೆ ಬಿದ್ದು ಹೋಗಿದೆ. ಆದರೆ ಶ್ರೀಲಂಕಾ, ಬರ್ಮಾ, ವಿಯೆಟ್ನಾಂಗಳಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ನವರು ಸಹ ಬಿಜೆಪಿ ಜೊತೆ ಸೇರಿ ಎಪಿಎಂಸಿ ಕಾಯ್ದೆಯನ್ನು ಹಾಳುಮಾಡಿದ ಪಾಪ ಹೊತ್ತಿದ್ದಾರೆ. ಇದರ ಜೊತೆಗೆ 79 ಎ ಮತ್ತು ಬಿ ಬಿಜೆಪಿ ಸರ್ಕಾರ ತಿದ್ದುಪಡಿ ತಂದ ಕಾರಣ ರೈತರು ಭೂಮಿ ಕೊಂಡುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸಕ್ಕರೆ ಮುಂತಾದ ಕೃಷಿ ಉತ್ಪನ್ನಗಳ ರಫ್ತು ನಿಲ್ಲಿಸಿದ್ದಾರೆ. ಇದರಿಂದ ರೈತರಿಗೆ ನ್ಯಾಯವಾಗಿ ಸಿಗಬೇಕಾದ ಬೆಲೆಗಳು ಸಿಗುತ್ತಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಆದರೆ ಖರ್ಚು ಮಾತ್ರ ದುಪ್ಪಟ್ಟಾಗಿದೆ. ಆದ್ದರಿಂದ ರೈತದ್ರೋಹಿಯಾದ ಬಿಜೆಪಿ ಸೋತರೆ ಮಾತ್ರ ರೈತರ ಏಳಿಗೆ ಸಾಧ್ಯ. ರೈತರ ಸಾಲ ಮನ್ನಾ, ಸೂಕ್ತ ಬೆಳೆ ವಿಮೆ, ಸೂಕ್ತ ಮಾರುಕಟ್ಟೆ ನೆರವು, ಎಂಎಸ್ಪಿ ಇವೆಲ್ಲ ಸಾಧ್ಯವಾಗಬೇಕಾದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೋಲಲೇಬೇಕು.
- ಬಿಜೆಪಿ-ದಳ ಯುವಜನರ ವಿರೋಧಿ ಪಕ್ಷಗಳು – ದೇಶದ ಇತಿಹಾಸದಲ್ಲಿಯೆ ಅತಿ ಹೆಚ್ಚು ನಿರುದ್ಯೋಗ ಮೋದಿಯವರ ಆಡಳಿತದಲ್ಲಿದೆ. 100 ಕ್ಕೆ 30 ರಷ್ಟು ಪದವೀಧರ ನಿರುದ್ಯೋಗಿಗಳು ದೇಶದಲ್ಲಿದ್ದಾರೆ. ನಮಗೆ ಉದ್ಯೋಗ ಕೊಡಿ ಎಂದರೆ ಮೋದಿ ಪಕೋಡ ಮಾರಿ ಎನ್ನುತ್ತಾರೆ. ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಅದಾನಿ-ಅಂಬಾನಿಗಳಿಗೆ ಕೊಟ್ಟಿದ್ದಾರೆ. ಇಂಥ ದುಷ್ಟ ಪ್ರಧಾನಿ ಹಾಗೂ ಯುವಜನರ ವಿರೋಧಿ ಬಿಜೆಪಿ ಹಾಗೂ ಅವರೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ರಾಜ್ಯ ಉಳಿಸಬೇಕು.
- ಬಿಜೆಪಿ – ದಳ ದಲಿತರು ಮತ್ತು ಹಿಂದುಳಿದವರ ವಿರೋಧಿ ಪಕ್ಷಗಳು. ಬಿಜೆಪಿಯ ರಕ್ತದಲ್ಲೆ ಬ್ರಾಹ್ಮಣ- ಬನಿಯಾ- ಮಾರವಾಡಿ ಹಿತಾಸಕ್ತಿಯ ಗುಣ ಇದೆ. ಬಿಜೆಪಿಯು ತಮ್ಮ ಬಜೆಟಗಳಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಕೊಡಬೇಕಾದ ಅನುದಾನ ಕೊಡದೆ ದ್ರೋಹ ಮಾಡಿದೆ. ಮಕ್ಕಳಿಗೆ ಸ್ಕಾಲರ್ಶಿಪ್ ನಿಲ್ಲಿಸಿದೆ. ಇದರ ಜೊತೆಗೆ ಸಂವಿಧಾನ ಬದಲಾಯಿಸುವ ಮಾತನ್ನಾಡುತ್ತಿದೆ. ಸಂವಿಧಾನ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಸಂವಿಧಾನ ವಿರೋಧಿಯಾದ ಬಿಜೆಪಿಯನ್ನು ಈ ಬಾರಿ ಸೋಲಿಸಲೇಬೇಕು.
- ಬಿಜೆಪಿ- ದಳ ಪಕ್ಷಗಳು ಮಹಿಳಾ ವಿರೋಧಿ ಪಕ್ಷಗಳು- ಬಿಜೆಪಿಯವರು ಮತ್ತು ದಳದ ನಾಯಕರು ನಿರಂತರವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೋದಿ- ಕುಮಾರಸ್ವಾಮಿಯವರು ಪೈಪೋಟಿ ಮೇಲೆ ಮಹಿಳೆಯರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಮನುವಾದಿಗಳು ಮೂಲತಃ ಮಹಿಳಾ ವಿರೋಧಿಗಳು. ಬಿಜೆಪಿ ಮನುವಾದಿ ಪಕ್ಷ. ಹೀಗಾಗಿ ಮನುವಾದವನ್ನು ಸೋಲಿಸಬೇಕಾದರೆ ಬಿಜೆಪಿ- ದಳಗಳು ಸೋಲಲೇಬೇಕು.
- ಮೋದಿ ಮತ್ತು ಬಿಜೆಪಿ ಬಡವರ ಶತ್ರುಗಳು- ದೇಶದ ಇತಿಹಾಸದಲ್ಲಿ ಎಂದೂ ಕಷ್ಟ ಪಡದಷ್ಟು ಪ್ರಮಾಣದಲ್ಲಿ ಜನರು ಬೆಲೆಯೇರಿಕೆಯಿಂದ ಕಷ್ಟಪಡುತ್ತಿದ್ದಾರೆ. 75 ರೂ ಇದ್ದ ಅಡುಗೆ ಎಣ್ಣೆ 200 ರೂ ಮುಟ್ಟಿದೆ. 20 ರೂ ಇದ್ದ ಅಕ್ಕಿ 65 ರೂಗೆ ಏರಿದೆ. 400 ರೂ ಇದ್ದ ಗ್ಯಾಸ್ 1100 ರೂಗೆ ಮುಟ್ಟಿತ್ತು. 46 ರೂ ಇದ್ದ ಡೀಸೆಲ್ 90 ರೂ ಮುಟ್ಟಿತ್ತು. 65ರೂ ಇದ್ದ ಪೆಟ್ರೋಲ್ 100 ರೂ ದಾಟಿತು. ಜನರ ಮೇಲೆ ತೆರಿಗೆ ಹೆಚ್ಚು ಮಾಡಿ ಅದಾನಿ- ಅಂಬಾನಿಗಳ ಮೇಲಿನ ಇಳಿಕೆ ಮಾಡಿದರು. ಶ್ರೀಮಂತರ 20 ಲಕ್ಷಕ್ಕೂ ಹೆಚ್ಚು ಕೋಟಿ ಸಾಲವನ್ನು ಮನ್ನಾ ಮಾಡಿದರು. ಮೋದಿ ಬರುವುದಕ್ಕೂ ಮೊದಲು ದುಡಿಯುವ ಜನರು 40 ರೂ ತೆರಿಗೆ ಕಟ್ಟುತ್ತಿದ್ದರೆ, ಶ್ರೀಮಂತರು 60 ರೂ ಕಟ್ಟುತ್ತಿದ್ದರು. ಈಗ ಶ್ರೀಮಂತರು 40 ರೂ ಕಟ್ಟುತ್ತಿದ್ದಾರೆ, ಬಡವರು 60 ರೂ ಕಟ್ಟುತ್ತಿದ್ದಾರೆ. ಬಡವರ ರಕ್ತ ಹೀರುತ್ತಿರುವ ಮೋದಿ ಸರ್ಕಾರ ಸೋಲಬೇಕು. ರಾಕ್ಷಸ ಬಿಜೆಪಿ ಜೊತೆ ಕೈ ಕೋಡಿಸಿರುವ ದಳದವರೂ ಸೋಲಬೇಕು. ಇಲ್ಲದಿದ್ದರೆ ದುಡಿಯುವ ಜನರಿಗೆ ಉಳಿಗಾಲವಿಲ್ಲ.
- ಮೋದಿ ಸರ್ಕಾರ ಕಾರ್ಮಿಕ ವಿರೋಧಿಯಾಗಿದೆ. ಕಾರ್ಮಿಕರನ್ನು ಕಂಪೆನಿಗಳಲ್ಲಿ ಪರ್ಮನೆಂಟ್ ಮಾಡದಂತೆ ಕಾನೂನು ತಂದಿದೆ. 8 ಗಂಟೆ ಬದಲಾಗಿ 12 ಗಂಟೆ ದುಡಿಯುವಂತೆ ಕಾನೂನು ತಂದಿದೆ. ದುಡಿಯುವ ಜಾಗದಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇಲ್ಲದಂತೆ ಮಾಡಿದ್ದಾರೆ. ಕಾರ್ಮಿಕರ ರಕ್ತ ಹೀರುವುದಕ್ಕಾಗಿಯೆ ಬಿಜೆಪಿ ಹುಟ್ಟಿದೆ. ಬಿಜೆಪಿ ಮಾಲೀಕರ ಪಕ್ಷವೇ ಹೊರತು ಕಾರ್ಮಿಕರ ಪಕ್ಷವಲ್ಲ. ಆದ್ದರಿಂದ ಈ ಪಕ್ಷವನ್ನು ಸೋಲಿಸಿ ತಿಪ್ಪೆಗೆ ಎಸೆಯಬೇಕು.
- ಮೋದಿ ಮತ್ತು ಅವರ ಪಟಾಲಂ ಕಳೆದ 10 ವರ್ಷಗಳಿಂದ ದೇಶದ ಜನರಿಗೆ ಬರೀ ಸುಳ್ಳನ್ನೇ ಹೇಳಿ ಯಾಮಾರಿಸಿಕೊಂಡು ಬಂದರು. ಇನ್ನು ದೇಶದ ಜನರು ಯಾವುದೇ ಕಾರಣಕ್ಕೂ ಮೋದಿಯ ಸುಳ್ಳುಗಳನ್ನು ಸಹಿಸಲು ತಯಾರಿಲ್ಲ. ನಮಗೆ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯ ಮುಖ್ಯ. ಆದುದರಿಂದ ಬಿಜೆಪಿಯನ್ನು ಮನೆಗೆ ಕಳುಹಿಸಲೇಬೇಕು.
- ಒಟ್ಟಾರೆ ಬಿಜೆಪಿಯು ದೇಶಕ್ಕೆ ದ್ರೋಹ ಬಗೆಯುತ್ತಿರುವ ಪಕ್ಷ- ಪುಲ್ವಾಮ ದುರಂತಕ್ಕೆ ನೇರ ಕಾರಣ ಮೋದಿ ಸರ್ಕಾರವೆಂದು ಬಿಜೆಪಿಯೆ ನೇಮಕ ಮಾಡಿದ್ದ ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ. ಚೀನಾ ದೇಶವು ನಮ್ಮ ದೇಶದ 2000 ಚ.ಕಿ. ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ವಾಪಸ್ಸು ಪಡೆಯಲು ಮೋದಿ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಸಾರ್ವಭೌಮತ್ವವನ್ನು ಮೂಲೆಗೊತ್ತಿ ಟ್ರಂಪ್ ಪರವಾಗಿ ಪ್ರಚಾರ ಮಾಡಿದರು. ದೇಶದ ಎಲ್ಲ ಸಂಪತ್ತು ಸೃಷ್ಟಿಸುವ ಜನರನ್ನು ಶೋಷಣೆ ಮಾಡಲಾಗುತ್ತಿದೆ. ದೇಶದ ಸಂಪತ್ತನ್ನೆಲ್ಲ ಕೇವಲ 100 ಜನರಿಗೆ ಧಾರೆಯೆರೆದು ಕೊಡುತ್ತಿದ್ದಾರೆ. ಆದ್ದರಿಂದ ದೇಶದ ಹಾಗೂ ನಾಡಿನ ಜನರು ಬದುಕಬೇಕಾದರೆ ಬಿಜೆಪಿ ಮತ್ತು ಅದರ ಜೊತೆ ಕೈಜೋಡಿಸಿರುವ ನಾಡದ್ರೋಹಿ ಜೆಡಿಎಸ್ ಕೂಡ ಸೋಲಬೇಕು.
ದಯವಿಟ್ಟು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಇದನ್ನು ಶೇರ್ ಮಾಡಿ



